Sunday, October 13, 2024

Latest Posts

ರಾಜಕೀಯ ಸುಳಿಯಲ್ಲಿ ‘ವಿರಾಟ್’- ಸುಳ್ಳು ಹೇಳ್ತಿದ್ದಾರಾ ಪ್ರಧಾನಿ ಮೋದಿ?

- Advertisement -

ನವದೆಹಲಿ: ರಾಜೀವ್ ಗಾಂಧಿ ಅಧಿಕಾರದಲ್ಲಿದ್ದಾಗ ಯುದ್ದನೌಕೆಯನ್ನು ತಮ್ಮ ರಜಾ ದಿನಗಳನ್ನು ಕಳೆಯಲು ಸ್ವಂತ ಟ್ಯಾಕ್ಸಿಯಂತೆ ಬಳಸಿಕೊಳ್ಳುತ್ತಿದ್ದರು ಎಂಬ ಪ್ರಧಾನಿ ನರೇಂದ್ರ ಮೋದಿ ಆರೋಪವನ್ನು ನೌಕಾಪಡೆಯ ನಿವೃತ್ತ ಅಧಿಕಾರಿಗಳು ತಳ್ಳಿಹಾಕಿದ್ದು, ಪ್ರಧಾನಿ ಹೇಳಿಕೆ ತಪ್ಪು ಎಂದಿದ್ದಾರೆ.

ದೇಶದ ಗಡಿ ಕಾಯಲು ಬಳಸಬೇಕಾಗಿದ್ದ ಐಎನ್‌ಎಸ್ ವಿರಾಟ್ ನೌಕೆಯನ್ನು ರಾಜೀವ್ ಗಾಂಧಿ ಕುಟುಂಬ ರಜೆಯ ಮೋಜು ಅನುಭವಿಸಲು ಲಕ್ಷದ್ವೀಪಕ್ಕೆ ತೆರಳಲು ಸ್ವಂತ ಖಾಸಗಿ ಟ್ಯಾಕ್ಸಿಯಂತೆ ಬಳಸಿಕೊಂಡಿದ್ರು. 10 ದಿನ ಆ ನೌಕೆ ಅಲ್ಲಿಯೇ  ಇತ್ತು ಅಂತ ಪ್ರಧಾನಿ ನರೇಂದ್ರ ಮೋದಿ ನಿನ್ನೆ ಆರೋಪಿಸಿದ್ದರು.

ಈ ಕುರಿತು ಪ್ರಕಟಣೆ ನೀಡಿರುವ, ಯುದ್ಧನೌಕೆ ಐಎನ್‌ಎಸ್ ವಿರಾಟ್ ನ ಮಾಜಿ ಕಮಾಂಡಿಂಗ್ ಆಫೀಸರ್ ಗಳಾದ  ವಿನೋದ್ ಪಸ್ರಿಚಾ ಮತ್ತು ಅರುಣ್ ಪ್ರಕಾಶ್ ಯುದ್ಧ ನೌಕೆಯನ್ನು ಮಾಜಿ ಪ್ರಧಾನಿ ರಾಜೀವ್ ಗಾಂಧಿ ದುರ್ಬಳಕೆ ಮಾಡಿಕೊಂಡಿರಲಿಲ್ಲ. 32 ವರ್ಷಗಳ ಹಿಂದೆ ರಾಜೀವ್ ಗಾಂಧಿ ಹಾಗೂ ಅವರ ಪತ್ನಿ ಸೋನಿಯಾ ಗಾಂಧಿ  ಐಎನ್‌ಎಸ್ ವಿರಾಟ್‌ ಏರಿದ್ದು ನಿಜ. ಆದರೆ ಅದು ರಜೆಯ ಮೋಜಿಗಾಗಿ ಅಲ್ಲ. ಲಕ್ಷದ್ವೀಪ ಅಭಿವೃದ್ಧಿ ಪ್ರಾಧಿಕಾರದ ಸಭೆಗಾಗಿ, ಅಧಿಕೃತ ಕೆಲಸದ ನಿಮಿತ್ತ ಹೊರಟಿದ್ದರು. ಬಂಗಾರಾಮ್ ದ್ವೀಪದಲ್ಲಿ ಸಭೆ ನಡೆಸಲು ರಾಜೀವ್ ಹೊರಟಿದ್ದರು. ಇನ್ನು ಕಚೇರಿ ಕೆಲಸಗಳಿಗೆ ತೆರಳುವಾಗ ಪತ್ನಿಯೊಂದಿಗೆ ಪ್ರಯಾಣಿಸಲು ಪ್ರಧಾನಿಗೆ ಅಧಿಕಾರವಿರುತ್ತದೆ. ಇವರೊಂದಿಗೆ ಇಬ್ಬರು ನೌಕಾದಳದ ಅಧಿಕಾರಿಗಳು ಇದ್ದರು. ಇನ್ನು ತುರ್ತು ಸೇವೆಗಾಗಿ ಶಿಷ್ಚಾಚಾರದ ಅನುಗುಣವಾಗಿಯೇ ಅಲ್ಲಿ ಸಣ್ಣದೊಂದು ಹೆಲಿಕಾಪ್ಟರ್ ನಿಯೋಜಿಸಲಾಗಿತ್ತು. ಅವರ ಸುರಕ್ಷತೆಗಾಗಿ ನೌಕಾಪಡೆಯ ಸಿಬ್ಬಂದಿ ದ್ವೀಪಕ್ಕೆ ಮೊದಲೇ ತೆರಳಿದ್ದರು ಅಂತ ಪಸ್ರಿಚಾ ಹೇಳಿದ್ದಾರೆ.

ಇನ್ನು ಈ ಅವಧಿಯಲ್ಲಿ ಐಎನ್‌ಎಸ್ ವಿರಾಟ್‌ನ ಕಮಾಂಡಿಂಗ್ ಆಫೀಸರ್ ಆಗಿದ್ದ ನಿವೃತ್ತ ವೈಸ್ ಅಡ್ಮಿರಲ್ ವಿನೋದ್ ಪಸ್ರಿಚಾ ಕೂಡಾ ರಾಜೀವ್ ಕುಟುಂಬವು ದ್ವೀಪಕ್ಕೆ ತೆರಳಲು ನೌಕೆಯನ್ನು ಬಳಸಿಕೊಂಡಿದೆ ಎಂಬ ಆರೋಪವನ್ನು ನಿರಾಕರಿಸಿದ್ದಾರೆ. ಅಲ್ಲದೆ ಭಾರತೀಯ ಸೇನಾಪಡೆಯನ್ನು ರಾಜಕೀಯ ಲಾಭಕ್ಕಾಗಿ ತಳುಕು ಹಾಕೋದು ತಪ್ಪು ಅಂತಲೂ ಬೇಸರ ವ್ಯಕ್ತಪಡಿಸಿದ್ದಾರೆ.

ಒಟ್ನಲ್ಲಿ 30 ವರ್ಷಗಳ ಕಾಲ ತನ್ನ ಕಾರ್ಯಕ್ಷಮತೆ ತೋರಿ ದೇಶ ಸೇವೆ ಮಾಡಿದ್ದ ಐಎನ್ಎಸ್ ವಿರಾಟ್ ಇದೀಗ ರಾಜಕೀಯ ಸುಳಿಯಲ್ಲಿ ಸಿಲುಕೋ ಮೂಲಕ ಈ ರೀತಿ ಸುದ್ದಿಯಾಗ್ತಿರೋದು ನಿಜಕ್ಕೂ ವಿಷಾದನೀಯ.

- Advertisement -

Latest Posts

Don't Miss