Tuesday, September 23, 2025

Latest Posts

FITNESS & HEALTH ಎರಡೂ ಕಾಪಾಡಿಕೊಳ್ಳೋದು ಹೇಗೆ? | Anjaan Gym Trainer Podcast

- Advertisement -

Health Tips: ಫಿಟ್‌ನೆಸ್‌ ಕೋಚ್ ಆಗಿರುವ ಅಂಜನ್ ಅವರು, ಫಿಟ್‌ನೆಸ್ ಮತ್ತು ಆರೋಗ್ಯ ಎರಡನ್ನೂ ಹೇಗೆ ಕಾಪಾಡಿಕ“ಳ್ಳಬೇಕು ಅಂತಾ ವಿವರಿಸಿದ್ದಾರೆ.

ಅವರು ಹೇಳುವ ಪ್ರಕಾರ, ನಾವು ದುಡಿಯುವ ದುಡ್ಡಿನಲ್ಲಿ ಕೆಲವು ಭಾಗಗಳನ್ನು ನಾವು ನಮ್ಮ ಆರೋಗ್ಯಕ್ಕಾಗಿ, ಆರೋಗ್ಯಕರ ಆಹಾರಕ್ಕಾಗಿಯೇ ಮೀಸಲಿಡಬೇಕು. ಅದಕ್ಕಿಂತ ಉತ್ತಮ ಬಂಡವಾಳ ಬೇರಿಲ್ಲ ಎನ್ನುತ್ತಾರೆ ಅಂಜನ್.

ಅಲ್ಲದೇ ಯಾವುದಾದರೂ ವಿಷಯಕ್ಕೆ ಹೆಚ್ಚು ತಲೆ ಕೆಡಿಸಿಕ“ಳ್ಳಬೇಡಿ ಅಂತಾರೆ ಅಂಜನ್. ನಾವು ಬೇರೆಯವರಿಗೆ ಪೆಟ್ಟು ನೀಡುವುದು ಕಷ್ಟವಾಗಬಹುದು. ಆದರೆ ಮಾತಿನಲ್ಲೇ ನಾವು ಕುಗ್ಗಿಸಬಹುದು. ಆದರೆ ಎದುರಿನವನು ಮನಸ್ಸಿನಿಂದ ಬಲಶಾಲಿಯಾಗಿದ್ದರೆ, ಅಂಥವರನ್ನು ಕುಗ್ಗಿಸಲು ಸಾಧ್ಯವಿಲ್ಲ. ಅಂಥ ಬಲಶಾಲಿಯಾಗಿರಬೇಕು. ಆಗ ಆರೋಗ್ಯ ಮತ್ತು ದೇಹ ಎರಡೂ ಚೆನ್ನಾಗಿರುತ್ತದೆ ಅಂತಾರೆ ಅಂಜನ್.

ಅಲ್ಲದೇ ಜೀವನದಲ್ಲಿ ಶಿಸ್ತಿದ್ದರೆ, ನಾವು ಆರೋಗ್ಯ ಮತ್ತು ಫಿಟ್‌ನೆಸ್ ಎರಡನ್ನೂ ಚೆನ್ನಾಗಿರಿಸಿಕ“ಳ್ಳಬಹುದು. ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಮತ್ತು ಕೆಲಸಗಳನ್ನು ಮಾಡಿದ್ರೆ, ನಮ್ಮ ಆರೋಗ್ಯ ಚೆನ್ನಾಗಿರುತ್ತದೆ. ನೆಮ್ಮದಿಯೂ ಇರುತ್ತದೆ. ಫ್ಯಾಮಿಲಿ ಟೈಮ್, ಸ್ನೇಹಿತರಿಗೆ ಸಮಯ ಮತ್ತು ಕೆಲಸದ ಸಮಯ ಹೀಗೆ ಎಲ್ಲ ಸಮಯವನ್ನು ನಿಗದಿ ಮಾಡಿ, ಅದರಂತೆ ಇದ್ದರೆ, ಜೀವನ ಸರಳ ಅಂತಾರೆ ಅಂಜನ್. ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss