International news
ಬೆಂಗಳೂರು(ಫೆ.27): ನಮ್ ದೇಶದಲ್ಲಿ ಹುಟ್ಟಿ ಬೆಳೆದು, ವಿದೇಶಗಳಲ್ಲಿ ಸಾಧನೆಯ ಸಿಖರ ಏರಿದ ಮಂದಿ ಸಾಕಷ್ಟು ಜನ ಇದ್ದಾರೆ. ಅದೆಷ್ಟೋ ಮಂದಿ ಸ್ವಂತ ಉದ್ಯೋಗಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡು ಉನ್ನತ ಸ್ಥಾನ ಅಲಂಕರಿಸಿದ್ದಾರೆ. ಹೀಗೆ ಪುರುಷರ ರೀತಿ, ಇಂದು ಮಹಿಳೆಯರೂ ಕೂಡ ಹೆಸರು ಮಾಡ್ತಿದ್ದಾರೆ, ಇಂತಹ ಸಾಲಿನಲ್ಲಿ ಇಲ್ಲೊಬ್ಬರು ಭಾರತದ ಮಧ್ಯಮವರ್ಗದ ಮಹಿಳೆ ಅಮೇರಿಕಾದ ಶ್ರೀಮಂತ ಲೇಡಿಯಾಗಿ ಬೆಳೆದಿದ್ದಾರೆ ಜಯಶ್ರೀ ಉಳ್ಳಾಲ್.
ಹುಟ್ಟಿದ್ದು ಲಂಡನ್, ಆದ್ರೆ ಬೆಳೆದು ಓದು ಮುಗಿಸಿದ್ದು ಭಾರತದಲ್ಲಿ..ಎಸ್ ಈ ಮಹಿಳೆ ಸಾಮಾನ್ಯ ಬಡ ಕುಟುಂಬದಲ್ಲಿ ಬೆಳೆದು ತನ್ನ ಬಾಲ್ಯದಲ್ಲಿಯೇ ಕನಸುಗಳನ್ನು ಹೊತ್ತು ಬೆಳೆದಾಕೆ, ಜಯಶ್ರೀ ಉಳ್ಳಾಲ್. ಇದೀಗ ಈಕೆ ಅಮೆರಿಕದ ಶ್ರೀಮಂತ ಸೆಲ್ಫ್ ಮೇಡ್ ಮಹಿಳೆ ಎಂದು ಗುರುತಿಸಿಕೊಂಡಿದ್ದಾರೆ. ಪ್ರಸ್ತುತ 18 ಸಾವಿರ ಕೋಟಿ ರೂ ಸಂಪಾದನೆ ಮಾಡುತ್ತಾ, ಮಹಿಳೆಯರಿಗೆ ಮಾದರಿಯಾಗಿ ಬೆಳೀತಾ ಇದ್ದಾರೆ.. ಈಕೆಯ ಸಾಧನೆಯ ಖಂಡತವಾಗಿಯೂ ಹೇಳುವಷ್ಟು ಸುಲಭ ಇರಲಿಲ್ಲ..
2008ನೇ ಸಾಲಿನಿಂದ ಅರಿಸ್ಟಾ ನೆಟ್ ವರ್ಕ್ ಅಧ್ಯಕ್ಷೆ ಹಾಗೂ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಅನೇಕ ಮಹಿಳೆಯರಿಗೆ ಸ್ಫೂರ್ತಿಯೂ ಹೌದು. ಜಯಶ್ರೀ ಉಲ್ಲಾಳ್ ಈ ಕಂಪನಿಗೆ ಸೇರಿದ ಪ್ರಾರಂಭದಲ್ಲಿ ಕೇವಲ 50 ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದರು. ಅಷ್ಟೇ ಅಲ್ಲ, ಕಂಪನಿಗೆ ಯಾವುದೇ ಆದಾಯವೂ ಇರಲಿಲ್ಲ.ಇಂಥ ಒಂದು ಕಂಪನಿಯನ್ನು ಜಯಶ್ರೀ ಉಲ್ಲಾಳ್ ಮುನ್ನಡೆಸಿದ ರೀತಿ ನಿಜಕ್ಕೂ ಮಾದರಿ ಅಂತ ಹೇಳ್ಫೋದು ಪೋರ್ಬ್ಸ್ ನಿಯತಕಾಲಿಕದ ಪ್ರಕಾರ 2023ರ ಫೆಬ್ರವರಿ 20ಕ್ಕೆ ಅನ್ವಯವಾಗುವಂತೆ ಇವರ ನಿವ್ವಳ ಸಂಪತ್ತು 18,199 ಕೋಟಿ ರೂ. ಈ ಮೂಲಕ ಇಂದು ಜಯಶ್ರೀ ಉಲ್ಲಾಳ್ ಅಮೆರಿಕದ ಶ್ರೀಮಂತ ಸೆಲ್ಫ್ ಮೇಡ್ ಮಹಿಳೆಯರಲ್ಲಿ ಒಬ್ಬರಾಗಿದ್ದಾರೆ.
ಲಂಡನ್ ನಲ್ಲಿ ಹುಟ್ಟಿ ಭಾರತದಲ್ಲಿ ಬೆಳೆದ ಜಯಶ್ರೀ ಉಲ್ಲಾಳ್,ಸ್ಯಾನ್ ಫ್ರಾನ್ಸಿಕೋ ಸ್ಟೇಟ್ ಯುನಿವರ್ಸಿಟಿಯಿಂದ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಸಾಂತಾ ಕ್ಲಾರ ಯುನಿವರ್ಸಿಟಿಯಿಂದ ಇಂಜಿನಿಯರಿಂಗ್ ಮ್ಯಾನೇಜ್ ಮೆಂಟ್ ಪದವಿ ಪಡೆದಿದ್ದಾರೆ. ಗ್ರಾಫಿಕ್ ಕಾರ್ಡ್ ಕಂಪನಿಗಳಲ್ಲಿ ಜನಪ್ರಿಯತೆ ಗಳಿಸಿರುವ ಅಡ್ವಾನ್ಡ್ ಮೈಕ್ರೋ ಡೆವೈಸ್ಸ್ ಮೂಲಕ ಉಲ್ಲಾಳ್ ತಮ್ಮ ವೃತ್ತಿ ಜೀವನ ಆರಂಭಿಸಿದ್ದರು. ಆ ಬಳಿಕ ಕೆಲವು ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ ಉಲ್ಲಾಳ್, ಸಿಸ್ಕೋನಲ್ಲಿ 15ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದರು. ಆ ಬಳಿಕ 2008ರಲ್ಲಿ ಅರಿಸ್ಟಾಕ್ಕೆ ಸೇರಿದ್ದರು.
30 ವರ್ಷಗಳಿಗೂ ಅಧಿಕ ನೆಟ್ ವರ್ಕಿಂಗ್ ಅನುಭವ ಹೊಂದಿರುವ ಜಯಶ್ರೀ ಉಲ್ಲಾಳ್, 2015ರಲ್ಲಿ ಇ & ವೈ ‘ಎಂಟರ್ ಪ್ರಿನರ್ ಆಫ್ ದಿ ಇಯರ್’, 2018ರಲ್ಲಿ ಬ್ಯಾರ್ರನ್ಸ್ ‘ಜಗತ್ತಿನ ಅತ್ಯುತ್ತಮ ಸಿಇಒ’ ಹಾಗೂ 2019ರಲ್ಲಿ ಫಾರ್ಚೂನ್ ‘ಅಗ್ರ 20 ಉದ್ಯಮ ವ್ಯಕ್ತಿಗಳು’ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಮಹಿಳೆ ಮನಸ್ಸು ಮಾಡಿದ್ರೆ ಏನು ಬೇಕಾದರೂ ಸಾಧನೆ ಮಾಡ್ಬೋದು ಅಂತ. ತನ್ನ ಸ್ವಂತ ಶಕ್ತಿಯಿಂದ ಇಂದು ಅಮೇರಿಕಾದ ಶ್ರೀಮಂತ ಮಹಿಳೆಯರ ಸಾಲಿನಲ್ಲಿ ಮುನ್ನಡೆಯುತ್ತಿರುವ ಜಯಶ್ರೀ ಉಳ್ಳಾಲ್ ಅವರ ನಿಜಕ್ಕೂ ಸಾಧನೆಯ ಹಾದಿಯಲ್ಲಿ ಮುನ್ನಡೆಯುವ ಮಹಿಳೆಯರಿಗೆ ಸ್ಪೂರ್ತಿ ಅನ್ನೋದು ಸತ್ಯ.
150 ಜಾತಿಯ ಸಿರಿಧಾನ್ಯ ಬೀಜ ಸಂಗ್ರಹಿಸಿ ಬ್ರಾಂಡ್ ಅಂಬಾಸಿಡರ್ ಆದ ಬುಡಕಟ್ಟು ಮಹಿಳೆ “ಲಹರಿ ಬಾಯಿ”
ಪ್ರಿಯಾಂಕಾ ಗಾಂಧಿಗೆ 6,000 ಕೆಜಿಗೂ ಅಧಿಕ ತೂಕದ ಗುಲಾಬಿ ಹೂವುಗಳ ಸ್ವಾಗತ..!