ನೆಮ್ಮದಿಯ ಸುಖ ಸಂತೋಷದ ಜೀವನ ಯಾರಿಗೆ ತಾನೇ ಬೇಡ ಹೇಳಿ. ಜನ ದುಡಿಯುವುದೇ ಊಟ, ಬಟ್ಟೆ, ವಸತಿಗಾಗಿ, ಇವೆಲ್ಲವೂ ಇದ್ದರೆ, ನೆಮ್ಮದಿಯ ಜೀವನ ನಮ್ಮದಾಗುತ್ತದೆ. ಆದರೆ ಇವೆಲ್ಲವೂ ಮಿತಿಯಲ್ಲಿದ್ದರೆ ಉತ್ತಮ. ಹಾಗಾದ್ರೆ ನೆಮ್ಮದಿಯ ಜೀವನಕ್ಕಾಗಿ ನಾವು ಅಳವಡಿಸಿಕೊಳ್ಳಬೇಕಾದ ಗುಣಗಳೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಮೊದಲನೇಯದಾಗಿ ನಮಗೆ ಹೊಟ್ಟೆಕಿಚ್ಚಿನ ಗುಣವಿರಬಾರದು. ಯಾರಿಗೆ ಹೊಟ್ಟೆ ಕಿಚ್ಚಿನ ಗುಣವಿರುತ್ತದೆಯೋ, ಅವನು ಜೀವನದಲ್ಲೆಂದೂ ಉದ್ಧಾರವಾಗುವುದಿಲ್ಲ. ಅಸೂಯೆ ಪಡುವವನಿಗೆಂದೂ ಯಶಸ್ಸು ಸಿಗುವುದಿಲ್ಲ. ಯಾರು ಅಸೂಯೆ ಪಡದೇ, ಎಲ್ಲರ ಖುಷಿಯನ್ನೂ ಬಯಸುತ್ತಾರೋ, ಅವರಿಗೆ ಯಶಸ್ಸು ಸಿಕ್ಕೇ ಸಿಗುತ್ತದೆ. ಅದೇ ರೀತಿ ನೆಮ್ಮದಿಯ ಜೀವನವೂ ಅವನದ್ದಾಗುತ್ತದೆ. ಯಾಕಂದ್ರೆ ಹೊಟ್ಟೆ ಕಿಚ್ಚಿರುವ ಮನುಷ್ಯ, ತನ್ನ ನೆಮ್ಮದಿಗಿಂತ ಹೆಚ್ಚಾಗಿ ಬೇರೆಯವರ ಖುಷಿಯ ಬಗ್ಗೆ ಅಸೂಯೆ ಪಡುವುದೇ ಹೆಚ್ಚು.

ಎರಡನೇಯದಾಗಿ ಯಾರಿಗೂ ಅವಮಾನಿಸಬಾರದು. ನೀವು ಬೇರೆಯವರಿಗಿಂತ ಬುದ್ಧಿವಂತರು, ಶ್ರೀಮಂತರಾಗಿರಬಹುದು. ಆದ್ರೆ ಅದನ್ನು ಎಲ್ಲಿಯೂ ತೋರಿಸಿಕೊಳ್ಳಬಾರದು. ಆ ಬಗ್ಗೆ ನಿಮಗೆ ಅಹಂಕಾರವಿರಬಾರದು. ಯಾಕಂದ್ರೆ ಅಹಂಕಾರವೇ ಯಶಸ್ಸಿಗೆ ಮಾರಕ. ಯಶಸ್ಸಿನ ಹಾದಿಯಲ್ಲಿ ನಡೆಯುವವನು, ನೆಮ್ಮದಿಯ ಜೀವನ ಬೇಕೆನ್ನುವವನು ಅಹಂಕಾರ ತೋರಿಸದೇ, ಜೀವನ ಮಾಡಬೇಕು. ಯಾಕಂದ್ರೆ ದೇವರಿಗೆ ಕೊಡುವುದು ಹೇಗೆ ಗೊತ್ತೋ..? ಅದೇ ರೀತಿ ಕಸಿದುಕೊಳ್ಳುವುದು ಗೊತ್ತು..

ಮೂರನೇಯದಾಗಿ ಕೋಪ ನಿಯಂತ್ರಣದಲ್ಲಿರಬೇಕು. ದೊಡ್ಡವರು ಕೋಪದ ಕೈಯಲ್ಲಿ ಬುದ್ಧಿ ಕೊಡಬಾರದು ಅಂತಾ ಬುದ್ಧಿ ಮಾತು ಹೇಳೋದನ್ನ ನಾವು ನೀವು ಕೇಳಿರುತ್ತೇವೆ. ಕೋಪ ಅನ್ನೋದು ಮನುಷ್ಯನನ್ನು ಕುಗ್ಗಿಸಿಬಿಡುತ್ತದೆ. ಹೆಚ್ಚು ಕೋಪವಿದ್ದ ಮನುಷ್ಯ ಸಂಬಂಧವನ್ನು ಉತ್ತಮವಾಗಿ ಇರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಯಾಕಂದ್ರೆ ಕೋಪಿಷ್ಠ ಸಂಗ ಮಾಡಲು ಯಾರೂ ಬಯಸುವುದಿಲ್ಲ.
ನಾಲ್ಕನೇಯದಾಗಿ ಅತೀ ಆಸೆ. ಮತ್ತಷ್ಟು ಬೇಕು ಮಗದಷ್ಟು ಬೇಕು ಅನ್ನುವವರು ಜೀವನದಲ್ಲಿ ಎಂದಿಗೂ ನೆಮ್ಮದಿ ಕಾಣುವುದಿಲ್ಲ. ಅವರು ಕೊನೆಯವರೆಗೂ ಅತೀ ಆಸೆ ಮಾಡುವುದರಲ್ಲಿಯೇ ಜೀವನ ದೂಡುತ್ತಾರೆ. ಅತೀ ಆಸೆ ಗತೀ ಗೇಡು ಅಂದಂತೆ, ಯಾವುದಕ್ಕೂ ಹೆಚ್ಚು ಆಸೆ ಪಡದೇ, ಇದ್ದದ್ದನ್ನೂ ಕಳೆದುಕೊಳ್ಳದೇ ಜೀವನ ನಡೆಸಿದರೆ,ಸ ನೆಮ್ಮದಿ ನಿಮ್ಮ ಪಾಲಾಗುತ್ತದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ–ಪುರುಷ ವಶೀಕರಣ, ಮಾಟ–ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ–ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )




