Sunday, September 8, 2024

Latest Posts

ಗುಜರಾತ್ ಟೈಟಾನ್ಸ್ ಗೆಲುವಿನ ಸೀಕ್ರೇಟ್ ಏನು ?  

- Advertisement -

ಅಹಮದಾಬಾದ್:ಚೊಚ್ಚಲ ಪ್ರಯತ್ನದಲ್ಲೆ ಗುಜರಾತ್ ಟೈಟಾನ್ಸ್ 15ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಕಪ್ ಎತ್ತಿ ಹಿಡಿದಿದೆ.

ಯಾರೂ ಕೂಡ ನಿರೀಕ್ಷಿಸಿದ ರೀತಿಯಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಟೈಟಾನ್ಸ್ ಪ್ರಶಸ್ತಿ ಎತ್ತಿಹಿಡಿದಿದೆ. 15ನೇ ಆವೃತ್ತಿಗೆ ಸಿದ್ಧಗೊಂಡಾಗ ಯಾರೂ ಕೂಡ ಚಾಂಪಿಯನ್ ಆಗಲಿದೆ ಎಂದು ನಿರೀಕ್ಷಿಸಿರಲಿಲ್ಲ.

ಟೂರ್ನಿ ಆರಂಭಕ್ಕೂ ಮುನ್ನ ತಂಡದ ಸ್ಪರ್ಧೆ ಖಚಿತವಾಗಿರಲಿಲ್ಲ. ಬೆಟ್ಟಿಂಗ್ ಕಂಪೆನಿಗಳ ಜೊತೆ ತಂಡದ ಮಾಲೀಕರು ಕೈಜೋಡಿಸಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಟೈಟಾನ್ಸ್ ಚಾಂಪಿಯನ್ ಪಟ್ಟ ಅಲಂಕರಿಸಲು ಇಲ್ಲಿದೆ ಕಾರಣಗಳು.

ಟೂರ್ನಿಯಲ್ಲಿ ಸವಾಲುಗಳನ್ನು ಮೆಟ್ಟಿನಿಂತ ತಂಡವೆಂದರೆ ಅದು ಟೈಟಾನ್ಸ್. ಹರಾಜಿನಲ್ಲಿ ಆಟಗಾರರನ್ನು ಸರಿಯಾಗಿ ಖರೀದಿಸಲಿಲ್ಲ ಎಂಬ ಕೂಗು ಕೇಳಿ ಬಂದಿತ್ತು. ಆಡುವ ಹನ್ನೊಂದರ ಬಳಗವನ್ನು ಸರಿಯಾಗಿ ಹೊಂದಿರಲಿಲ್ಲ. ಆದರೆ ಕೋಚ್ಗಳಾದ ಗ್ಯಾರಿ ಕಸ್ಟರ್ನ್ ಸವಾಲುಗಳನ್ನೆ ಅವಕಾಶಗಳಾಗಿ ಪರಿವರ್ತಿಸಿದರು.

ಹತ್ತು ಬೌಲರ್ಗಳ ಬಳಕೆ

ತಂಡದ ಯಶಸ್ಸಿಗೆ ಮತ್ತೊಂದು ಕಾರಣವೆಂದರೆ ಬೌಲಿಂಗ್ ರಶೀದ್ ಖಾನ್ ಹೊರತುಪಡಿಸಿ ಮತ್ತೊಬ್ಬ ಸ್ಟಾರ್ ಬೌಲರ್ ಇರಲಿಲ್ಲ. ವೇಗಿಗಳನ್ನಿಟ್ಟುಕೊಂಡು ಗೆಲುವು ಸಾಧಿಸಿತು. ಒಟ್ಟು 10 ಬೌಲರ್ಗಳನ್ನು ಬಳಕೆ ಮಾಡಿದೆ. ಶಮಿ, ರಶೀದ್ ಖಾನ್, ಫರ್ಗ್ಯೂಸ್ ನ್, ಹಾರ್ದಿಕ್ 10 ಪಂದ್ಯಕ್ಕಿಂತ ಹೆಚ್ಚಿನ ಪಂದ್ಯಗಳನ್ನು ಆಡಿದರು.

