ಚಾಲೆಂಜಿಂಗ್ ಸ್ಟಾರ್ ರಿಲೀಸ್ ಮಾಡಿದ್ದಾರೆ MRP ಚಿತ್ರದ ಟೀಸರ್. MRP ಅಂದ್ರೆ ಏನು ಗೊತ್ತಾ..? ಮೋಸ್ಟ್ ರೆಸ್ಪಾಂನ್ಸಿಬಲ್ ಪರ್ಸನ್ ಅಂತ. ಆದ್ರೆ ಟೀಸರ್ ನೊಡುದ್ರೆ ಇವ್ರ ರೆಸ್ಪಾಂನ್ಸಿಬಲಿಟಿ ಏನಿದ್ರು ನಿದ್ದೆ ಮಾಡೊದು ಅನ್ಸುತ್ತೆ. ಕ್ರಿಕೆಟ್ ಬ್ಯಾಟ್ನ ಹೊಟ್ಟೆಗೆ ಸಪೋರ್ಟ್ ಕೊಟ್ಕೊಂಡು ನಿದ್ದೆ ಮಾಡ್ತಾನೆ ನಮ್ ಹೀರೊ. ಟಾಯ್ಲೆಟ್ ಸೀಟ್ ಮೇಲೆ ಕೊತಿದ್ರು ಮಾಸ್ಕ್ ಹಾಕೊಂಡು ನಿದ್ದೆ ಮಾಡ್ತಾನೆ. ಕನ್ನಡ್ಕ ಬಿಚ್ಚಿಡೊಕೂ ಸಮಯ ಇಲ್ಲಾ, ಪ್ರಸ್ತದ ರಾತ್ರಿಲಿ ಇವರು ಸುಖ ಕಾಣ್ತಾ ಇರೋದು ನಿದ್ದೇ ಮಾಡೊದ್ರಲ್ಲಿ.
ಒಂದು ವಿಚಾರ ಸತ್ಯ ಟೀಸರ್ ನೊಡಿದ್ಮೇಲೆ ನೂಡಲ್ಸ್ ತಿನ್ನೋಕೆ ಅಸಹ್ಯ ಆಗುತ್ತೆ. ಆದ್ರೆ ಹೀರೊ ಸೈಜ್ ಗೆ ಎರಡು ಮೊಪೆಡ್ ಗಾಡಿ ಎತ್ತೊದು ತುಂಬಾನೆ ಸುಲಭ. ಇಂಥಾ ವ್ಯಕ್ತಿ ಹೇಗೆ ಮೋಸ್ಟ್ ರೆಸ್ಪಾಂನ್ಸಿಬಲ್ ಆಗ್ತಾರೆ ಅಂತ ಕಾದು ನೋಡ್ಬೇಕು.
ಸಿನಿಮಾವನ್ನ ಬಾಹುಬಲಿ ಅವರು ರಚಿಸಿ ನಿರ್ದೇಶನ ಮಾಡಿದ್ದಾರೆ, ಬಿಜಿಎಮ್ ಚೆನ್ನಾಗಿ ಮೂಡಿ ಬಂದಿದೆ. ಟೀಸರ್ ಸಕತ್ ಎಂಟರ್ ಟೈನಿಂಗ್ ಆಗಿದೆ. ಸಿನಿಮಾ ಚೆನ್ನಾಗಿ ಮೂಡಿ ಬರಲಿ ಅನ್ನೊದು ನಮ್ಮ ಆಶಯ.