ಚಳಿಗಾಲದ ಶೀತದ ಹವಾಮಾನಕ್ಕೆ ಹಾಟ್ ಡ್ರಿಂಕ್ಸ್ ಲಿಸ್ಟ್ !

ಚಳಿಗಾಲದಲ್ಲಿ ವಾತಾವರಣ ತಂಪಾಗಿರುವುದರಿಂದ ದೇಹವನ್ನು ಬೆಚ್ಚಗಿಟ್ಟುಕೊಳ್ಳುವುದು ತುಂಬಾ ಮುಖ್ಯ. ದೇಹದ ಉಷ್ಣತೆ ಕಡಿಮೆಯಾದರೆ ರೋಗ ನಿರೋಧಕ ಶಕ್ತಿಯೂ ಕುಸಿದು, ಶೀತ, ಕೆಮ್ಮು, ನೆಗಡಿಯಂತಹ ಸಮಸ್ಯೆಗಳು ಬೇಗ ತಗುಲುವ ಸಾಧ್ಯತೆ ಇದೆ. ಇಂತಹ ಸಂದರ್ಭದಲ್ಲಿ ಬೆಚ್ಚಗಿನ ಪಾನೀಯಗಳು ದೇಹಕ್ಕೆ ಒಳಗಿನ ಶೀತವನ್ನು ತಡೆಯಲು ಸಹಾಯ ಮಾಡುತ್ತವೆ.

ಶುಂಠಿ ಮತ್ತು ಅರಿಶಿನ ಚಹಾ ಚಳಿಗಾಲದ ಉತ್ತಮ ಆಯ್ಕೆ. ಶುಂಠಿಯ ಉರಿಯೂತ ಕಡಿಮೆ ಮಾಡುವ ಗುಣ ಮತ್ತು ಅರಿಶಿನದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗುಣ ಒಂದೇ ಪಾನೀಯದಲ್ಲಿ ಲಭ್ಯವಾಗುತ್ತದೆ. ಪ್ರತಿದಿನ ಬೆಳಿಗ್ಗೆ ಅಥವಾ ಸಂಜೆ ಈ ಚಹಾ ಕುಡಿಯುವುದರಿಂದ ಶೀತ–ಕೆಮ್ಮಿನ ತೊಂದರೆ ಕಡಿಮೆಯಾಗಲು ಸಹಾಯವಾಗುತ್ತದೆ.

ಅರಿಶಿನ ಹಾಲು ಚಳಿಗಾಲದ ಅತ್ಯುತ್ತಮ ಮನೆಮದ್ದು. ಇದು ದೇಹವನ್ನು ಒಳಗಿನಿಂದ ಬೆಚ್ಚಗಿಡುವುದಲ್ಲದೆ, ಎದೆ ನೋವು, ಕೆಮ್ಮು, ನೆಗಡಿ ಮುಂತಾದ ತೊಂದರೆಗಳನ್ನು ಕಡಿಮೆ ಮಾಡುತ್ತದೆ. ನಿದ್ರೆಗೆ ಮೊದಲು ಒಂದು ಗ್ಲಾಸ್ ಬೆಚ್ಚಗಿನ ಅರಿಶಿನ ಹಾಲು ಕುಡಿಯುವುದರಿಂದ ದೇಹಕ್ಕೆ ವಿಶ್ರಾಂತಿ ಮತ್ತು ರಕ್ಷಣೆ ದೊರೆಯುತ್ತದೆ.

ಚಳಿಗಾಲದಲ್ಲಿ ಜೀರಿಗೆ ನೀರು, ಬೆಲ್ಲ–ಜೀರಿಗೆ ನೀರು ಮತ್ತು ಕಡಲೆಕಾಯಿ ಸೂಪ್ ಕೂಡ ಉತ್ತಮ ಆಯ್ಕೆಗಳು. ಜೀರಿಗೆ ನೀರು ದೇಹದ ಜೀರ್ಣಕ್ರಿಯೆಯನ್ನು ಸುಧಾರಿಸಿ ದೇಹವನ್ನು ಬೆಚ್ಚಗಿಡುತ್ತದೆ. ಬೆಲ್ಲ–ಜೀರಿಗೆ ನೀರು ಚಯಾಪಚಯವನ್ನು ಹೆಚ್ಚಿಸಿ ಶಕ್ತಿಯನ್ನು ಕಾಪಾಡುತ್ತದೆ. ಕಡಲೆಕಾಯಿ ಸೂಪ್ ಪ್ರೋಟೀನ್ ಮತ್ತು ಖನಿಜಗಳಿಂದ ತುಂಬಿರುವುದರಿಂದ ದೇಹಕ್ಕೆ ತಾಪಮಾನ ಮತ್ತು ಚೈತನ್ಯ ನೀಡುತ್ತದೆ…

 

About The Author