Wednesday, December 4, 2024

Latest Posts

ಹೊಟೇಲ್ ಸ್ಟೈಲ್ ಸ್ಪೆಶಲ್ ಚಾಯ್ ಮತ್ತು ಮಸಾಲಾ ಚಾಯ್ ರೆಸಿಪಿ..

- Advertisement -

ಟೀ ಅನ್ನೋದು ಹಲವರ ಜೀವನದಲ್ಲಿ ಬೇಕೇ ಬೇಕು ಅನ್ನೋ ಪೇಯ. ಕೆಲವರು ಬೆಳಿಗ್ಗೆ ಎದ್ದ ತಕ್ಷಣ, ನಂತರ 10 ಗಂಟೆಗೆ, ಊಟದ ಹೊತ್ತಿಗೆ, ಊಟ ಮುಗಿದ ಬಳಿಕ, ಸಂಜೆ ಒಮ್ಮೆ, ಮತ್ತೆ ರಾತ್ರಿ ಮಲಗುವ ಮುನ್ನವೂ ಚಹಾ ಕುಡಿದು ಮಲಗುವವರಿದ್ದಾರೆ. ಎಷ್ಟೇ ಪ್ರಯತ್ನ ಪಟ್ಟರೂ, ಚಹಾ ಸೇವನೆ ಮಾತ್ರ ತ್ಯಜಿಸೋಕ್ಕೆ ಆಗಲ್ಲ ಅನ್ನುವವರಿದ್ದಾರೆ. ಅಂಥ ಚಹಾ ಪ್ರಿಯರಿಗಾಗಿಯೇ, ಎರಡು ರೀತಿಯ ಚಹಾದ ರೆಸಿಪಿಯನ್ನ ತಂದಿದ್ದೇವೆ. ಒಂದು ಮಸಾಲಾ ಚಾಯ್‌ ಎರಡನೇಯದ್ದು ಹೊಟೇಲ್ ಸ್ಟೈಲ್ ಸ್ಪೆಶಲ್ ಚಾಯ್. ಇವೆರಡನ್ನು ಹೇಗೆ ಮಾಡೋದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಮೊದಲನೇಯದಾಗಿ ಚಹಾ ಪ್ರಿಯರಿಗಾಗಿ ಮಸಾಲಾ ಚಾಯ್ ರೆಸಿಪಿ. ಚಹಾಪುಡಿ, ಹಾಲು, ನೀರು, ಸಕ್ಕರೆ,  ಒಂದು ಪಲಾವ್ ಎಲೆ, ಚಿಕ್ಕ ತುಂಡು ದಾಲ್ಚೀನಿ, 5 ಕಾಳು ಮೆಣಸು, ಅರ್ಧ ಸ್ಪೂನ್ ಸೋಂಪು, 2 ಲವಂಗ, 1 ಏಲಕ್ಕಿ, ಚಿಕ್ಕ ತುಂಡು ಹಸಿ ಶುಂಠಿ. ಇವಿಷ್ಟು ಮಸಾಲಾ ಚಾಯ್ ಮಾಡಲು ಬೇಕಾಗುವ ಸಾಮಗ್ರಿ.

