Thursday, July 25, 2024

Latest Posts

ಹಾಸ್ಟೆಲ್  ಹುಡುಗರಿಗೆ ರಮ್ಯಾ ನೋಟೀಸ್..?!

- Advertisement -

Film News :ಹಾಸ್ಟೆಲ್ ಹುಡುಗರು ಸಿನಿಮಾ ಟೀಸರ್  ಮೂಲಕವೇ ಸದ್ದು  ಮಾಡಿತ್ತು  ಇದೀಗ  ಮತ್ತೆ ಲೀಗಲ್  ನೋಟೀಸ್ ಮೂಲಕ ಸದ್ದು  ಮಾಡುತ್ತಿದೆ. ನಟಿ ರಮ್ಯಾ  ಅವರು ಈ ತಂಡಕ್ಕೆ ಲೀಗಲ್ ನೋಟೀಸ್ ಕೊಟ್ಟಿದ್ದಾರೆ ಎಂಬ  ಆರೋಪ ಕೇಳಿ ಬರುತ್ತಿದೆ.

ಪ್ರಚಾರದ ಕಾರ್ಯಕ್ಕಾಗಿ ಈ ಚಿತ್ರತಂಡ  ರಮ್ಯಾ  ಅವರನ್ನು  ಬಳಸಿಕೊಂಡಿದ್ದಾರೆ.  ವಿಶೇಷ ಪ್ರೋಮೊವೊಂದನ್ನು ಸಹ ಬಿಡುಗಡೆಗೊಳಿಸಿತ್ತು ಹಾಗೂ ರಮ್ಯಾ ಈ ಚಿತ್ರದಲ್ಲಿ ಪ್ರಾಧ್ಯಾಪಕಿಯಾಗಿಯೂ ಕಾಣಿಸಿಕೊಂಡಿದ್ದಾರೆ. ಹೀಗೆ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರತಂಡದ ಜತೆ ಕೈಜೋಡಿಸಿದ್ದ ರಮ್ಯಾ ಇದೀಗ ಅದೇ ಚಿತ್ರತಂಡಕ್ಕೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ ಎಂಬ ಆರೋಪ ಕೇಳಿ  ಬಂದಿದೆ.

ಇತ್ತೀಚೆಗಷ್ಟೆ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರದ ಟ್ರೈಲರ್ ಬಿಡುಗಡೆಗೊಂಡಿತ್ತು. ಈ ಟ್ರೈಲರ್‌ನಲ್ಲಿ ರಮ್ಯಾ ಪ್ರಾಧ್ಯಾಪಕಿ ರೋಲ್‌ನಲ್ಲಿ ನಟಿಸಿದ್ದರು. ಆದರೆ ಈಗ ಅದೇ ದೃಶ್ಯದ ವಿರುದ್ಧ ರಮ್ಯಾ ಕಿಡಿಕಾರಿದ್ದಾರೆ. ತನ್ನ ಅನುಮತಿ ಇಲ್ಲದೇ ಈ ದೃಶ್ಯವನ್ನು ಬಳಸಿದ್ದಾರೆ ಎಂಬ ಆರೋಪದಡಿಯಲ್ಲಿ ರಮ್ಯಾ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರತಂಡಕ್ಕೆ ಲೀಗಲ್ ನೋಟಿಸ್ ಜಾರಿ ಮಾಡಿದ್ದಾರೆ ಎಂಬ ಆರೋಪ  ಕೇಳಿ ಬಂದಿದೆ. ಅಲ್ಲದೇ ತನ್ನ ಅನುಮತಿ ಇಲ್ಲದೇ ಬಳಸಲಾಗಿರುವ ದೃಶ್ಯ ಹಾಗೂ ಫೋಟೊಗಳನ್ನು ಎಲ್ಲಾ ಕಡೆಯಿಂದ ತೆಗೆದುಹಾಕಬೇಕು ಹಾಗೂ ಈ ತಪ್ಪಿಗೆ ಪರಿಹಾರವಾಗಿ ಒಂದು ಕೋಟಿ ರೂಪಾಯಿ ಬೇಡಿಕೆ ಸಹ ಇಟ್ಟಿದ್ದಾರೆ ಎಂಬುವುದಾಗಿ ಆರೋಪವಿದೆ..

ಇನ್ನು ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರ ಇದೇ ಶುಕ್ರವಾರ ಜುಲೈ 21 ರಂದು ಬಿಡುಗಡೆಯಾಗಲಿದ್ದು, ಈಗಾಗಲೇ ಚಿತ್ರದ ಬುಕಿಂಗ್ ಆರಂಭಗೊಂಡಿದೆ. ಈ ಸಮಯದಲ್ಲಿ ಸ್ಟಾರ್ ನಟಿ ಇಂತಹ ನಿರ್ಧಾರಕ್ಕೆ ಮುಂದಾಗಿರುವುದು ಆಶ್ಚರ್ಯ ಮೂಡಿಸಿದೆ.

Chiranjeevi: ಚಿರಂಜೀವಿ ಬ್ಲಡ್ ಬ್ಯಾಂಕಿಗೆ ಬರುವ ರಕ್ತವನ್ನು ಹಣಕ್ಕೆ ಮಾರಾಟ ಮಾಡುತ್ತಿದ್ದಾರೆ.

Sandalwood-ನಿರ್ಮಾಪಕನ ಮೇಲೆ 10 ಕೋಟಿ ಮಾನನಷ್ಟ ಮೊಕದ್ದಮೆ ಹೂಡುವುದು ಸರಿಯಲ್ಲ..! ಸಾರಾ ಗೋವಿಂದ್

Short Movie : “ಋತು” ಮುಟ್ಟಿನ ಬಗ್ಗೆ ಒಂದು ಮನಮುಟ್ಟುವ ಕಿರುಚಿತ್ರ

- Advertisement -

Latest Posts

Don't Miss