ಬಸವಕಲ್ಯಾಣ: ಬೀದರ್ ಜಿಲ್ಲೆಯ ಬಸವಕಲ್ಯಾಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ನಿರ್ಲಕ್ಷ್ಯತನ ತೋರುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕುತ್ತಿದ್ದಾರೆ.
ಹೆರಿಗೆ ನಂತರ ತಾಯಿ ಮತ್ತು ಮಕ್ಕಳ ಆರೈಕೆಗೆ ಇರುವ ಸ್ಕ್ಯಾನಿಂಗ್ ಕೋಣೆ ಇದ್ದರೂ ತೆರೆಯದೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಹಾಗಾಗಿ ಸ್ಕ್ಯಾನಿಂಗ್ ಗಾಗಿ ಜನ ಪರದಾಡುತ್ತಿದ್ದಾರೆ. ಒಂದು ವಾರದ ಕಾಲ ಸ್ಕ್ಯಾನಿಂಗ್ ಮಾಡುವುದಕ್ಕೆ ಆಗುವುದಿಲ್ಲ ಎಂದು ಸೂಚನಾ ಫಲಕ ಅಂಟಿಸಲಾಗಿದ್ದು ಸ್ಕ್ಯಾನಿಂಗ್ ಗೆ ಎಲ್ಲಿ ಹೋಗಬೇಕು ಎನ್ನುವ ಪ್ರಶ್ನೆ ಎದುರಾಗಿದೆ. ಯಾವ ಕಾರಣಕ್ಕಾಗಿ ಒಂದು ವಾರಗಳ ಕಾಲ ರಜೆ ಘೋಷಿಸಿಸಿದ್ಧಾರೆ ಎನ್ನುವುದು ಇಲ್ಲಿನ ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ
ಒಂದು ವೇಳೆ ಕರ್ತವ್ಯದಲ್ಲಿದ್ಧ ವೈದ್ಯಾಧಿಕಾರಿ ರಜೆ ಮೇಲೆ ಇದ್ದರೆ ಸಂಭಂದಪಟ್ಟ ಉಸ್ತುವಾರಿ ವೈದ್ಯಾಧಿಕಾರಿಯನ್ನು ಬೀದರ್ ಜಿಲ್ಲೆಯ ವೈದ್ಯಾಧಿಕಾರಿ ಆಯ್ಕೆ ಮಾಡಬೇಕು ಎಂದು ಇಲ್ಲಿನ ಸಮಾಜ ಸೇವಕ ವೀರೇಶ ಭೊರ್ಗೆ ಜಿಲ್ಲಾ ವೈದ್ಯಾಧಿಕಾರಿ ವಿರುದ್ಧ ಆಕ್ರೊಶ ವ್ಯಕ್ತಪಡಿಸಿದ್ಧಾರೆಆಸ್ಪತ್ರೆಯಲ್ಲಿ ಒಬ್ಬರೆ ರೆಡಿಯೊಲೊಜಿಸ್ಟ್ ಅಧಿಕಾರಿ ಇದ್ದು ಅವರು ಬಂದರೆ ಮಾತ್ರ ಸ್ಕ್ಯಾನಿಂಗ್ ಮಾಡುವುದಕ್ಕೆ ಆಗುವುದು ಇಲ್ಲದಿದ್ದರೆ ಮಾಡುವುದಕ್ಕೆ ಆಗುವುದಿಲ್ಲ ಎಂದು ಕರೆ ಮಾಡಿದಾಗ ಉಡಾಫೆ ಉತ್ತರ ಕೊಡುತ್ತಿರುವ ಆಸ್ಪತ್ರೆಯ ಉಸ್ತುವಾರಿ ಅಧಿಕಾರಿ ವೈದ್ಯ ತಾಜೊದ್ದಿನ್
ಅವರು ಬರುವವೆರೆಗೂ ಕಾಯಬೆಕು ಅವರ ಜಾಗದಲ್ಲಿ ಇನ್ನೊಬ್ಬರನ್ನು ನೇಮಿಸಲಾಗುವುದಿಲ್ಲ ಎಂದು ಅಧಿಕಾರಿಯ ದರ್ಪದ ಉತ್ತರ ನೀಡುತ್ತಿದ್ದಾರೆ.
Kannada; ಕರ್ನಾಟಕದಲ್ಲಿ ಮಕ್ಕಳಿಗೆ ಮಾತೃಭಾಷೆ ಕನ್ನಡ ಕಡ್ಡಾಯ: ಸಚಿವ ಮಧು ಬಂಗಾರಪ್ಪ
DKS: ಸುಧಾಕರ್ ವಿರುದ್ಧ ಸುಳ್ಳು ಕೇಸ್ ದಾಖಲು, ರಾಜೀನಾಮೆ ಅಗತ್ಯವಿಲ್ಲ:ಡಿಕೆಶಿ
Basavaraj Bommai : ಅನಿಷ್ಠ ಸರಕಾರದ ವಿರುದ್ಧ ಹೋರಾಡಲು ಮೈತ್ರಿ ಅಗತ್ಯ : ಬೊಮ್ಮಾಯಿ