ಪಲಾವ್ ಎಲೆ, ದಾಲ್ಚೀನಿ, ಕಾಳು ಮೆಣಸು, ಸೋಂಪು, ಲವಂಗ, ಏಲಕ್ಕಿ, ಹಸಿ ಶುಂಠಿ ಇವಿಷ್ಟನ್ನ ಕುಟ್ಟಿ, ತರಿ ತರಿಯಾಗಿ ಪುಡಿ ಮಾಡಿ. ನಂತರ ಗ್ಯಾಸ್ ಆನ್ ಮಾಡಿ, ಪಾತ್ರೆಗೆ ನೀರು, ಚಹಾ ಪುಡಿ, ಸಕ್ಕರೆ ಹಾಕಿ ಕುದಿಸಿ. ನಂತರ ತಾಯಾರಿಸಿದ ಚಹಾ ಮಸಾಲೆಯನ್ನು ಸೇರಿಸಿ, 2 ನಿಮಿಷ ಸಣ್ಣ ಉರಿಯಲ್ಲಿ ಕುದಿಸಿ. ಅದಕ್ಕಿಂತ ಹೆಚ್ಚು ಕುದಿಸಬೇಡಿ. ಇಲ್ಲವಾದಲ್ಲಿ ಚಹಾ ಕಹಿಯಾಗುತ್ತದೆ. ಇದಾದ ಬಳಿಕ ಹಾಲನ್ನ ಸೇರಿಸಿ, ಮತ್ತೆ ಮಂದ ಉರಿಯಲ್ಲಿ 2 ನಿಮಿಷ ಕುದಿಸಿದರೆ ಮಸಾಲಾ ಚಾಯ್ ರೆಡಿ.

ಎರಡನೇಯದಾಗಿ ಹೊಟೇಲ್ ಸ್ಟೈಲ್ ಸ್ಪೆಶಲ್ ಚಾಯ್. ಚಹಾ ಮಸಾಲೆ, ಹಾಲು, ನೀರು, ಸಕ್ಕರೆ, ಚಿಕ್ಕ ತುಂಡು ಶುಂಠಿ, ಒಂದು ಏಲಕ್ಕಿ. ಇವಿಷ್ಟು ಹೊಟೇಲ್ ಸ್ಟೈಲ್ ಸ್ಪೆಶಲ್ ಚಾಯ್ ಮಾಡಲು ಬೇಕಾಗುವ ಸಾಮಗ್ರಿ. ಶುಂಠಿ ಮತ್ತು ಏಲಕ್ಕಿಯನ್ನ ಕುಟ್ಟಿ ತರಿ ತರಿಯಾಗಿ ಪುಡಿ ಮಾಡಿ. ಪಾತ್ರೆಯಲ್ಲಿ ನೀರು, ಚಹಾ ಪುಡಿ, ಸಕ್ಕರೆ ಹಾಕಿ , ಕುದಿಸಿ. ಇದಕ್ಕೆ ಶುಂಠಿ ಮತ್ತು ಏಲಕ್ಕಿ ಪುಡಿ ಹಾಕಿ, ಮಂದ ಉರಿಯಲ್ಲಿ 2 ನಿಮಿಷ ಕುದಿಸಿ. ಈಗ ಇದಕ್ಕೆ ಹಾಲು ಸೇರಿಸಿ ಮತ್ತೆ ಮಂದ ಉರಿಯಲ್ಲಿ 2 ನಿಮಿಷ ಕುದಿಸಿ. ಹೀಗೆ ಕುದಿಸುವಾಗ ಸೌಟಿನಿಂದ ಚಹಾದಲ್ಲಿ ಕೈಯಾಡಿಸುತ್ತಿರಿ. ಇದರಿಂದ ಚಹಾದ ಸ್ವಾದ ಹೆಚ್ಚುತ್ತದೆ. ಈಗ ಹೊಟೇಲ್ ಸ್ಟೈಲ್ ಸ್ಪೆಶಲ್ ಚಾಯ್ ರೆಡಿ. ಇನ್ನು ಇಲ್ಲಿ ಹೇಳಿರುವ ವಸ್ತುಗಳಲ್ಲಿ ಯಾವುದಾದರೂ ವಸ್ತುವನ್ನ ಬಳಸಿದ್ದಲ್ಲಿ ನಿಮಗೆ ಅಲರ್ಜಿ ಎಂದಾದ್ದಲ್ಲಿ, ಈ ಬಗ್ಗೆ ವೈದ್ಯರ ಬಳಿ ವಿಚಾರಿಸಿ, ನಂತರ ಬಳಸುವುದು ಉತ್ತಮ.

- Advertisement -

Latest Posts

Don't Miss