Horoscope: ಎಲ್ಲ ರಾಶಿಯವರಿಗೂ ಅವರದ್ದೇ ಆದ ಗುಣಗಳಿರುತ್ತದೆ. ಅಂಥ ಗುಣಗಳು ಯಾವುದು ಅನ್ನೋದು ಕೆಲವರನ್ನು ಉನ್ನತಿಗೆ ಕೆಲವರನ್ನು ಅವನತಿಗೆ ತರುತ್ತದೆ. ಹಾಗಾಗಿ ಉತ್ತಮ ಗುಣಗಳು ನಮ್ಮ ಜೀವನದ ಭಾಗವಾಗಿರಬೇಕು ಅಂತಾ ಹಿರಿಯರು ಹೇಳೋದು. ಇಂದು ನಾವು ನಾಯಕತ್ವದ ಗುಣಗಳು ಇರುವ ರಾಶಿಗಳು ಯಾವುದು ಅಂತಾ ತಿಳಿಯೋಣ.
ಮೇಷ: ಮೇಷ ರಾಶಿಯ ಹೆಣ್ಣು ಮಕ್ಕಳು ಹಿಡಿದ ಕೆಲಸವನ್ನು ಮಾಡಿಯೇ ಮುಗಿಸುತ್ತಾರೆ. ಅದೇನೇ ಇರಲಿ. ವಿದ್ಯಾಭ್ಯಾಸ, ಪ್ರಮೋಷನ್, ಉದ್ಯಮ ಹೀಗೆ ಯಾವುದೇ ವಿಷಯದಲ್ಲೂ ನಾನು ಗೆಲುವು ಸಾಧಿಸಬೇಕು ಅಂತಾ ನಿರ್ಧರಿಸಿದರೆ, ಅದು ಪೂರ್ಣ ಮಾಡಿಯೇ ಮಾಡುತ್ತಾರೆ. ಹಾಗಾಗಿ ಇದೇ ಸ್ವಭಾವ ಅವರನ್ನು ಲೀಡರ್ ಆಗಲು ಸಹಾಯ ಮಾಡುತ್ತದೆ.
ವೃಷಭ: ವೃಷಭ ರಾಶಿಯ ಹೆಣ್ಣು ಮಕ್ಕಳು ಕೂಡ ಹಿಡಿದ ಕೆಲಸ ಸಂಪೂರ್ಣ ಮಾಡುವವರು. ಆದರೆ ಇವರು ತಾಳ್ಮೆಯಿಂದ, ಜಾಣ್ಮೆಯಿಂದ ನಿರ್ಧಾರ ತೆಗೆದುಕ“ಳ್ಳುತ್ತಾರೆ. ಅಲ್ಲದೇ, ಹೆಚ್ಚು ಪರಿಶ್ರಮ ಪಡುತ್ತಾರೆ. ಅದಕ್ಕೆ ತಕ್ಕ ಫಲ ಸಿಗುವ ತನಕ ಯಾವುದಕ್‌ಕೂ ಅಂಜದೇ ಮುನ್ನಡೆಯುತ್ತಾರೆ. ಈ ಗುಣವೇ ಇವರನ್ನು ಲೀಡರ್ ಆಗಿ ಮಾಡುತ್ತದೆ.
ಮಿಥುನ: ಮಿಥುನ ರಾಶಿಯವರು ಬೇಗ ವಿಷಯವನ್ನು ಕ್ಯಾಚ್ ಮಾಡಿಕ“ಳ್ಳುವವರು. ಮುಂದಾಲೋಚನೆ ಉಳ್ಳವರು. ಚಿಕ್ಕ ವಯಸ್ಸಿನಿಂದಲೇ ಜಾಣರಾಗಿರುತ್ತಾರೆ. ತಮಗೆ ಯಾವುದಾದರೂ ಆಪತ್ತು ಬರುತ್ತಿದೆ ಅಂತಾ ಅನ್ನಿಸಿದರೆ, ಅದನ್ನು ಆ ಕ್ಷಣ ಹೇಗೆ ಎದುರಿಸಬೇಕು ಎಂದು ತಿಳಿದಿರುವಂಥವರಾಗಿರುತ್ತಾರೆ. ಇಂಥ ಗುಣವೇ ಮುಂದೆ ಅವರು ನಾಯಕಿಯಾಗಲು ಸಹಕಾರಿಯಾಗಿರುತ್ತದೆ.
ಕುಂಭ: ಕುಂಭ ರಾಶಿಯವರು ಹುಂಭ ಸ್ವಭಾವದವರು ಎನ್ನುತ್ತಾರೆ. ಅಂದರೆ ಇವರು ಯಾವುದಕ್ಕೂ ಹೆದರುವುದಿಲ್ಲ. ಬಂದಿದ್ದು ಬರಲಿ ಎಂದು ಮುನ್ನುಗ್ಗುವ ಸ್ವಭಾವದವರು. ಆದರೆ ಇದೇ ಸ್ವಭಾವ ಅವರಿಗೆ ಧೈರ್ಯ ತರುತ್ತದೆ. ಇಂಥ ಧೈರ್ಯದ ಸ್ವಭಾವವೇ, ಭದ್ರ ಭವಿಷ್ಯದ ಬುನಾದಿಗೆ ಅನುಕೂಲವಾಗುತ್ತದೆ.