Thursday, June 1, 2023

Latest Posts

ಚಿಂಚೋಳಿಯಲ್ಲಿ ನಡೆದಿದೆ ಪ್ಯಾಕೇಜ್ ಡೀಲ್- ಜಾಧವ್ ರಾಜೀನಾಮೆಗೆ ಕಾರಣ ಇದೇನೇ- ಮಾಜಿ ಸಿಎಂ ಸಿದ್ದು

- Advertisement -

ಕಲಬುರಗಿ : ಕಾಂಗ್ರೆಸ್ ನಿಂದ ಉಮೇಶ್ ಜಾಧವ್ ಬಿಜೆಪಿಗೆ ಪಕ್ಷಾಂತರಗೊಂಡಿರೋದರ ಹಿಂದೆ ಡೀಲ್ ಗಳ ಸರಮಾಲೆಯೇ ಇದೆ ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಕಲಬುರಗಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಉಮೇಶ್ ಜಾಧವ್ ಬಿಜೆಪಿಗೆ ಹೋಗಿದ್ದಕ್ಕೆ ಒಂದು ಡೀಲ್ ಮಾಡಿಕೊಂಡಿದ್ದಾರೆ. ರಾಜೀನಾಮೆ ಕೊಡೋದಕ್ಕೆ ಒಂದು ಡೀಲ್, ಖರ್ಗೆ ವಿರುದ್ಧ ಕಲಬುರಗಿಯಲ್ಲಿ ನಿಲ್ಲೋದಕ್ಕೆ ಒಂದು ಡೀಲ್, ಬೈ ಎಲೆಕ್ಷನ್ ನಲ್ಲಿ ತನ್ನ ಮಗನಿಗೆ ಟಿಕೆಟ್ ಕೊಡಿಸೋದಕ್ಕೆ ಮತ್ತೊಂದು ಡೀಲ್ ಹಾಗೆ ಸರ್ಕಾರ ಬಂದಾಗ ಕೇಂದ್ರದಲ್ಲಿ ಮಂತ್ರಿಗಿರಿ. ಹೀಗೆ ಟೋಟಲಿ ಎಲ್ಲಾ ಸೇರಿ ಪ್ಯಾಕೇಜ್ ಡೀಲ್ ಮಾಡಿಕೊಂಡಿದ್ದಾರೆ ಅಂತ ಆರೋಪಿಸಿರೋ ಸಿದ್ದರಾಮಯ್ಯ, ಇಂತಹ ಡೀಲ್ ಗಿರಾಕಿಗೆ ತಕ್ಕ ಪಾಠ ಕಲಿಸಬೇಕಲ್ವಾ ಅಂತ ಕಿಡಿ ಕಾರಿದ್ದಾರೆ.

- Advertisement -

Latest Posts

Don't Miss