Hosakote News:
ಹೊಸಕೋಟೆಯಲ್ಲಿ ಭಾರೀ ಮಳೆಯಿಂದಾಗಿ ಅನೇಕ ತೊಂದರೆಗಳು ಎದುರಾದವು. ಹಾಗೆಯೇ ಹೊಸಕೋಟೆ ತಾಲೂಕು ಆಡಳಿತದಿಂದ ಅಪಾರ್ಟ್ಮೆಂಟ್ ಹಾಗೂ ತಗ್ಗು ಪ್ರದೇಶದಲ್ಲಿ ಜನರ ರಕ್ಷಣೆ ಈಗಾಗಲೆ ಮಾಡಲಾಗಿದೆ. 62 ಕುಟುಂಬಗಳ ಮನೆಗಳಿಗೆ ನೀರು ನುಗ್ಗಿ ತೊದರೆಗಳು ಅನುಭವಿಸಿದ್ದರು ಅವರನ್ನು ಈಗ ರಕ್ಷಣೆ ಮಾಡಲಾಗಿದೆ. ಹೊಸಕೋಟೆ ತಾಲೂಕಿನ ಗಡಿಭಾಗದಲ್ಲಿರುವ ತಿರುಮಲ ಶೆಟ್ಟ ಹಳ್ಳಿ ಕೆರೆಯ ಆಸುಪಾಸಿನಲ್ಲಿರುವ ಫಾರಂ ಹೌಸ್ ಹಾಗೂ ಒಂಟಿ ಮನೆಗಳಲ್ಲಿ ವಾಸಿಸುತ್ತಿದ್ದವರ ರಕ್ಷಣೆ ಮಾಡಲಾಗಿದೆ. ರಾತ್ರಿ ಸುರಿದ ಭಾರಿ ಮಳೆಗೆ ಬೆಂಗಳೂರು ನಗರದಿಂದ ತಿರುಮಲ ಶೆಟ್ಟ ಹಳ್ಳಿ ತಗ್ಗು ಪ್ರದೇಶಕ್ಕೆ ಅಪಾರ ಪ್ರಮಾಣದ ನೀರು ನುಗ್ಗಿ ತೊಂದರೆಗಳಾಗಿತ್ತು. ಪ್ರವಾಹದಲ್ಲಿ ಸಿಲುಕಿದ್ದ 20 ಜನ ಪುರುಷರು, 15 ಮಹಿಳೆಯರು, 25 ಜನ ಮಕ್ಕಳು ಹಾಗೂ ಇಬ್ಬರು ವಯೋವೃದ್ದರನ್ನು ಈಗ ರಕ್ಷಣೆ ಮಾಡಲಾಗಿದೆ.
ಕೇಂದ್ರ, ರಾಜ್ಯ ಸರ್ಕಾರದ ಪ್ರಾಯೋಜಿತ ಕಾರ್ಯಕ್ರಮಗಳಲ್ಲಿ ಕನ್ನಡ ಬಳಕೆ ಕಡ್ಡಾಯಗೊಳಿಸಿ ಸರ್ಕಾರ ಆದೇಶ