Tuesday, May 30, 2023

Latest Posts

ಮಂಡ್ಯದಲ್ಲಿ ನಿಖಿಲ್ ಕುಮಾರ್ ಗೆದ್ರಂತೆ- ಲೀಡ್ ಎಷ್ಟು ಅಂತ ಈಗ್ಲೇ ಗೊತ್ತಂತೆ..!

- Advertisement -

ಮಂಡ್ಯ: ಮಂಡ್ಯ ಚುನಾವಣೆಯಲ್ಲಿ ನಿಖಿಲ್ ಕುಮಾರ್ ಗೆದ್ದಾಗಿದೆ. ಈ ಬಗ್ಗೆ ಯಾರು ಬೇಕಾದ್ರೂ ಬೆಟ್ಟಿಂಗ್ ಕಟ್ಟಬಹುದು ಅಂತ ಕೆ.ಆರ್.ಪೇಟೆ ಶಾಸಕ ನಾರಾಯಣಗೌಡ ಹೇಳಿದ್ದಾರೆ. ಫಲಿತಾಂಶದ ದಿನಕ್ಕೆ ಇನ್ನೂ ಕೆಲ ದಿನಗಳ ಬಾಕಿ ಇರುವಾಗಲೇ ನಾರಾಯಣಸ್ವಾಮಿ ಭವಿಷ್ಯ ನುಡಿದಿದ್ದಾರೆ.

ಮಂಡ್ಯದಲ್ಲಿ ಮಾತನಾಡಿದ ನಾರಾಯಣಗೌಡ, ಮೈತ್ರಿ ಬೆಂಬಲಿತ ನಿಖಿಲ್ ಕುಮಾರ್ ಈಗಾಗಲೇ ಗೆದಿದ್ದು ಈ ಬಗ್ಗೆ ಯಾರು ಬೇಕಾದ್ರೂ ನನ್ನ ಬಳಿ ಬೆಟ್ಟಿಂಗ್ ಕಟ್ಟಬಹುದು ಅಂತ ಹೇಳಿದ್ದಾರೆ. ಬೆಟ್ಟಿಂಗ್ ಅಂದ್ರೆ ಲಕ್ಷಾಂತರ, ಕೋಟ್ಯಾಂತರ ರೂಪಾಯಿ ಅಲ್ಲ. ಒಂದು ರೂಪಾಯಿ ಕಟ್ಟಿದ್ರೂ ಆಯ್ತು, ನೂರಾ ಒಂದು ರೂಪಾಯಿ ಕಟ್ಟಿದ್ರೂ ಆಯ್ತು ಅಂತ ಚಾಲೆಂಜ್ ಮಾಡಿದ್ದಾರೆ. ಲೀಡ್ ಎಷ್ಟು ಅಂತ ಹೇಳಲ್ಲ. ಕೆಲವು ಕಡೆ ಪಕ್ಷೇತರ ಅಭ್ಯರ್ಥಿ ಸುಮಲತಾ ಲೀಡ್ ಪಡೀತಾರೆ ಅನ್ನೋದು ಭ್ರಮೆ. ಯಾಕಂದ್ರೆ ಎಲ್ಲಾ ಕಡೆ ಜನ ಜೆಡಿಎಸ್ ಶಾಸಕರನ್ನು ಗೆಲ್ಲಿಸಿದ್ದಾರೆ. ಗೆದ್ದ ಶಾಸಕರೂ ಒಳ್ಳೆ ಕೆಲಸ ಮಾಡ್ತಿದ್ದಾರೆ ಅಂತ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

- Advertisement -

Latest Posts

Don't Miss