Hubli News: ಹುಬ್ಬಳ್ಳಿ: ವೀರೇಂದ್ರ ಹೆಗಡೆ ಬಗ್ಗೆ ಬಾಯಿಗೆ ಬಂದ ಹಾಗೆ ಮಾತಾಡ್ತಾರೆ. ದೇಶದ ಗುಡಿ ಗುಂಡಾರ ಹೊಡೆಯುವ ಪ್ರಯತ್ನ ಮಾಡಿದ್ದೀರಿ. ಮುಸ್ಲಿಂ ಲೀಗ್ ಸೇರಿ ಹಲವು ಸಂಘಟನೆಗಳೊಂದಿದೆ ಸಂಪರ್ಕ ಇಟ್ಟಿದ್ದೀರಿ. ಯಾರೋ ಒಬ್ಬ ಅಯ್ಯೋಗ್ಯ ಹೇಳಿದ್ದಕ್ಕೆ ಎಸ್ಐಟಿ ರಚನೆ ಮಾಡ್ತೀರಿ ಅಂದ್ರೆ ನೀವು ಎಷ್ಟು ಮೂರ್ಖರಿರಬಹುದು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದರು.
ಹುಬ್ಬಳ್ಳಿಯ ತಾಲ್ಲೂಕಿನ ವರೂರ ಗ್ರಾಮದಲ್ಲಿ ಮಾತನಾಡಿದ ಅವರು, ಸೌಜನ್ಯ ಪ್ರಕರಣ ತನಿಖೆ ಮಾಡ್ತೇನೆ ಅಂದ್ರಿ ಷಡ್ಯಂತರ ಅಂತ ಡಿಕೆ ಶಿವಕುಮಾರ್ ಹೇಳಿದ್ದಾರೆ. ಎರಡು ದಂದೆ ಮೇಲೆ ಕಾಲಿಟ್ಟು ಹೋಗುವ ಕೆಲಸ ಮಾಡ್ತಾ ಇದ್ದಾರೆ. ನಿಮ್ಮದು ಮುಸ್ಲಿಂ ಲೀಗ್ ಜೊತೆ ಸಂಪರ್ಕ ಇದೆ. ನಾವು ನಮ್ಮ ಸ್ವತ್ತು ಅಂತ ಹೇಳಿಲ್ಲ. ಕೆಫೆ ಬ್ಲಾಸ್ಟ್ ಆದಾಗ ಭಯೋತ್ಪಾದನೆ ಕೃತ್ಯ ಅಲ್ಲಾ ಅಂದ್ರಿ. ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅತ್ಯಂತ ಅಸಭ್ಯವಾಗಿ ಮಾತಾಡಿದ್ದಾರೆ. ಇದುವರೆಗೂ ಕ್ರಮ ಯಾಕೆ ಕೈಗೊಂಡಿಲ್ಲ? ಹುಬ್ಬಳ್ಳಿಯಲ್ಲಿ ಕೇಸ್ ತಗಿತಾರೆ. ಅಲ್ಲಿ ಪೊಲೀಸರನ ಕಳ್ಸಿ ಅಗಿತಾರೆ. ದೇಶದಲ್ಲಿ ಹಿಂದೂಗಳು ಜಾಗೃತರಾಗಿದ್ದಾರೆ ಎಂದರು.