Saturday, October 5, 2024

Latest Posts

ಮೋದಿ ವಿರುದ್ಧ ‘ಪದ್ಮಾವತಿ’ ಟ್ವೀಟ್ ವಾರ್

- Advertisement -

ಪದೇ ಪದೇ ಸಮಾಜಿಕ ಜಾಲತಾಣದಲ್ಲಿ ಬಿಜೆಪಿ ವಿರುದ್ಧ  ಪೋಸ್ಚ್ ಮಾಡೋ ಕಾಂಗ್ರೆಸ್ ನ ಸೋಶಿಯಲ್ ಮೀಡಿಯಾ ಮುಖ್ಯಸ್ಥೆ ರಮ್ಯಾ. ಇದೀಗ ಪ್ರಧಾನಿ ಮೋದಿ ವಿರುದ್ಧ ಇದೀಗ ಪ್ರೂಫ್ ಸಮೇತ ಆರೋಪವೊಂದನ್ನ ಮಾಡಿದ್ದಾರೆ.

ಖಾಸಗಿ ವಾಹಿನಿಯೊಂದು ಇತ್ತೀಚಿಗೆ ನಡೆಸಿದ ಪ್ರಧಾನಿ ಮೋದಿಯವರ ಸಂದರ್ಶನ ಮಾಡಿತ್ತು. ಆದ್ರೆ ಆ ಸಂದರ್ಶನದಲ್ಲಿ ಕೇಳಲಾದ ಪ್ರಶ್ನೆಗಳು ಮತ್ತು ಉತ್ತರಗಳು ಮೊದಲೇ ನಿಗದಿಯಾಗಿತ್ತು. ಇದು ಪಕ್ಕಾ ಸ್ಕ್ರಿಪ್ಟೆಡ್ ಅಂತ ಹೇಳಿರೋ ರಮ್ಯಾ ಈ ಕುರಿತಾಗಿ 9 ಸೆಕೆಂಡ್ ಗಳ ವಿಡಿಯೋವನ್ನೂ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಸಂದರ್ಶನಕ್ಕೆ ಯಾರಾದರೂ ಪ್ರಶ್ನೋತ್ತರಗಳನ್ನು ಮೊದಲೇ ಬರೆದುಕೊಂಡು ಬರ್ತಾರಾ? ಈ ವಿಡಿಯೋವನ್ನ ಸರಿಯಾಗಿ ಗಮಿನಿಸಿ. ವಿಡಿಯೋದ ಮೊದಲ ಮೂರು ಸೆಕೆಂಡ್​ಗಳಲ್ಲಿ ಸಂದರ್ಶನದ ಪ್ರಶ್ನೆ ಮತ್ತು ಉತ್ತರಗಳೆರೆಡು ಮೋದಿಯವರ ಕೈಯಲ್ಲಿರುವುದು ಕಾಣುತ್ತದೆ. ಮೋದಿ ತಮ್ಮೆಲ್ಲಾ ಸಂದರ್ಶನದಂತೆಯೇ ಈ ಸಂದರ್ಶನಕ್ಕೂ ಪ್ರಶ್ನೋತ್ತರಗಳನ್ನು ರೆಡಿ ಮಾಡಿಕೊಂಡು ಬಂದಿದ್ದಾರೆ.ಇದಕ್ಕೆ ಈ ವಿಡಿಯೋನೇ ಸಾಕ್ಷಿ ಅಂತ ಹೇಳಿದ್ದಾರೆ.

ರಾಹುಲ್ ಗಾಂಧಿ ಜೊತೆ  ಪ್ರಧಾನಿ ಮೋದಿ ಪತ್ರಿಕಾಗೋಷ್ಟಿಯಾಗಲೀ, ಚರ್ಚೆಯಾಗಲಿ ಯಾಕೆ ನಡೆಸೋದಿಲ್ಲ ಅನ್ನೋದು ಇದರಿಂದಲೇ ತಿಳಿಯುತ್ತೆ ಅಂತ ರಮ್ಯಾ ಕಾಲೆಳೆದಿದ್ದಾರೆ.



- Advertisement -

Latest Posts

Don't Miss