www.karnatakatv.net :ಪೊನ್ನಿಯಿನ್ ಸೆಲ್ವನ್ ಚಿತ್ರದ ಚಿತ್ರೀಕರಣದ ವೇಳೆ ಕುದುರೆ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದ ನಿರ್ದೇಶಕ ಮಣಿರತ್ನಂ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಕಳೆದ ಆಗಸ್ಟ್ 11ರಂದು ಫೈಟಿಂಗ್ ಸೀನ್ ಶೂಟಿಂಗ್ ಮಾಡೋ ವೇಳೆ ಕುದುರೆ ತಲೆಗೆ ತೀವ್ರ ಪೆಟ್ಟಾಗಿ ಕುದುರೆ ಸಾವನ್ನಪ್ಪಿತ್ತು. ಶೂಟಿಂಗ್ ನಲ್ಲಿ ಬಳಸಲಾಗೋ ಯಾವುದೇ ಪ್ರಾಣಿ ಗೆ ಹಾನಿಯಾಗದಂತೆ ನೋಡಿಕೊಳ್ಳೋ ಜವಾಬ್ದಾರಿ ಚಿತ್ರತಂಡದ್ದು. ಹೀಗಾಗಿ ಘಟನೆ ಕುರಿತಂತೆ ತನಿಖೆ ನಡೆಸಿ ವರದಿ ನೀಡುವಂತೆ ಹೈದ್ರಾಬಾದ ಡಿಸಿಗೆ ಅನಿಮಲ್ ವೆಲ್ಫೇರ್ ಬೋರ್ಡ್ ಆಫ್ ಇಂಡಿಯಾ ಆಗ್ರಹಿಸಿದೆ.
ಉತ್ತರಪ್ರದೇಶದಲ್ಲಿ ಮಹಿಳಾ ಸಬಲೀಕರಣ, ಹೆಣ್ಣು ಮಕ್ಕಳ ಶಿಕ್ಷಣ, ಸ್ಥಳೀಯ ಕಲಾವಿದರಿಗೆ ಪ್ರೋತ್ಸಾಹ ಸೇರಿದಂತೆ ಕೋವಿಡ್ ಎರಡನೇ ಅಲೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ನಿಯಂತ್ರಿಸಲು ಕೈಗೊಂಡ ಕ್ರಮಗಳಿಗೆ ಬ್ರಿಟಿಷ್ ಹೈಕಮಿಷನರ್ ಅಲೆಕ್ಸ್ ಎಲ್ಲಿಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಿಎಂ ಯೋಗಿ ಆದಿತ್ಯನಾಥ್ ಭೇಟಿಯಾದ ಎಲ್ಲಿಸ್, ಉತ್ತರಪ್ರದೇಶದಲ್ಲಿ ಈವರೆಗೆ 7 ಕೋಟಿ ಡೋಸ್ ಲಸಿಕೆಯನ್ನು ನೀಡಿದೆ ಹಾಗೂ ದೇಶದಲ್ಲೆ ಅತಿ ಹೆಚ್ಚು, 6 ಕೋಟಿ ಕೋವಿಡ್ ಪರೀಕ್ಷೆ ನಡೆಸಿದ ಕುರಿತಾಗಿಯೂ ಎಲ್ಲಿಸ್ ಯುಪಿ ಸರ್ಕಾರವನ್ನು ಕೊಂಡಾಡಿದ್ರು.