- Advertisement -
Film News : ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ಇಂದು (ಜುಲೈ 21) ರಾಜ್ಯಾದ್ಯಂತ ರಿಲೀಸ್ ಆಗಿದೆ. ಯೂತ್ ಕಾಮಿಡಿಗೆ ಪ್ರೇಕ್ಷಕರಿಂದ ಮೆಚ್ಚುಗೆ ಕೂಡಾ ವ್ಯಕ್ತವಾಗುತ್ತಿದೆ. ಹೊಸಬರ ಸಿನಿಮಾವೊಂದಕ್ಕೆ ಒಂದೊಳ್ಳೆ ಪ್ರಚಾರ ಸಿಕ್ಕಿದೆ.
ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾದ ಮೊದಲ ಪೋಸ್ಟರ್ ರಿಲೀಸ್ ಮಾಡಿದ್ದು ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ಅನ್ನೋದು ಗೊತ್ತಿರೋ ವಿಚಾರ ಚಿತ್ರತಂಡ ಪ್ರತಿಬಾರಿಯೂ ಪುನೀತ್ ಅವರ ಬೆಂಬಲದ ಬಗ್ಗೆ ಹೇಳುತ್ತಲೇ ಬಂದಿದೆ.
ಇಂದು (ಜುಲೈ 21) ಬೆಂಗಳೂರಿನ ನರ್ತಕಿ ಚಿತ್ರಮಂದಿರದಲ್ಲಿ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ಬಿಡುಗಡೆಯಾಗಿದ್ದು, ಅಪ್ಪುಗಾಗಿ ಪ್ರಮುಖ ಚಿತ್ರಮಂದಿರದಲ್ಲಿ ಸ್ಪೆಷಲ್ ಸೀಟ್ ಅನ್ನು ಕಾಯ್ದಿರಿಸಿದ್ದಾರೆ. ಈ ಮೂಲಕ ಮೆಚ್ಚಿನ ನಟನಿಗೆ ಗೌರವ ಸೂಚಿಸಿದೆ ಚಿತ್ರ ತಂಡ.
- Advertisement -