Sunday, September 8, 2024

Latest Posts

ಪುಷ್ಪ ಸಿನಿಮಾಗೆ ಅಲ್ಲು ಅರ್ಜುನ್ ತೆಗೆದುಕೊಳ್ಳುತ್ತಿರುವ ಸಂಭಾವನೆ ಎಷ್ಟು ಗೊತ್ತಾ..?

- Advertisement -

ಅಲ್ಲು ಅರ್ಜುನ್.. ತೆಲುಗಿನ ಪ್ರಖ್ಯಾತ, ಶ್ರೀಮಂತ ನಟರಲ್ಲಿ ಒಬ್ಬರು. ತೆಲುಗಿನಲ್ಲಷ್ಟೇ ಅಲ್ಲದೇ,ಕನ್ನಡ, ತಮಿಳು, ಹಿಂದಿ ಭಾಷೆಯಲ್ಲೂ ಇವರಿಗೆ ಅಭಿಮಾನಿಗಳಿದ್ದಾರೆ.

ಮೊನ್ನೆ ಮೊನ್ನೆ ತಾನೇ ಲಾಕ್‌ಡೌನ್ ಎಫೆಕ್ಟ್‌ನಿಂದ ಕೆಲಸವಿಲ್ಲದೇ ಪರದಾಡುತ್ತಿದ್ದ ತೆಲುಗು ಫಿಲ್ಮ್ ಇಂಡಸ್ಟ್ರಿಯ ದಿನಗೂಲಿ ನೌಕರರ ನೆರವಿಗೆ ಧಾವಿಸಿದ ಅಲ್ಲು ಅರ್ಜುನ್ ಕೋಟಿ ದುಡ್ಡು ದಾನ ಮಾಡಿದ್ದರು.

https://youtu.be/CUthzGYMF-0

ಇದರಲ್ಲೇ ಅವರು ಎಷ್ಟು ಪ್ರಖ್ಯಾತಿ ಮತ್ತು ಶ್ರೀಮಂತಿಗೆ ಗಳಿಸಿದ್ದಾರೆಂದು ಗೊತ್ತಾಗುತ್ತದೆ. ಆದ್ರೆ ಇದೀಗ ಅಲ್ಲು ಅರ್ಜುನ್ ಮುಂದಿನ ಚಿತ್ರ ಪುಷ್ಪ ಸಿನಿಮಾಗೆ ಅಲ್ಲು ಅರ್ಜುನ್ ಪಡೆಯುತ್ತಿರುವ ಸಂಭಾವನೆ ಕೇಳಿದ್ರೆ ನೀವೂ ಗ್ಯಾರಂಟಿ ಶಾಕ್ ಆಗ್ತೀರಾ.

https://youtu.be/rRYMSZ5Nrec

ಈ ಹಿಂದೆ ಅಲಾವೈಕುಂಠಪುರಂಲೋ ಸಿನಿಮಾ ಸೂಪರ್ ಹಿಟ್ ಆಗಿದ್ದು, ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು. ಇದೀಗ ಅಲ್ಲು ಅರ್ಜುನ್ ಮತ್ತು ನಿರ್ದೇಶಕ ಸುಕುಮಾರ್ ಕಾಂಬಿನೇಷನ್‌ನಲ್ಲಿ ಪುಷ್ಪ ಸಿನಿಮಾ ಮೂಡಿಬರುತ್ತಿದ್ದು, ಅಲ್ಲು ಅರ್ಜುನ್ ಈ ಚಿತ್ರಕ್ಕೆ ಬಣ್ಣ ಹಚ್ಚಲು 35 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಒಂದು ಚಿತ್ರಕ್ಕೆ 17ರಿಂದ 18ಕೋಟಿ ಪಡೆಯುತ್ತಿದ್ದ ಅಲ್ಲು, ಅಲಾವೈಕುಂಠಪುರಂಲೋ ಸಿನಿಮಾಗೆ 25ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಇದೀಗ ಪುಷ್ಪ ಸಿನಿಮಾಗೆ 35 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದು, ಲಾಕ್‌ಡೌನ್ ಇದ್ದ ಕಾರಣ ಸಂಭಾವನೆಯಲ್ಲಿ ಸ್ವಲ್ಪ ಕಡಿಮೆ ತೆಗೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

https://youtu.be/a8ogowgjLZA

ಇನ್ನು ಪುಷ್ಪ ಚಿತ್ರದಲ್ಲಿ ಪುಷ್ಪರಾಜ್ ಎಂಬ ಪಾತ್ರಕ್ಕೆ ಅಲ್ಲು ಅರ್ಜುನ್ ಬಣ್ಣ ಹಚ್ಚಲಿದ್ದು, ಅಲ್ಲುಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸಲಿದ್ದಾರೆ.

- Advertisement -

Latest Posts

Don't Miss