ಹೊಸಕೋಟೆ : ಈಗಿನ ಕಾಲದಲ್ಲಿ ಅವರು ಶೋಕಿ ಮಾಡುತ್ತಾರೆ ನಾವೇನು ಕಡಿಮ ಎಂದುಕೊಂಡು ಶೋಕಿ ಮಾಡಲು ಶುರುಮಾಡುತ್ತಾರೆ ಆದರೆ ಇವರ ಹತ್ತಿರ ಹಣವಿರುವುದಿಲ್ಲ ಬೇಗ ದುಡ್ಡು ಸಂಪಾದನೆ ಮಾಡಬೇಕು ಶೋಕಿ ಮಾಡಬೇಕು ಎಂದುಕೊಂಡು ಕಳ್ಳತನಕ್ಕೆ ಇಳಿಯುತ್ತಾರೆ ಅದೇ ರೀತಿ ಶೋಕಿಗಾಗಿ ಬೈಕ್ ಗಳನ್ನು ಕಳ್ಳತನ ಮಾಡುತ್ತಿದ್ದ ದರೋಡೆಕೋರರನ್ನು ಹೊಸಕೋಟೆ ಪೋಲಿಸರು ಬಂದಿಸಿದ್ದಾರೆ.
ಹೊಸಕೋಟೆ ನಗರದಲ್ಲಿ ವಿವಿದೆಡೆ ನಿಲ್ಲಿಸಿದ ಬೈಕ್ಗಳನ್ನಯ ಕದ್ದು ಕ್ಷಣಮಾತ್ರದಲ್ಲಿ ಪರಾರಿಯಾಗುಬತ್ತಿದ್ದರು ಹಾಗೆಯೆ ರಸ್ತೆಯಲ್ಲಿ ನಿಂತಿರುವವರ ಮೊಬೈಲ್ ಗಳನ್ನು ಎಗರಿಸಿ ಪರಾರಿಯಾಗುತ್ತಿದ್ದರು. ಇವರನ್ನು ಈಗ ಬೆಂಗಳೂರು ನಗರ ಮತ್ತು .ಗ್ರಾಮಾಂತರ ಪೊಲೀಸರು ಒಬ್ಬ ಅಪ್ರಾಪ್ತ ಸೇರಿದಂತೆ ನಾಲ್ವರು ಅರೋಪಿಗಳನ್ನು ಬಂದಿಸಿದ್ದಾರೆ,ಇನ್ನು ಈ ಆರೋಪಿಗಳಿಂದ ಪಲ್ಸರ್ ಸ್ಕೂಟಿ ರಾಯಲ್ ಎನ್ ಪಿಲ್ಡ್ ಸೇರಿ ಒಂಬತ್ತು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.,
ಮನೆ ಮುಂದೆ ಹಾಗೂ ಪ್ಲೈ ಒವರ್ ಕೆಳಗಡೆ ನಿಲ್ಲಿಸಿ ಹೋಗುತ್ತಿದ್ದ ಬೈಕ್ಗಳನ್ನ ಕಳ್ಳತನ ಮಾಡಿಕೊಂಡು ಹೋಗಿ ಮಾರಾಟ ಮಾಡುತ್ತಿದ್ದರು. ಜೊತೆಗೆ ಬೈಕ್ಗಳು ಖದೀಯಲು ಸಾದ್ಯವಾಗದಿದ್ದಾಗ ಬಸ್ಟ್ಯಾಂಡ್ನಲ್ಲಿ ಹಾಗೂ ಒಂಟಿಯಾಗಿ ಓಡಾಡುವ ಜನರ ಬಳಿ ಮೊಬೈಲ್ಗಳನ್ನ ಕಸಿದು ಎಸ್ಕೇಪ್ ಆಗುತ್ತಿದ್ದರು. ಇನ್ನೂ ಇದೇ ರೀತಿ ಕಳೆದ ಹಲವು ತಿಂಗಳುಗಳಿಂದ ಕಳ್ಳತನ ಮಾಡಿದ್ದ ೧೦ ಲಕ್ಷ ರೂ. ಮೌಲ್ಯದ ವಿವಿಧ ಕಂಪನಿಗಳ ೯ ದ್ವಿಚಕ್ರವಾಹನಗಳು ೧೨ ಮೊಬೈಲ್ಗಳನ್ನ ಹೊಸಕೋಟೆ ಪೊಲೀಸರು ವಶಪಡಿಸಿಕೊಂಡಿಸಿದ್ದಾರೆ.
ಇನ್ನು ಮೀಸೆ ಚಿರಗುರದ ವಯಸ್ಸಲ್ಲಿ ಇದೆಲ್ಲಾ ಬೇಕಾ ಇವರಿಗೆ ಓದಿ ಒಳ್ಳೆಯ ಕೆಲಸ ಸಂಪಾದಿಸಿ ಸಮಾಜದಲ್ಲಿ ಹೆಸರು ಸಂಪಾಧನೆ ಮಾಡೋ ಕನಸು ಕಾಣೋದನ್ನು ಬಿಟ್ಟು ಕೆಟ್ಟ ಕೆಲಸ ಮಾಡಿ ಅಪರಾಧಿಗಳಾಗುತ್ತಾರೆ.
Glenn maxwell : ಆಸ್ಟ್ರೇಲಿಯಾದ ಕ್ರಿಕೆಟಿಗನ ಪತ್ನಿಗೆ ಭಾರತೀಯ ಸಂಪ್ರದಾಯದಂತೆ ಸೀಮಂತ…!