Wednesday, September 24, 2025

Latest Posts

ಆ್ಯಂಕರ್ ಅನುಶ್ರೀ ಧರಿಸಿದ ಸೀರೆ ಬೆಲೆ ಎಷ್ಟು..? ಲಕ್ಷ ಲಕ್ಷ ಅಂದವರಿಗೆ ಸರಿಯಾದ ಬೆಲೆ ಹೇಳಿದ್ದಾರೆ ನೋಡಿ

- Advertisement -

Sandalwood: ಆ್ಯಂಕರ್ ಅನುಶ್ರೀ ಕಳೆದ ವಾರವಷ್ಟೇ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಮಡಿಕೇರಿ ಮೂಲದ ರೋಷನ್ ಜತೆ ಸಪ್ತಪದಿ ತುಳಿದಿದ್ದಾರೆ. ಕರ್ನಾಟಕದ ಪ್ರಸಿದ್ಧ ನಿರೂಪಕಿಯಾದ ಕಾರಣ, ಇವರ ಮದುವೆ ಧೂಮ್ ಧಾಮ್ ಆಗಿ ನಡೆಯುತ್ತೆ ಅಂತಲೇ ಹಲವರು ಭಾವಿಸಿದ್ದರು. ಆದರೆ ಅನುಶ್ರೀ ಮಾತ್ರ ಕೆಲವೇ ಕೆಲವು ಜನರ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ. ಬಳಿಕ ಸ್ಯಾಂಡಲ್‌ವುಡ್ ಗಣ್ಯರನ್ನು ಕರೆದು ರಿಸೆಪ್ಶನ್ ಮಾಡಿದ್ದಾರೆ.

ಇದೀಗ ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಚರ್ಚೆ ಅಂದ್ರೆ ಅನುಶ್ರೀ ತಮ್ಮ ಮದುವೆಗೆ ಉಟ್ಟ ಸೀರೆಗೆ 2 ಲಕ್ಷ 70 ಸಾವಿರ ರೂಪಾಯಿ ಅಂತೆ ಅನ್ನೋ ಚರ್ಚೆ ಶುರುವಾಗಿದೆ. ಆದರೆ ಅನುಶ್ರೀನೇ ತಾನು ಧರಿಸಿದ ಸೀರೆ ಲಕ್ಷ ಲಕ್ಷದ್ದಲ್ಲ, ಕೇವಲ ಸಾವಿರ ರೂಪಾಯಿಯದ್ದು ಅಂದಿದ್ದಾರೆ.

ನನ್ನ ಸೀರೆಯನ್ನು ಮೈಸೂರು ಸಿಲ್ಕ್ ಉದ್ಯೋಗ್‌ನಿಂದ ಖರೀದಿಸಿದ್ದು, 2700 ರೂಪಾಯಿಯದ್ದು ಅಂತಾ ಖುದ್ದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿಗೆ ಸ್ಪಷ್ಟನೆ ನೀಡಿದ್ದಾರೆ. ಇದನ್ನು ಕೇಳಿರುವ ಅವರ ಅಭಿಮಾನಿಗಳು, ಸಾಮಾನ್ಯರೇ ಲಕ್ಷ ಲಕ್ಷ ಸೀರೆ ಖರೀದಿಸುವಾಗ, ನೀವು ಸೆಲೆಬ್ರಿಟಿ ಆ್ಯಂಕರ್ ಆಗಿ ಇಷ್ಟು ಕಡಿಮೆ ಬೆಲೆ ಸೀರೆ ಧರಿಸಿದ್ದು ಗ್ರೇಟ್ ಅಂತಾ ಹೇಳ್ತಿದ್ದಾರೆ.

- Advertisement -

Latest Posts

Don't Miss