Horoscope: ಪ್ರವಾಸ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ..? ಆರೋಗ್ಯ ಸಮಸ್ಯೆ, ಉದಾಸೀನತೆ ತೋರುವವರು, ಆರ್ಥಿಕ ಪರಿಸ್ಥಿತಿ ಸರಿಯಾಗಿ ಇಲ್ಲದವರು ಬಿಟ್ಟರೆ. ಉಳಿದವರೆಲ್ಲರಿಗೂ ಪ್ರವಾಸ ಹೋಗುವುದೆಂದರೆ ತುಂಬ ಇಷ್ಟ. ಆದರೆ ಆರ್ಥಿಕ ಪರಿಸ್ಥಿತಿ, ಆರೋಗ್ಯ, ಸರಿ ಇರಲಿ ಬಿಡಲಿ, ನಾವು ಪ್ರವಾಸಕ್ಕೆ ಸದಾ ಸಿದ್ಧ ಎನ್ನುವ ರಾಶಿಯವರ ಬಗ್ಗೆ ನಾವಿಂದು ಹೇಳಲಿದ್ದೇವೆ.
ಮೇಷ ರಾಶಿ: ಮೇಷ ರಾಶಿಯ ಜನರು ಅಂದುಕೊಂಡಿದ್ದನ್ನು ಸಾಧಿಸುವವರು. ಜೊತೆಗೆ ಪ್ರವಾಸ ಪ್ರಿಯರು ಹೌದು. ಇವರಂತೆ ಸುತ್ತಾಡಲು, ಹೊಸ ಹೊಸ ಜಾಾಗವನ್ನು ಅಕ್ಸ್‌ಪ್ಲೋರ್ ಮಾಡಲು ಇಚ್ಛಿಸುವ ಜನ ಸಿಕ್ಕರೆ ಸಾಕು, ಬ್ಯಾಗ್ ಪ್ಯಾಕ್ ಮಾಡಿ ಹೊರಟು ಬಿಡುತ್ತಾರೆ. ಅಷ್ಟು ಪ್ರವಾಸವನ್ನು ಈ ರಾಶಿಯವರು ಇಷ್ಟಪಡುತ್ತಾರೆ. ಇವರಿಗೆ ಸುತ್ತಾಟದ ಜೊತೆಗೆ, ಅಲ್ಲಿ ಸಿಗುವ ರುಚಿ ರುಚಿ ಖಾದ್ಯವನ್ನು ಕೂಡ ಸವಿಯುವ ಆಸೆ ಹೆಚ್ಚಿರುತ್ತದೆ.
ತುಲಾ ರಾಶಿ: ಶುಕ್ರಗ್ರಹದ ಆಳ್ವಿಕೆಯಲ್ಲಿರುವ ತುಲಾ ರಾಶಿಯವರಿಗೆ ಐಷಾರಾಮಿ ಜೀವನ ಅಂದ್ರೆ ಸಖತ್ ಇಷ್ಟ. ಇವರು ಹೊಸ ಹೊಸ ವಸ್ತುಗಳನ್ನು, ಬ್ರ್ಯಾಂಡೇಡ್ ವಸ್ತುಗಳನ್ನು ಇಷ್ಟಪಡುತ್ತಾರೆ. ಸದಾಕಾಲ ನೀಟ್ ಆಗಿ, ಚೆಂದಗಾಣಿಸುವ ಪ್ರಯತ್ನ ಪಡುವ ಇವರಿಗೆ, ಸುತ್ತಾಟವೆಂದರೆ ಬಲು ಇಷ್ಟ. ಹೊಸ ಹೊಸ ಜಾಗಗಳಿಗೆ ಪ್ರವಾಸ ಹೋಗಬೇಕು, ಎಂಜಾಯ್ ಮಾಡಿ, ಅಲ್ಲಿನ ತಿಂಡಿ ತಿನಿಸು ಸವಿಯಬೇಕು ಎಂಬ ಆಸೆ ಇವರಿಗಿರುತ್ತದೆ.
ಧನು ರಾಶಿ: ಧನು ರಾಶಿಯವರು ಯಾವ ಮಟ್ಟಿಗೆ ಪ್ರವಾಸ ಪ್ರಿಯರು ಎಂದರೆ, ಪ್ರವಾಸ ಹೋಗಬೇಕು ಎಂದೆನ್ನಿಸಿದರೆ, ಯಾರಿಗೂ ಹೇಳದೇ ಕೇಳದೇ ಎದ್ದು ನಡೆದುಬಿಡುತ್ತಾರೆ. ಅಂಥ ಪ್ರವಾಸಪ್ರಿಯರು. ಇವರಿಗೆ ಒಬ್ಬಂಟಿಯಾಗಿದ್ದು, ಊರೂರು ಸುತ್ತುವುದೇ ಹೆಚ್ಚು ಖುಷಿ ಕೊಡುತ್ತದೆ. ತಮ್ಮ ಜೀವನಕ್ಕೆ ಬೇಕಾದ ಎಲ್ಲ ಸವಲತ್ತುಗಳನ್ನು ತಮ್ಮ ದುಡಿಮೆಯ ಮೂಲಕ ಗಳಿಸುವ ಇವರು, ಇನ್ನೊಬ್ಬರ ಮೇಲೆ ಅವಲಂಬಿತರಾಗಿರಲು ಇಚ್ಛಿಸುವುದಿಲ್ಲ.
ಮೀನ ರಾಶಿ: ಮೀನ ರಾಶಿಯವರು ಗುಣದಲ್ಲಿ ಸಹಾನುಭೂತಿ ಉಳ್ಳವರು. ಉತ್ತಮ ಸ್ವಭಾವದವರು, ಮೌನಿಗಳು. ಜೊತೆಗೆ ಪ್ರವಾಸ ಪ್ರಿಯರು ಹೌದು, ಯಾರಾದರೂ ಪ್ರವಾಸಕ್ಕೆ ಕರೆದರೆ, ಬೇಗ ಬೇಗ ಹೊರಡುತ್ತಾರೆ. ಜೊತೆಗೆ ಟ್ರಿಪ್ ಪ್ಲಾನ್ ಮಾಡುವ ಜಾಣತನ ಕೂಡ ಇವರಿಗಿದೆ.





