Friday, July 19, 2024

Latest Posts

Tomato: ಟೊಮಾಟೋ ಬೆಳೆದು ಕಣ್ಣೀರಿನಲ್ಲಿ ಕೈ ತೊಳೆಯುತ್ತಿರುವ ರೈತ ಮಹಿಳೆ

- Advertisement -

ಬಾಗಲಕೋಟೆ: ದೇಶದಲ್ಲೆಲ್ಲ ಟೊಮಾಟೋ ಹಣ್ಣಿಗೆ ಬಹಳ ಬೇಡಿಕೆ ಇದ್ದು ಟೊಮಾಟೊ ಬೆಳೆದ ರೈತರು ಶ್ರೀಮಂತರಾಗಿದ್ದಾರೆ ಹಾಗಾಗಿ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಸಾಕಷ್ಟು ರೈತರು ಟೊಮಾಟೋ ಬೆಳೆದು ಲಕ್ಷ ಲಕ್ಷ ಸಂಪಾದಿಸಿದ್ದಾರೆ. ಆದರೆ ಇಲ್ಲೊಬ್ಬ ರೈತ ಮಹಿಳೆ ಕಣ್ಣಿರಿನಲ್ಲಿ ಕೈ ತೊಳೆಯುತಿದ್ದಾಳೆ .ಹಾಗಿದ್ರೆ ಏನಾಗಿದೆ ಎನ್ನುತ್ತಿದ್ದೀರಾ ? ನಾವ್ ಹೇಳ್ತಿವಿ ಕೇಳಿ.

ಬಾಗಲಕೋಟೆ ಜಿಲ್ಲೆಯ ನೀಲಾನಗರ ತಾಂಡಾದ ನಿವಾಸಿಯಾಗಿರುವ ಪ್ರೇಮಾ ದೊಡ್ಡಮನಿಯವರು ಟೊಮಾಟೋ ಹಣ್ಣನ್ನು ಬೆಳೆದಿದ್ದಕ್ಕೆ ಕಣ್ಣೀರು ಹಾಕುತಿದ್ದಾರೆ.ಯಾಕೆಂದರೆ  ಸುಮಾರು ಅರ್ಧ ಎಕರೆ ಪ್ರದೇಶದಲ್ಲಿ ಟೋಮಾಟೊ ಹಣ್ಣು ಬಳೆದಿದ್ದರು ಬೆಳೆ ಚೆನ್ನಾಗಯೇ ಬಂದಿದೆ ಆದರೆ ಕಿಡಿಗೇಡಿಗಳು ಬೆಳೆದ ಬೆಳೆಯನ್ನು ಸಹಿಸದೇ ರಾತ್ರೋ ರಾತ್ರಿ ಹೊಲಕ್ಕೆ ನುಗ್ಗಿ ಟೋಮಾಟೊ ಗಿಡಗಳನ್ನು ಕಿತ್ತು ಹಾಕಿ ಹೊಟ್ಟೆ ಕಿಚ್ಚು ತೋರಿಸಿದ್ದಾರೆ.

ಅವರು ಈ ರೀತಿ ಮಾಡಲು ಜಮೀನಿನ ವಿಷಯವಾಗಿ ಹೊಲದವರ ನಡುವೆ ಮತ್ತು ಕಿಡಿಗೇಡಿಗಳ ನಡುವೆ ವಿವಾದ ಉಂಟಾಗಿ ಜಿಲ್ಲಾನ್ಯಾಯಾಲಯದಲ್ಲಿ ಪ್ರೇಮಾ ದೊಡ್ಡಮನಿಯವರ ಪರ ಕೋರ್ಟ ತೀರ್ಪು ನೀಡಿತ್ತು ಹಾಗಾಗಿ ಜಮೀನು ಕಳೆದುಕೊಂಡ ಕೋಪದಲ್ಲಿ ಈ ರೀತಿ ಕಿಡಿಗೇಡಿತನ ಮಾಡಿದ್ದಾರೆ

ಟೋಮಾಟೋ ಕಿತ್ತು ಹಾಕಿದವರ ವಿರುದ್ದ ಬಾಗಲಕೋಟೆ ಗ್ರಾಮಾಂತರ ಠಾಣೆಯಲ್ಲಿ ದೂರನ್ನು ನೀಡಿದ್ದಾಳೆ ಪೋಲಿಸರು ಎಫ್ ಐ ಆರ್ ದಾಖಲಿಸಿಕೊಂಡಿದ್ದಾರೆ.

Police:ಹೆಂಡತಿಯ ಶೀಲ ಶಂಕಿಸಿ ಕೊಲೆ ಮಾಡಿ ತಾನೆ ಪೋಲಿಸರಿಗೆ ಶರಣಾದನು

Channarayapatna: ಸರ್ಕಾರಿ ಪಡಿತರ ಗೋದಾಮಿನಿಂದಲೆ ಅಕ್ರಮ ಪಡಿತರ ಸಾಗಣೆ: ಪೊಲೀಸರ ಧಾಳಿ

Rain : ಕಲಬುರುಗಿಯಲ್ಲೂ ಭಾರೀ ಮಳೆ …!

- Advertisement -

Latest Posts

Don't Miss