ಹುಬ್ಬಳ್ಳಿ: ದೇವೇಗೌಡರ ಕುಟುಂಬದ ಕಣ್ಣೀರು ಡಿಕೆಶಿಗೆ ಶಿಫ್ಟ್ ಆಗಿದೆ. ಕುಂದಗೋಳಕ್ಕೆ ಬಂದು ಕಣ್ಣೀರು ಹಾಕ್ತಿದ್ದಾರೆ, ಸಹವಾಸ ದೋಷದಿಂದ ಡಿಕೆಶಿಗೆ ಕಣ್ಣೀರು ಬರ್ತಿದೆ ಅಂತ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಟೀಕಿಸಿದ್ದಾರೆ.
ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆ ವರೂರ ಗ್ರಾಮದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಶೆಟ್ಟರ್, ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನ ಗಂಟು-ಮೂಟೆ ಕಟ್ಟುವಂತೆ ಕಟ್ಟಿ ಮನೆಗೆ ಕಳುಹಿಸಬೇಕಿದೆ. ಈ ಚುನಾವಣೆ ಬಿಜೆಪಿ ಅಭ್ಯರ್ಥಿ ಚಿಕ್ಕನಗೌಡ್ರನ್ನ ಶಾಸಕನನ್ನಾಗಿ ಮಾಡೋದಕ್ಕಲ್ಲ, ಬದಲಾಗಿ ಯಡಿಯೂರಪ್ಪನವರನ್ನ ಸಿಎಂ ಮಾಡೋ ಚುನಾವಣೆ ಅಂತ ಮಾತನಾಡಿದ್ರು.
ಇನ್ನು ಪ್ರತಿಪಕ್ಷದ ನಾಯಕರ ಬಗ್ಗೆ ಮಾತನಾಡ್ತಿದ್ದ ಶೆಟ್ಟರ್, ಸದಾ ಕಣ್ಣೀರು ಹಾಕೋ ದೇವೇಗೌಡರ ಕುಟುಂಬದ ಸಹವಾಸ ದೋಷವೇ ಸಚಿವ ಡಿ.ಕೆ.ಶಿವಕುಮಾರ್ ಕುಂದಗೋಳದಲ್ಲಿ ಕಣ್ಣೀರು ಹಾಕೋದಕ್ಕೆ ಕಾರಣ. ದೇವೇಗೌಡ್ರ ಕುಟುಂಬದ ಕಣ್ಣೀರು ಡಿಕೆಶಿಗೆ ಶಿಫ್ಟ್ ಆಗಿದೆ ಅಂತ ಲೇವಡಿ ಮಾಡಿದ್ರು.
ಅಲ್ಲದೆ ಇತ್ತ ರಾಜ್ಯದ ಜನತೆ ಬರಗಾಲದಿಂದ ತತ್ತರಿಸಿದ್ದಾರೆ ಈ ಮಧ್ಯೆ ಸಿಎಂ ಕುಮಾರಸ್ವಾಮಿ ರೆಸಾರ್ಟ್ ನಲ್ಲಿ ಕುಳಿತಿದ್ದಾರೆ. ಸರ್ಕಾರದ ಅಂತ್ಯ ಕಾಲ ಬಂದಿದೆ. ಅಲ್ಲಿ ಮೇ23ಕ್ಕೆ ಮೋದಿ ಪ್ರಧಾನಿ, ಇಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗ್ತಾರೆ ಅಂತ ವಿಶ್ವಾಸ ವ್ಯಕ್ತಪಡಿಸಿದ ಜಗದೀಶ್ ಶೆಟ್ಟರ್ ಹುಬ್ಬಳ್ಳಿ-ಧಾರವಾಡಕ್ಕೆ ಈ ಹಿಂದೆ ಅಧಿಕಾರದಲ್ಲಿದ್ದ ಸಿದ್ದರಾಮಯ್ಯನವರ ಕೊಡುಗೆ ಏನು ಅಂತ ಪ್ರಶ್ನಿಸಿದ್ರು.