Horoscope: ಎಲ್ಲ ರಾಶಿಯವರಿಗೂ ಅವರದ್ದೇ ಆದ ಗುಣಗಳಿರುತ್ತದೆ. ಅವರದ್ದೇ ಆದ ಪರ್ಸನಾಲಿಟಿ ಇರುತ್ತದೆ. ಕೆಲವರು ಕುಳ್ಳಗೆ, ಕೆಲವರು ಬೆಳ್ಳಗೆ, ಎತ್ತರ, ಕಪ್ಪು, ಹೀಗೆ ವಿಭಿನ್ನ ಸೌಂದರ್ಯ ಹೊಂದಿರುತ್ತಾರೆ. ಆದರೆ ಇಂದು ಎಲ್ಲರ ಮಧ್ಯೆ ಆಕರ್ಷಕವಾಗಿರುವ ರಾಶಿಯವರ ಬಗ್ಗೆ ತಿಳಿಯೋಣ.
ಮೇಷ: ಮೇಷ ರಾಶಿಯವರು ಎಲ್ಲದರಲ್ಲೂ ತಾವು ಮುಂದಿರಬೇಕು ಎಂದು ಬಯಸುವವರು. ಎಲ್ಲ ವಿಷಯದಲ್ಲೂ ಜ್ಞಾನ ಉಳ್ಳವರು. ಅದೇ ರೀತಿ ತಮ್ಮ ಸೌಂದರ್ಯ, ಉಡುಪು, ಹಾವಭಾವ ಎಲ್ಲದರ ಮೇಲೆ ಗಮನ ನೀಡುವವರು. ನಾಲ್ಕು ಜನರ ಮಧ್ಯೆ ತಾನು ಚೆಂದಗಾಣಿಸಬೇಕು. ಆಕರ್ಷಕವಾಾಗಿರಬೇಕು ಎಂದು ಬಯಸುವವರು. ಅಲ್ಲದೇ, ಆರೋಗ್ಯದ ಬಗ್ಗೆಯೂ ಹೆಚ್ಚು ಕಾಳಜಿ ಉಳ್ಳವರು. ಇದೇ ಗುಣಗಳು ಇವರನ್ನು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ.
ಸಿಂಹ: ನಾಯಕತ್ವದ ಸ್ವಭಾವ ಇರುವ ಸಿಂಹ ರಾಶಿಯವರು, ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿರಬೇಕು ಎಂದು ಬಯಸುತ್ತಾರೆ. ಅದರಂತೆ ಅವರು ತಾವು ಧರಿಸುವ ಬಟ್ಟೆ, ಅದಕ್ಕೆ ತಕ್ಕಂತೆ ಆರ್ನಾಮೆಂಟ್ಸ್, ಶೂಸ್ ಹೀಗೆ ಎಲ್ಲದರ ಬಗ್ಗೆ ಗಮನ ನೀಡುತ್ತಾರೆ. ಶಿಸ್ತಿನಿಂದಿರಲು ಬಯಸುತ್ತಾರೆ.
ತುಲಾ: ತುಲಾ ರಾಶಿಯವರಿಗೆ ಹಳೆಯ ವಸ್ತು, ಹಳೆಯ ಊಟ ಇವೆಲ್ಲದರ ಮೇಲೆ ಬೇಗ ಬೇಸರ ಬರುತ್ತದೆ. ಇವರಿಗೆಲ್ಲವೂ ನೂತನವಾಾಗಿಯೇ ಇರಬೇಕು. ಅದೇ ರೀತಿ, ತುಲಾ ರಾಶಿಯ ಅಧಿಪತಿಯಾಗಿರುವ ಶುಕ್ರ ಸಹ ಇದಕ್ಕೆ ಸಹಕರಿಸುತ್ತಾನೆ. ಇವರು ಖರ್ಚು ಮಾಡಿದ ಹಾಗೆ, ಇವರಿಗೆ ಹಣ ಬರುವಂತೆ ಆಶೀರ್ವದಿಸಿರುತ್ತಾನೆ. ಹಾಗಾಗಿ ತುಲಾ ರಾಶಿಯವರು ಬಟ್ಟೆ, ವಾಚ್, ಪರ್ಫ್ಯೂಮ್, ಶೂಸ್ ಹೀಗೆ ಎಲ್ಲ ವಸ್ತುಗಳನ್ನು ಆಗಾಗ ಬದಲಿಸಿ, ಆಕರ್ಷಕವಾಗಿರಲು ಪ್ರಯತ್ನಿಸುತ್ತಾರೆ.
ಧನು: ಧನು ರಾಶಿಯವರು ರಾಶಿಯ ಹೆಸರಿಗೆ ತಕ್ಕಂತೆ, ಧನವಂತರಾಾಗಿಯೇ ಇರುತ್ತಾರೆ. ಇವರ ಗುಣ, ತಾಳ್ಮೆ, ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆ. ಹಾಗಾಗಿ ಇವರು ಜೀವನದಲ್ಲಿ ಆದಷ್ಟು, ಶಿಸ್ತಾಗಿ ಇರಲು ಪ್ರಯತ್ನಿಸುತ್ತಾರೆ. ಊಟ, ಬಟ್ಟೆ, ವಸತಿ, ಪ್ರವಾಸ ಎಲ್ಲದರಲ್ಲೂ ಏನಾದ್ರೂ ಡಿಫ್ರೆಂಟ್ ಆಗಿರಬೇಕು ಎಂದು ಬಯಸುತ್ತಾರೆ. ಅಲ್ಲದೇ, ಜೀವನದಲ್ಲಿ ಬಿಂದಾಸ್ ಆಗಿರಲು ಬೇಕಾದ ಹಣದ ಜತೆ ಜ್ಞಾನವನ್ನು ಗಳಿಸಿರುತ್ತಾರೆ. ಹಾಗಾಗಿಯೇ ಧನು ರಾಶಿಯವರು ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿರುತ್ತಾರೆ.