ಆ ಮನೆಯಲ್ಲಿ ಗೃಹಪ್ರವೇಶ ಕಾರ್ಯಕ್ರಮ ನಡೆಯುತ್ತಿತ್ತು. ಮನೆಗೆ ಬಂದ ಅತಿಥಿಗಳು ಅಚ್ಚರಿಗೊಂಡಿದ್ದರು. ಯಾಕಂದ್ರೆ ಮೂರು ವರ್ಷದ ಹಿಂದೆ ಅಪಘಾತದಲ್ಲಿ ಮೃತಪಟ್ಟಿದ್ದ ಮನೆಯಜಮಾನನ ಪತ್ನಿ ಸ್ಟೇಜ್ ಮೇಲೆ ಬಂದು ಕುಳಿತಿದ್ದರು. ಬಂದವರನ್ನೆಲ್ಲ ಸ್ವಾಗತಿಸುತ್ತಿದ್ದರು. ಆದ್ರೆ ಪತ್ನಿಯಲ್ಲಿ ಜೀವವಿರಲಿಲ್ಲ. ಯಾಕಂದ್ರೆ ಅದೊಂದು ಗೊಂಬೆಯಾಗಿತ್ತು.


ಕೊಪ್ಪಳದ ಭಾಗ್ಯನಗರದ ಖ್ಯಾತ ಉದ್ಯಮಿ ಶ್ರೀನಿವಾಸ್ ಗುಪ್ತಾರ ಪತ್ನಿಗೆ ಮನೆಕಟ್ಟಬೇಕೆಂಬ ಆಸೆಯಿತ್ತು. ಆದ್ರೆ 2017ರಲ್ಲಿ ಗುಪ್ತಾರ ಪತ್ನಿ ಅಪಘಾತದಲ್ಲಿ ನಿಧನರಾದರು. ಇದೀಗ ಶ್ರೀನಿವಾಸ್ ಗುಪ್ತಾ ಮನೆಕಟ್ಟಿದ್ದಾರೆ. ಪತ್ನಿಯ ಕನಸು ನನಸು ಮಾಡಿದ್ದಾರೆ. ಆದ್ರೆ ಈ ಕಾರ್ಯಕ್ರಮದಲ್ಲಿ ಪತ್ನಿಯೇ ಭಾಗವಹಿಸಲಾಗಲಿಲ್ಲವೆಂಬ ಕೊರಗು ಇರಬಾರದೆಂದು ಬೆಂಗಳೂರಿನ ಬೊಂಬೆ ಮನೆಗೆ ಬಂದು ಥೇಟ್ ಜೀವಂತ ಮನುಷ್ಯನ ರೀತಿ ಅವರ ಪತ್ನಿಯನ್ನು ಹೋಲುವಂತೆ ಬೊಂಬೆ ಮಾಡಿಸಿದ್ದಾರೆ.
ಇನ್ನು ಈ ಪ್ರತಿಮೆಯನ್ನ ನೋಡಿದ್ರೆ ಅದು ಪ್ರತಿಮೆ ಎಂದೆನ್ನಿಸುವುದೇ ಇಲ್ಲ. ಅಷ್ಟು ನೈಜ ರೂಪ ಪಡೆದುಕೊಂಡಿದೆ. ಶ್ರೀನಿವಾಸ್ ಗುಪ್ತಾರ ಈ ಕೆಲಸದಿಂದ ಅವರ ಇಬ್ಬರು ಹೆಣ್ಣುಮಕಕಳು ಫುಲ್ ಖುಷ್ ಆಗಿದ್ದಾರೆ. ಸ್ವತಃ ತಾಯಿಯೇ ಕಾರ್ಯಕ್ರಮದಲ್ಲಿ ಭಾಗವಹಿಸಿದಷ್ಟು ಖಷಿ ಪಟ್ಟಿದ್ದಾರೆ.
ಈ ಪ್ರತಿಮೆಗೆ ತಗುಲಿದ ಖರ್ಚಿನ ಬಗ್ಗೆ ಕೇಳಿದಾಗ ಈ ಬಗ್ಗೆ ಮಾತನಾಡಿದ ಶ್ರೀನಿವಾಸ್ ಗುಪ್ತಾ, ಜೀವನದಲ್ಲಿ ನನ್ನನ್ನು ಹೆಚ್ಚಾಗಿ ಪ್ರೀತಿಸಿದವರೆಂದರೆ ನನ್ನ ಹೆಂಡತಿ. ಮೂರ್ತಿ ಮಾಡಿಸುವಷ್ಟು ಶಕ್ತಿ ದೇವರು ನನಗೆ ಕೊಟ್ಟಿದ್ದಾನೆ. ಜೀವ ತುಂಬುವ ಶಕ್ತಿ ಕೊಟ್ಟಿದ್ದರೆ ತಡ ಮಾಡುತ್ತಿರಲಿಲ್ಲ. ನನ್ನ ಪ್ರೀತಿಗೆ ಬೆಲೆ ಕಟ್ಟಲಾಗುವುದಿಲ್ಲ ಎಂದು ಭಾವುಕರಾಗಿದ್ದಾರೆ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.