Thursday, November 30, 2023

Latest Posts

ಮಾಜಿ ಸಿಎಂ ಸಿದ್ದರಾಮಯ್ಯಗೆ ಕುಟುಕಿದ ‘ಹಳ್ಳಿಹಕ್ಕಿ’

- Advertisement -

ಮಂಡ್ಯ: ಎಲ್ಲೆಡೆ ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು ಅನ್ನೋ ಕೂಗು ಕೇಳಿಬಂದಿರೋದಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಕಿಡಿಕಾರಿದ್ದಾರೆ.

ಮದ್ದೂರಿನಲ್ಲಿ ಮಾತನಾಡಿದ ಎಚ್.ವಿಶ್ವನಾಥ್ ಕಾಂಗ್ರೆಸ್ ಶಾಸಕರು, ಮಂತ್ರಿಗಳು ತಮ್ಮ ವರ್ತನೆ ಬಿಡಬೇಕು. ಸುಮ್ಮಸುಮ್ಮನೆ ಸಿದ್ದರಾಮಯ್ಯ ಮತ್ತೆ ಸಿಎಂ ಆಗಲಿ ಅನ್ನೋ ಹೇಳಿಕೆ ನೀಡೋದನ್ನ ಬಿಡಬೇಕು.

ಇನ್ನು ಸಿದ್ದರಾಮಯ್ಯಗೆ ಸಿಎಂ ಆಗೋ ವಾತಾವರಣ ಕಲ್ಪಿಸಿದ್ದು ನಾವೇ. ಅವರು 5 ವರ್ಷ ಸಿಎಂ ಆಗಿದ್ದಾಗ ಏನು ಮಾಡಿದ್ರು ಅಂತ ವಿಶ್ವನಾಥ್ ಪ್ರಶ್ನಿಸಿದ್ರು. ಅಲ್ಲದೆ ಅವರು ಮತ್ತೆ ಸಿಎಂ ಆಗಲಿ ಅಂತ ಕೆಲವರು ಚಮಚಾಗಿರಿ ಮಾಡ್ತಿದ್ದಾರೆ. ಅವರೇನು ದೇವರಾಜು ಅರಸು ರೀತಿ ಆಡಳಿತ ಕೊಟ್ರಾ? 5 ವರ್ಷ ಪೂರೈಸಿದ ಸಿಎಂ ನಾನು ಅಂತ ಸಿದ್ದರಾಮಯ್ಯ ಬೀಗುತ್ತಾರೆ. ಇಷ್ಟಾದ್ರೂ 130 ಇದ್ದ ಸಂಖ್ಯಾ ಬಲ 78ಕ್ಕೆ ಯಾಕೆ ಬಂತು? ಅಂತ ಕಟುವಾಗಿ ಟೀಕಿಸಿದ್ರು.

ಸಿದ್ದು ನಾನೇ ಮತ್ತೆ ಸಿಎಂ ಅನ್ನೋದು ಬಾಯಿಚಪಲಕ್ಕೆ

ಸಿದ್ದರಾಮಯ್ಯ ಮತ್ತೆ ನಾನು ಸಿಎಂ ಆಗ್ತೀನಿ ಎಂದ ವಿಚಾರಕ್ಕೆ ಪ್ರತಿಕ್ರಿಯಿಸಿದ ವಿಶ್ವನಾಥ್, ಸಿದ್ದರಾಮಯ್ಯ ನಾನು ಮತ್ತೆ ಸಿಎಂ ಆಗ್ತೀನಿ ಅನ್ನೋದು ಬಾಯಿ ಚಪಲಕ್ಕೆ. ಬಾಯಿ ಚಪಲದಿಂದ ಈ ರೀತಿ ಮಾತನಾಡ್ತಾರೆ ಅಷ್ಟೇ ಅಂತ ಹರಿಹಾಯ್ದರು. ಇನ್ನು 4 ವರ್ಷ ಕುಮಾರಸ್ವಾಮಿಯವರೇ ಸಿಎಂ. ಸಿದ್ದರಾಮಯ್ಯ ಬೇಕಾದ್ರೆ 2022ಕ್ಕೆ ಸಿಎಂ ಆಗಲಿ ಯಾರು ಬೇಡ ಅಂತಾರೆ ಅಂತ ಟೀಕಿಸಿದ್ರು.

- Advertisement -

Latest Posts

Don't Miss