ಕ್ರಿಸ್‌ಮಸ್ ಹಬ್ಬದ ಎರಡು ದಿನದಲ್ಲಿ ಕೇರಳದ ಮದ್ಯ ಮಾರಾಟಗಾರರು 150 ಕೋಟಿ ಹಣ ಗಳಿಸಿದ್ದಾರೆ. ಕೇರಳ ಸ್ಟೇಟ್ ಬೇವರೇಜ್ ಕಾರ್ಪೋರೇಷನ್‌ನವರು ನೀಡಿದ ರಿಪೋರ್ಟ್ ಪ್ರಕಾರ, ಡಿಸೆಂಬರ್24 ಮತ್ತು 25ರಂದು ಮದ್ಯ ಮಾರಾಟದಿಂದ ಗಳಿಸಿದ ಹಣ 150.38 ಕೋಟಿ ದಾಟಿದೆ. ವಿದೇಶಿ ಮದ್ಯಗಳು 65 ಕೋಟಿ ರೂಪಾಯಿಗೆ ಸೇಲ್ ಆಗಿದ್ದು, ದೇಶಿಯ ಮದ್ಯ 11 ಕೋಟಿಗೆ ಸೇಲ್ ಆಗಿದೆ. ಇದನ್ನು ಬಿಟ್ಟು ಬೀಯರ್, ವೈನ್ ಸೇರಿ ಹಲವು ಮದ್ಯ ಮಾರಾಟವಾಗಿ ಉಳಿದ ಹಣ ಗಳಿಸಿದೆ.
ಕಳೆದ ವರ್ಷ ಕೂಡ ಕ್ರಿಸ್‌ಮಸ್ ವೇಳೆ ಕೇರಳದಲ್ಲಿ ಮದ್ಯ ಮಾರಾಟಗಾರರು ಕೋಟಿ ಕೋಟಿ ರೂಪಾಯಿ ಆದಾಯ ಗಳಿಸಿದ್ದರು. ಆದರೆ ಈ ವರ್ಷ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಮಾರಾಟವಾಗಿದೆ. ಅಲ್ಲದೇ ಡಿಸೆಂಬರ್ 24ರಿಂದ 4 ದಿನಗಳ ಕಾಲ ಕೇರಳದ ಮದ್ಯ ಮಾರಾಟಗಾರರು 250 ಕೋಟಿ ಆದಾಯ ಗಳಿಸಿದ್ದಾರೆ. ಓಣಂ ಹಬ್ಬದ ಸಂದರ್ಭದಲ್ಲಿ ಕೇರಳದ ಮದ್ಯ ಮಾರಾಟಗಾರರು 750 ಕೋಟಿ ರೂಪಾಯಿ ಗಳಿಸಿದ್ದರು. ಆಗಸ್ಟ್ 11ರಿಂದ 21ರವರೆಗೆ 750 ಕೋಟಿ ಗಳಿಕೆಯಾಗಿತ್ತು.
ಕೇರಳದಲ್ಲಿ 32 ಲಕ್ಷ ಜನ ಮದ್ಯ ಸೇವಿಸುತ್ತಾರೆಂದು ತಿಳಿದು ಬಂದಿದೆ. ಅದರಲ್ಲಿ 29 ಲಕ್ಷ ಪುರುಷರು ಮತ್ತು 3 ಲಕ್ಷ ಮಹಿಳೆಯರು ಮದ್ಯಪಾನ ಮಾಡುತ್ತಾರೆ. ಇನ್ನು ಈ ಬಾರಿ 150 ಕೋಟಿ ಆಗುವಷ್ಟು ಮದ್ಯ. ಮಾರಾಟವಾಗಿದ್ದು, ಓಮಿಕ್ರಾನ್ ಕಾಟ ಶುರುವಾದರೆ, ಮತ್ತೆ ಎಲ್ಲಿ ಮದ್ಯ ಮಾರಾಟ ಬ್ಯಾನ್ ಆಗತ್ತೋ ಅನ್ನೋ ಹೆದರಿಕೆಯೂ ಕೆಲವರಿಗೆ ಇದ್ದ ಹಾಗೆ ಇದೆ.