Monday, November 17, 2025

Latest Posts

(Hoysala) ಸಂಕ್ರಾತಿ ಪ್ರಯುಕ್ತ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಡಾಲಿ

- Advertisement -

ನಟ ರಾಕ್ಷಸ ಡಾಲಿ ಧನಂಜಯ್ ಬಡವ ರಾಸ್ಕಲ್ ಸಿನಿಮಾದಿಂದ ತುಂಬಾ ಬ್ಯೂಸಿಯಾಗಿದ್ರೂ, ಈಗ ಮಕರ ಸಂಕ್ರಾoತಿ ಪ್ರಯುಕ್ತ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ .
ಡಾಲಿ ತಮ್ಮ ಹೊಸ ಚಿತ್ರದ ಟೈಟಲ್ ಅನ್ನು ಇಂದು ಘೋಷಣೆ ಮಾಡಿಕೊಂಡಿದ್ದಾರೆ. ಇವರ ಹೊಸ ಚಲನಚಿತ್ರ ಹೊಯ್ಸಳ ಮತ್ತೊಂದು ಖುಷಿ ವಿಚಾರವೆಂದರೆ ಡಾಲಿ 25 ಸಿನಿಮಾಗೆ ಕಾಲಿಡುತ್ತಿದ್ದಾರೆ. ಈ ಟೈಟಲ್ ಪೋಸ್ಟರ್ ಅನ್ನು ಅವರ ತಂಡ ಮತ್ತು ಹಿತೈಷಿಗಳು ಬಿಡುಗಡೆ ಮಾಡಿದ್ದಾರೆ. ಹೊಯ್ಸಳ ಚಿತ್ರಕ್ಕೆ ಡಾಲಿ ರತ್ನನ್ ಪ್ರಪಂಚ ನಂತರ ಎರಡನೇ ಬಾರಿಗೆ ಕೆ ಆರ್ಜಿ ಸ್ಟುಡಿಯೋಸ್ ಜೊತೆ ಕೈ ಜೋಡಿಸಲಿದ್ದಾರೆ. 2022ರ ರಾಜ್ಯೋತ್ಸವಕ್ಕೆ ಸಿನಿಮಾ ಬಿಡುಗಡೆಯಾಗಲಿದ್ದು ಗೀತಾ ಚಿತ್ರ ಮಾಡಿದ್ದ ವಿಜಯ್ ಎನ್ ಅವರು ನಿರ್ದೇಶಿಸಲಿದ್ದಾರೆ. ಥಮನ್ ಎಸ್ ಅವರು ಸಂಗೀತ ಸಂಯೋಜನೆ ಮಾಡಲಿದ್ದಾರೆ.

- Advertisement -

Latest Posts

Don't Miss