Sandalwood: ನಟಿ ಮಹತಿ ಗಟ್ಟಿಮೇಳ ಸಿರಿಯಲ್‌ನಲ್ಲಿ ನಟಿಸುವಾಗ ಅವರು ಪಿಯುಸಿಯಲ್ಲಿದ್ದರು. ಹಾಗಾಗಿ ಓದು ಮತ್ತು ನಟನೆ ಎರಡನ್ನೂ ಬ್ಯಾಲೆನ್ಸ್ ಮಾಡೋದು ಸಾಮಾನ್ಯ ಮಾತಾಗಿರಲಿಲ್ಲ. ಹಾಗಾದ್ರೆ ಅವೆರಡನ್ನೂ ಮಹತಿ ಹೇಗೆ ಬ್ಯಾಲೆನ್ಸ್ ಮಾಡಿದ್ರು ಅಂತಾ ಅವರಿಂದಲೇ ಕೇಳೋಣ ಬನ್ನಿ..
ಪಿಯುಸಿಯಲ್ಲಿದ್ದಾಗ ಮಹತಿಗೆ ತತ್ಸಮ-ತದ್ಭವ ಎಂಬ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿತ್ತು. ಸೆಕೆಂಡ್ ಈಯರ್‌ನಲ್ಲಿ ಕೇಡಿ ಸಿನಿಮಾದಲ್ಲಿ ಅವಕಾಶ ಸಿಕ್ಕಿತ್ತು. ಜತೆಗೆ ಸಿರಿಯಲ್‌ನಲ್ಲೂ ಅಭಿನಯಿಸುತ್ತಿದ್ದರು. ಕೆಲವು ಬಾರಿ ಮಹತಿಗೆ ಓದು ಮತ್ತು ಅಭಿನಯ ಎರಡೂ ಕಡೆ ಗಮನ ನೀಡಲು ಕಷ್ಟವಾಗುತ್ತಿತ್ತಂತೆ. ಆದರೂ ಮಹತಿ ಛಲ ಬಿಡದೇ ಎರಡನ್ನೂ ಚೆನ್ನಾಗಿಯೇ ನಿಭಾಯಿಸಿದ್ದು, ಇದೀಗ ಎಂಜಿನಿಯರಿಂಗ್ ಓದುತ್ತಿದ್ದಾರೆ.
ಇನ್ನು ಪಿಯುಸಿಯಲ್ಲಿರುವಾಾಗ ಅಣ್ಣ ಮತ್ತು ಅಪ್ಪ-ಅಮ್ಮ ಎಲ್ಲರೂ ಬೆಂಬಲವಾಗಿ ನಿಂತಿದ್ದರು. ಹಾಗಾಗಿ ನನಗೆ ಎರಡನ್ನೂ ಬ್ಯಾಲೆನ್ಸ್ ಮಾಡುವುದು ಸುಲಭವಾಯಿತು. ಬಳಿಕ ಸಿಇಟಿ ಪರೀಕ್ಷೆ ಬರೆದ ಬಳಿಕವೇ, ಮಹತಿ ಮತ್ತೆ ಶೂಟಿಂಗ್‌ಗೆ ಮರಳಿದ್ದು. ಅವರ ಸಿರಿ ಜರ್ನಿ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ಈ ವೀಡಿಯೋ ನೋಡಿ.




