- Advertisement -
ಬೆಂಗಳೂರು: ರಾಜ್ಯದ ಜನರಿಗೆ ಮತ್ತೆ ವಿದ್ಯುತ್ ಬೆಲೆ ಏರಿಕೆಯ ಬಿಸಿ ತಟ್ಟಲಿದೆ. ಜೂನ್ 1ನೇ ತಾರೀಖಿನಿಂದಲೇ ಪ್ರತಿ ಯೂನಿಟ್ ವಿದ್ಯುತ್ ಗೆ 45ಪೈಸೆಯಿಂದ-50 ಪೈಸೆ ಹೆಚ್ಚಳವಾಗೋ ಸಾಧ್ಯತೆಯಿದೆ.
ರಾಜ್ಯದಲ್ಲಿನ ಎಲ್ಲಾ ಎಸ್ಕಾಂ ಮತ್ತು ಇತರೆ ವಿದ್ಯುತ್ ಕಂಪನಿಗಳು ಕೆಇಆರ್ ಸಿ ಗೆ (ಕರ್ನಾಟಕ ಎಲೆಕ್ಟ್ರಾನಿಕ್ ರೆಗ್ಯುಲೇಟರಿ ಕಮಿಷನ್) ಬೆಲೆ ಏರಿಕೆ ಮಾಡುವಂತೆ ಪ್ರಸ್ತಾವನೆ ಸಲ್ಲಿಸಿದ್ದವು. ಪ್ರತಿ ವರ್ಷ ಏಪ್ರಿಲ್ 1ರಂದು ವಿದ್ಯುತ್ ದರ ಪರಿಷ್ಕರಣೆ ಮಾಡಲಾಗುತ್ತಿತ್ತು. ಆದ್ರೆ ಈ ಬಾರಿ ಲೋಕಸಭಾ ಚುನಾವಣೆ ನಿಗದಿಯಾಗಿದ್ದರಿಂದ ದರ ಏರಿಕೆ ಮಾಡಲಾಗಿರಲಿಲ್ಲ.
ಸದ್ಯ ಲೋಕಸಭಾ ಚುನಾವಣೆ ಮುಗಿದಿದ್ದು, ಕರ್ನಾಟಕ ವಿದ್ಯುತ್ ನಿಗಮ ಮಂಡಳಿಯು ದರ ಏರಿಕೆ ಮಾಡುವ ಬಗ್ಗೆ ಮುಖ್ಯಮಂತ್ರಿಗೆ ಪ್ರಸ್ತಾವನೆ ಸಲ್ಲಿಸಿದೆ. ಹಾಗಾಗಿ ಜೂನ್ 1ರಿಂದಲೇ ವಿದ್ಯುತ್ ಬೆಲೆ ಏರಿಕೆ ಆದೇಶ ನಿರೀಕ್ಷೆ ಮಾಡಲಾಗಿದೆ.
- Advertisement -