Money Saving Tips: ಮ್ಯೂಚುವಲ್ ಫಂಡ್ ಬಗ್ಗೆ ಹಲವರಿಗೆ ಮಾಹಿತಿ ಇರುವುದಿಲ್ಲ. ಯಾಕಂದ್ರೆ ಮ್ಯೂಚುವಲ್ ಫಂಡ್ನಲ್ಲಿ ಹೂಡಿಕೆ ಮಾಡಿದ ಹಣವನ್ನು ಶೇರ್ ಮಾರುಕಟ್ಟೆಯಲ್ಲಿ ಹಾಕುತ್ತಾರೆ ಅಂತಾ ಹೇಳಲಾಗತ್ತೆ. ಹಾಗಾದ್ರೆ ಎಲ್ಲ ಹಣವನ್ನು ಅಲ್ಲೇ ಹಾಕ್ತಾರಾ..? ಹಾಗೆ ಹಣ ಹಾಕಿದಾಗ, ನಮ್ಮ ಹಣ ಮುಳುಗಿ ಹೋದ್ರೆ ಏನು ಕಥೆ ಅನ್ನೋ ಆತಂಕ ಎಲ್ಲರಲ್ಲೂ ಇರೋದು ಸಹಜ. ಆದರೆ ನಿಮಗೆ ಹಣದ ಬಗ್ಗೆ ಹೆದರಿಕೆ ಇದ್ದಲ್ಲಿ ನೀವು ಹೇಗೆ ಹೂಡಿಕೆ ಮಾಡಬೇಕು ಅಂತಾ, ಹಣಕಾಸು ತಜ್ಞರಾಗಿರುವ ಡಾ.ಭರತ್ ಚಂದ್ರ ಅವರು ವಿವರಿಸಿದ್ದಾರೆ.
ರಿಸ್ಕ್ ತೆಗೆದುಕ“ಳ್ಳುವುದಿಲ್ಲ ಎಂದಲ್ಲಿ ನೀವು debt ಮ್ಯೂಚುವಲ್ ಫಂಡ್ನಲ್ಲಿ ಹೂಡಿಕೆ ಮಾಡೂಬಹುದು. ಯಾಕಂದ್ರೆ ಇಲ್ಲಿ ಕಂಪನಿಯವರು ಎಫ್ಡಿಯಲ್ಲಿ ಹಣ ಹೂಡಿಕೆ ಮಾಡುತ್ತಾರೆ. ಆಗ ನಿಮಗೆ ರಿಸ್ಕ್ ಇರುವುದಿಲ್ಲ. ಕಡಿಮೆ ಬಡ್ಡಿ ಸಿಗುತ್ತದೆ.
ಇನ್ನು ಮ್ಯೂಚುವಲ್ ಫಂಡ್ನಲ್ಲಿ ನಾವು ಹೆಚ್ಚು ವರ್ಷ ಹೂಡಿಕೆ ಮಾಡಿದಷ್ಟು ಹೆಚ್ಚು ಲಾಭ ಗಳಿಸುತ್ತೇವೆ. ಆದರೆ ಯಾವ ಮ್ಯೂಚುವಲ್ ಫಂಡ್ನಲ್ಲಿ ಹಣ ಹಾಕಬೇಕು ಎಂದು ತಿಳಿದಿರಬೇಕು. ಎಸ್ಐಪಿಯನ್ನು ಮುಂದುವರಸಬೇಕು. ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.




