Horoscope: ಕೆಲವರು ಜೀವನದಲ್ಲಿ ಎಷ್ಟೇ ಪ್ರಯತ್ನ ಪಟ್ಟರೂ ಅಂಥವರು ಸಿರಿವಂತರಾಗಲು ಸಾಾಧ್ಯವಾಗುವುದೇ ಇಲ್ಲ. ಒಂದಲ್ಲ ಒಂದು ರೀತಿಯ ಆರ್ಥಿಕ ಸಮಸ್ಯೆ ಅವರನ್ನು ಕಾಡುತ್ತಲೇ ಇರುತ್ತದೆ. ಆರೋಗ್ಯ ಸಮಸ್ಯೆ, ಮನೆಯಲ್ಲಿರುವ ವಸ್ತುಗಳು ಪದೇ ಪದೇ ಹಾಳಾಗುುದು, ಹೀಗೆ ಇತ್ಯಾದಿ ಆರ್ಥಿಕ ಅಡಚಣೆ ಬಂದು, ಅವರು ದುಡ್ಡು ಕೂಡಿಡಲು ಸಾಧ್ಯವಾಗುವುದೇ ಇಲ್ಲ. ಇದಕ್ಕೆಲ್ಲ ಕಾರಣ ಅಂದ್ರೆ, ಅವರ ಅದೃಷ್ಟ. ಕೆಲವರ ಅದೃಷ್ಟ ಕೆಟ್ಟಾಗ ಲಕ್ಷ್ಮೀ ಕೂಡ, ಅಂಥವರ ಮೇಲೆ ಕೃಪೆ ತೋರಿಸುವುದಿಲ್ಲ. ಆದರೆ ಇಂದು ನಾವು ಪ್ರಯತ್ನದ ಬಳಿಕ, ಬಹುಬೇಗ ಯಶಸ್ಸು ಸಾಧಿಸುವ, ಶ್ರೀಮಂತರಾಗುವ ರಾಶಿಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
ವೃಷಭ: ವೃಷಭ ರಾಶಿಯವರು ಜಾಲಿ ಸ್ವಭಾವದವರು. ಬಂದ ದುಡ್ಡನ್ನು ಪಡಾ ಪಡಾ ಅಂತಾ ಖರ್ಚು ಮಾಡುತ್ತಾರೆ. ಆದರೆ ಇವರು ಸರಿಯಾದ ರೀತಿಯಲ್ಲಿ ದುಡ್ಡನ್ನು ಬಳಸುವುದು, ಆಲಸ್ಯ ಮಾಡದೇ, ಕೆಲಸ ಮಾಡುವುದನ್ನೆಲ್ಲ ರೂಢಿಸಿಕೊಂಡರೆ, ಶ್ರೀಮಂತಕೆ ಒಲಿಯುತ್ತದೆ.
ಸಿಂಹ: ನಾಯಕತ್ವದ ಗುಣ ಹೊಂದಿರುವ ಸಿಂಹ ರಾಶಿಯವರು, ಕೆಲಸ ಮಾಡುವುದರಲ್ಲೂ ಬುದ್ಧಿವಂತರು. ತಮ್ಮ ಕೆಲಸ ಮಾಡುವ ರೀತಿಯಿಂದಲೇ, ಇವರು ಭಡ್ತಿ ಪಡೆಯುವಷ್ಟು ಜಾಣರಾಗಿರುತ್ತಾರೆ. ಅಲ್ಲದೇ, ಬಹುಬೇಗ ತಮ್ಮ ಸ್ವಂತ ಉದ್ಯಮ ಮಾಡಿ, ಅದರಲ್ಲೂ ಗೆಲುವು ಕಾಣುವುದು ಇವರಿಗೆ ಕಠಿಣ ಕೆಲಸವೇನಲ್ಲ. ಹಾಗಾಗಿ ಸಿಂಹ ರಾಶಿಯವರಿಗೆ ಶ್ರೀಮಂತಿಕೆ ಒಲಿಯುವುದು ದೂರದ ಮಾತೇನಲ್ಲ.
ವೃಶ್ಚಿಕ: ವೃಶ್ಚಿಕ ರಾಶಿಯವರಿಗೆ ಭವಿಷ್ಯದಲ್ಲಿ ಯಾವ ರೀತಿ ಬದುಕಬೇಕು ಎಂಬ ಬಗ್ಗೆ ಅಂದಾಜಿರುತ್ತದೆ. ಹಾಗಾಗಿ ಅವರು ಮೊದಲಿನಿಂದಲೇ, ದುಡ್ಡು ಕೂಡಿಡುವ ಬಗ್ಗೆ ಯೋಚನೆ ಮಾಡುತ್ತಾರೆ. ಬುದ್ಧಿವಂತಿಕೆಯಿಂದ ಕೆಲಸ ಮಾಡುವುದು, ಹಣ ಗಳಿಸುವುದು, ಹಣವನ್ನು ಸರಿಯಾದ ರೀತಿಯಲ್ಲಿ ಹೂಡಿಕೆ ಮಾಡುವುದು, ಇದೆಲ್ಲದರಲ್ಲೂ ವೃಶ್ಚಿಕ ರಾಶಿಯವರು ನಿಸ್ಸೀಮರಾಗಿರುತ್ತಾರೆ. ಹಾಗಾಗಿ ಇವರು ಕೂಡ ಬಹುಬೇಗ ಶ್ರೀಮಂತರಾಗುತ್ತಾರೆ.
ಮಕರ: ಮಕರ ರಾಶಿಯವರು ಹಿಡಿದ ಕೆಲಸ ಬಿಡದೇ, ಪಟ್ಟು ಹಿಡಿದು ಕೆಲಸ ಮಾಡುವವರು. ಹಾಗಾಗಿ ಇವರು ಜೀವನದಲ್ಲಿ ಬಹುಬೇಗ ಯಶಸ್ಸು ಕಾಣುತ್ತಾರೆ. ಇವರು ತಾವು ಯಶಸ್ಸು ಕಾಣಲು, ನಿದ್ದೆ, ಊಟ ಸೇರಿ ಹಲವು ಸುಖಗಳನ್ನು ದೂರವಿಡುತ್ತಾರೆ. ಮಿತವಾದ ಊಟ, ಕಡಿಮೆ ನಿದ್ದೆ, ಹೆಚ್ಚು ಆರಾಮದಾಯಕವಲ್ಲದ ಜೀವನ. ಹೀಗೆ ಸಿಂಪಲ್ ಆಗಿ ಬದುಕಿ, ತಮ್ಮ ಗುರಿಯನ್ನು ಮುಟ್ಟಿ, ಸಿರಿವಂತರಾಗುತ್ತಾರೆ.
ಪತ್ನಿಯಲ್ಲಿ ಇಂಥ ಗುಣವಿದ್ದರೆ, ಪತಿ ಶ್ರೀಮಂತನಾಗುವುದು ಗ್ಯಾರಂಟಿ ಅಂತಾರೆ ಚಾಣಕ್ಯರು