Money Saving Tips: ಹಣಕಾಸು ತಜ್ಞರಾಗಿರುವ ಡಾ.ಭರತ್ ಚಂದ್ರ ಅವರು ಮ್ಯೂಚುವಲ್ ಫಂಡ್ ಹೂಡಿಕೆ ಬಗ್ಗೆ ವಿವರಿಸಿದ್ದಾರೆ.
ಜನ ಮ್ಯೂಚುವಲ್ ಫಂಡ್‌ನಲ್ಲಿ 2 ರೀತಿಯಾಗಿ ಹೂಡಿಕೆ ಮಾಡುತ್ತಾರೆ. 1 ತಾವಾಗೇ ಹೂಡಿಕೆ ಮಾಡೋದು. ಮತ್ತು ತಜ್ಞರ ಸಲಹೆ ಜತೆ ಹೂಡಿಕೆ ಮಾಡೋದು. ತಾಾವಾಗೇ ಹೂಡಿಕೆ ಮಾಡಿದ್ದಲ್ಲಿ, ಆ ಬಗ್ಗೆ ಹೆಚ್ಚು ಗಮನವಿರಿಸಬೇಕಾಗುತ್ತದೆ. ಆದರೆ ಆ ಕೆಲಸವನ್ನು ಸಲಹೆಗಾರರು ಮಾಡುತ್ತಿದ್ದರೆ, ಅವರು ನಿಮ್ಮ ನಿವೃತ್ಥಿ ಜೀವನಕ್ಕೆ, ಮಕ್ಕಳ ಮದುವೆಗೆ, ಮನೆ ಖರೀದಿಸಲು ಹೀಗೆ ಯಾವುದಕ್ಕೆ, ಯಾವ ಫಂಡ್‌ನಲ್ಲಿ, ಎಷ್ಟು ಹಣ ಹೂಡಿಕೆ ಮಾಡಬೇಕು. ಮತ್ತು ಎಷ್ಟು ವರ್ಷ ಹಣ ಹೂಡಿಕೆ ಮಾಡಬೇಕು ಎಂದು ನಿರ್ಧರಿಸಿ, ವಿವರಿಸುತ್ತಾರೆ.
ಆದರೆ ಹಣ ಹೂಡಿಕೆಯ ಮುನ್ನ ನಿಮಗೆ ಮ್ಯೂಚುವಲ್ ಫಂಡ್ ಅಂದ್ರೇನು ಅನ್ನುವ ಜ್ಞಾನವಿರಬೇಕು. ಬ್ಯಾಂಕ್ ಅಕೌಂಟ್ ಸರಿಯಾಗಿರಬೇಕು. ಗಳಿಕೆ, ಉಳಿಕೆ, ಹೂಡಿಕೆ ಇದೆಲ್ಲದರ ಬಗ್ಗೆ ನಿಮಗೆ ಸರಿಯಾದ ಮಾಹಿತಿ ಇದ್ದು, ಹೂಡಿಕೆ ಬಗ್ಗೆ ಸರಿಯಾದ ಜ್ಞಾನವಿರಬೇಕು. ಅದಾದ ಬಳಿಕ ನೀವು ಮ್ಯೂಚುವಲ್ ಫಂಡ್ ಡಿಸ್ಟ್ರಿಬ್ಯೂಟರ್ ಅವರನ್ನು ಸಂಪರ್ಕಿಸಬೇಕು.