ಗುಜರಾತ್ ತಂಡ ಯಶಸ್ಸಿನಲ್ಲಿ ನಿರ್ಣಾಯಕ ಪಾತ್ರವಹಿಸಿದ್ದು ಮೂವರು

ಬ್ಯಾಟರ್ಗಳು. ನಾಯಕ ಹಾರ್ದಿಕ್ ಪಾಂಡ್ಯ 487 ರನ್ ಕಲೆ ಹಾಕಿ ತಂಡದ ಪರ ಅತಿ ಹೆಚ್ಚು ರನ್ ಗಳಿಸಿದರು. ಶುಭಮನ್ ಗಿಲ್ 483 ರನ್, ಡೇವಿಡ್ ಮಿಲ್ಲರ್ 481 ರನ್ ಕಲೆ ಹಾಕಿದರು. 11 ಪಂದ್ಯಗಳನ್ನಾಡಿದ ವೃದ್ದಿಮಾನ್ ಸಾಹಾ 317 ರನ್.

ಮಿಲ್ಲರ್ ಕಿಲ್ಲರ್ ಆಗಿದ್ದನ್ನ ಹೇಳಲೆ ಬೇಕು. ಮೆಗಾ ಹರಾಜಿನ ಮೊದಲ ದಿನ ಮಿಲ್ಲರ್ ಸೇಲ್ ಆಗಿರಲಿಲ್ಲ. 2ನೇ ದಿನ ಗುಜರಾತ್ 3ಕೋಟಿಗೆ ಖರೀದಿಸಿದಾಗ ಅಚ್ಚರಿಪಟ್ಟವರು ಹೆಚ್ಚು. ವೃತ್ತಿ ಬದುಕಿನ ಶ್ರೇಷ್ಠ ಪ್ರದರ್ಶನವನ್ನು ತೋರಿದರು.

ಚೇಸಿಂಗ್ನಲ್ಲಿ 6 ಬಾರಿ ಔಟಾಗದೆ ಉಳಿದರು. ಕ್ವಾಲಿಫೈಯರ್ 1ರಲ್ಲಿ ಪಂದ್ಯ ಶ್ರೇಷ್ಠ, ಚೆನ್ನೈ ವಿರುದ್ಧ 94 ರನ್.  ಕೆಳಕ್ರಮಾಂಕದಲ್ಲಿ ಬ್ಯಾಟ್ ಮಾಡಿ 437 ರನ್ ಕಲೆ ಹಾಕಿದ್ದಾರೆ.

ಮೊದಲ ಬಾರಿಗೆ ಐಪಿಎಲ್ನಲ್ಲಿ ನಾಯಕತ್ವದ ಜವಾಬ್ದಾರಿ ಹೊತ್ತ ಹಾರ್ದಿಕ್ ಪಾಂಡ್ಯ ಆರಂಭದಲ್ಲಿ ಕೋಪಗೊಂಡು ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದ್ದರು. ರನೌಟ್ ಆದಾಗ ಮಿಲ್ಲರ್ ಮೇಲೂ ಕೋಪಗೊಂಡಿದ್ದರು. ನಂತರ ಪ್ರಭುತ್ವ ಕಂಡುಕೊಂಡ ಹಾರ್ದಿಕ್ ಪಾಂಡ್ಯ ನಿರ್ವಹಣೆಯನ್ನು ಚೆನ್ನಾಗಿ ನಿರ್ವಹಿಸಿದರು.

ನಾಯಕತ್ವದ ಒತ್ತಡವನ್ನು ತಮ್ಮ ಪ್ರದರ್ಶನದ ಮೇಲೆ ಬೀರದಂತೆ ನೋಡಿಕೊಂಡರು. ಅಗ್ರ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದರು. ಅಗತ್ಯ ಸಂದರ್ಭಗಳಲ್ಲಿ ಬೌಲಿಂಗ್ ಮಾಡಿ ತಂಡಕ್ಕೆ ನೆರವಾದರು.

 

 

 

 

 

 

- Advertisement -

Latest Posts

Don't Miss