ಅಭಿನಯ ಚಕ್ರವರ್ತಿ ಬಾದ್ಶಾ ಕಿಚ್ಚ ಸುದೀಪ್ರನ್ನ ಢಿಫ್ರೆಂಟ್ ಗೆಟಪ್ನಲ್ಲಿ ಅದೂ 3D ಲಿ ಅಭಿಮಾನಿಗಳು ವಿಕ್ರಾಂತ್ ರೋಣ ಫಸ್ಟ್ ಡೇ ಫಸ್ಟ್ ಶೋ ಕಣ್ತುಂಬಿಕೊAಡಿದ್ದಾರೆ. ಮೊದಲ ದಿನವೇ ಬಾಕ್ಸಾಫೀಸ್ ಧೂಳಿಪಟ ಮಾಡಿರೋ ವಿಕ್ರಾಂತ್ ರೋಣ ಸಿನಿಮಾ ಫಸ್ಟ್ ಡೇ 35ಕೋಟಿ ಕಲೆಕ್ಷನ್ ಮಾಡೋ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದೆ ಚಿತ್ರತಂಡ. ಹಾಗಾದ್ರೆ ವಿಕ್ರಾಂತ್ ರೋಣ ಎರಡನೇ ದಿನದ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು..? ಇದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ..
ವಿಕ್ರಾಂತ್ ರೋಣ 2ನೇ ದಿನದ ಕಲೆಕ್ಷನ್ ಬಗ್ಗೆ ನಿರ್ಮಾಪಕ ಜಾಕ್ ಮಂಜು ಸ್ಪಷ್ಟನೆ..
ವಿಕ್ರಾಂತ್ ರೋಣ ಚಿತ್ರದ ಕಲೆಕ್ಷನ್ ವಿಚಾರವಾಗಿ ನಿರ್ಮಾಪಕ ಜಾಕ್ ಮಂಜು ಅವರೇ ಮಾಧ್ಯಮಗಳಿಗೆ ಅಧಿಕೃತ ಮಾಹಿತಿಯನ್ನ ತಿಳಿಸಿದ್ದಾರೆ. ಆಂಧ್ರದಲ್ಲಿ ದೊಡ್ಡ ಮಟ್ಟದ ಸಕ್ಸಸ್ ಸಿಗ್ತಿದ್ದು, ತೆಲುಗು ಭಾಷೆಯ ರಾಜ್ಯದಲ್ಲಿ ವಿಕ್ರಾಂತ್ ರೋಣ ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ಸಿಗ್ತಿದೆ ಎಂದಿದ್ದಾರೆ.
ವಿಶೇಷ ಅಂದ್ರೆ ಆಂಧ್ರ ಭಾಗದಲ್ಲಿ ಹಿಂದಿ ಹಾಗೂ ಕನ್ನಡಕ್ಕಿಂತಲೂ ಹೆಚ್ಚಿನ ರೆಸ್ಪಾನ್ಸ್ ಅಲ್ಲಿ ಸಿಗುತ್ತಿದೆ ಎಂದು ಅಲ್ಲಿನ ಸಿನಿಪಂಡಿತರು ತಿಳಿಸಿದ್ದಾರೆ. ಅದರಂತೆ ಒಡಿಶಾದಲ್ಲೂ ಸಹ ವಿಕ್ರಾಂತ್ ರೋಣ ಸಿನಿಮಾದ ಸ್ಕಿçÃನಿಂಗ್ ಹೆಚ್ಚಿಸೋದಾಗಿ ತಿಳಿಸಿದ್ದಾರೆ.
ಇನ್ನು ಜುಲೈ-28 ರಂದು ವಿಕ್ರಾಂತ್ ರೋಣ ಸಿನಿಮಾ 32-35 ಕೋಟಿ ಕಲೆಕ್ಷನ್ ಮಾಡಿದೆ. ಅದರಂತೆ ಎರಡನೇ ದಿನ ಜುಲೈ-20-25 ಕೋಟಿ ಕಲೆಕ್ಷನ್ ಮಾಡಿದೆ. ಮೊದಲನೇ ದಿನ ಎಲ್ಲರಿಗೂ ತಿಳಿದಿರುವಂತೆ ಫ್ಯಾನ್ಸ್ ಶೋ ಹೆಚ್ಚಿಗೆ ಇತ್ತು. ಹೀಗಾಗಿ ಹೆಚ್ಚಿನ ಕಲೆಕ್ಷನ್ ಆಗಿದೆ. ಅದರಂತೆ ಈ ವೀಕೆಂಡ್ ಕಲೆಕ್ಷನ್ ಮೇಲೆ ಸಾಕಷ್ಟು ನಿರೀಕ್ಷೆ ಇದೆ ಅಂತ ವಿಕ್ರಾಂತ್ ರೋಣ ಚಿತ್ರದ ನಿರ್ಮಾಪಕ ಜಾಕ್ ಮಂಜು ಬಾಕ್ಸಾಫೀಸ್ ಕಲೆಕ್ಷನ್ ಬಗ್ಗೆ ಕ್ಲಾರಿಟಿ ನೀಡಿದ್ದಾರೆ.