Horoscope: ನಾವು ಈಗಾಗಲೇ ನಿಮಗೆ ಸಂಗಾತಿಯನ್ನು ಹೆಚ್ಚು ಪ್ರೀತಿಸುವ ರಾಶಿಯವರ ಬಗ್ಗೆ ಹೇಳಿದ್ದೇವೆ. ಆದರೆ ಇಂದು ನಾವು ಸಂಗಾತಿಯಿಂದ ಹೆಚ್ಚು ಪ್ರೀತಿಯನ್ನು ನಿರೀಕ್ಷಿಸುವ ರಾಶಿಯವರ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಮೇಷ: ಮೇಷ ರಾಶಿಯವರು ಹೆಚ್ಚು ಆತ್ಮವಿಶ್ವಾಸವನ್ನು ಹೊಂದಿರುತ್ತಾರೆ. ಆದರೆ ಅವರು ಜೀವನ ಸಂಗಾತಿ ತಮ್ಮ ಬಗ್ಗೆ ಗಮನ ಹರಿಸಬೇಕು. ಪ್ರೀತಿ, ಕಾಳಜಿ ಮಾಡಬೇಕು. ತನ್ನ ಖುಷಿಗಾಗಿ ಏನಾದರೂ ಮಾಡಬೇಕು ಎಂದು ಬಯಸುತ್ತಾರೆ.
ಕರ್ಕಾಟಕ: ಕರ್ಕಾಟಕ ರಾಶಿಯವರು ಸಂಬಂಧಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ. ಹಣ ಅಂತಸ್ತು ಆಸ್ತಿ ಇದ್ಯಾವುದಕ್ಕೂ ಬೆಲೆ ಕೊಡದ ಇವರು, ಇವೆಲ್ಲದಕ್ಕಿಂತ ಮುಖ್ಯ ಎಂದರೆ, ಸಂಬಂಧವೆಂದು ಭಾವಿಸುತ್ತಾರೆ. ಅದೇ ರೀತಿ ತನ್ನವರು ತನ್ನನ್ನು ಹೆಚ್ಚು ಪ್ರೀತಿಸಬೇಕು, ಕಾಳಜಿ ಮಾಡಬೇಕು ಎಂದು ಬಯಸುತ್ತಾರೆ.
ಸಿಂಹ: ಸಿಂಹ ರಾಶಿಯವರು ಕಾಳಜಿಯ ಸ್ವಭಾವದವರು. ಉದಾರ ಮನಸ್ಸಿನವರು. ಕೊಂಚ ಅಂಹಕಾಾರವಿದ್ದರೂ, ಸಂಬಂಧದ ವಿಷಯದಲ್ಲಿ ಅದನ್ನು ದೂರವಿಟ್ಟೇ ಬದುಕುವವರು. ಅದೇ ರೀತಿ ತಮ್ಮ ಜೀವನ ಸಂಗಾತಿ ಕೂಡ, ತಮ್ಮನ್ನು ಅಷ್ಟೇ ಪ್ರೀತಿ ಕಾಳಜಿಯಿಂದ ನೋಡಿಕೊಳ್ಳಬೇಕು ಎಂದು ಬಯಸುವವರು.
ತುಲಾ: ತುಲಾ ರಾಶಿಯವರು ಜೀವನ ಸಂಗಾತಿಯನ್ನು ಪ್ರೀತಿ, ಕಾಳಜಿಯಿಂದ ನೋಡಿಕೊಳ್ಳುತ್ತಾರೆ. ತನ್ನ ಜೀವನ ಸಂಗಾತಿಗೆ ಯಾವುದೇ ಕೊರತೆ ಬರದೇ ಇರಲಿ ಎಂದು ಅವರು ಬಯಸುತ್ತಾರೆ. ಅದೇ ರೀತಿ, ತಮ್ಮ ಜೀವನ ಸಂಗಾತಿ ಕೂಡ ತಮ್ಮನ್ನು ಎಷ್ಟೇ ಪ್ರೀತಿ, ಕಾಳಜಿಯಿಂದ ನೋಡಿಕೊಳ್ಳಲಿ ಎಂಬುದು ಅವರ ಆಶಯವಾಗಿರುತ್ತದೆ. ಆದರೆ ಅವರ ಇಷ್ಟದಂತೆ ಜೀವನ ಸಂಗಾತಿ ಇರದೇ ಇದ್ದಾಗ, ವೈವಾಹಿಕ ಜೀವನ ಬಿಗಡಾಯಿಸುತ್ತದೆ.