ಮಂಡ್ಯ: ಗಂಡಸ್ಥನ ಇದ್ರೆ ಸುಮಲತಾ ಪರ ಪ್ರಚಾರ ಮಾಡಿದ್ದನ್ನ ನೇರವಾಗಿ ಹೇಳಬೇಕು ಅಂತ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಗೆ ಕೆ.ಆರ್ ಪೇಟೆ ಶಾಸಕ ನಾರಾಯಣಗೌಡ ಸವಾಲು ಹಾಕಿದ್ದಾರೆ.
ಕಳೆದ ವಾರ ಮಾಜಿ ಶಾಸಕ ಚಂದ್ರಶೇಖರ್, ನಾನ್ನನ್ನು ಅಭ್ಯರ್ಥಿ ನಿಖಿಲ್ ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ನೇರವಾಗಿ ಕರೆದಿದ್ರೆ ಮೈತ್ರಿ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿದ್ದೆ. ಅವರು ಕರೆಯದ ಕಾರಣ ನಾನು ತಟಸ್ಥವಾಗಿದ್ದೆ ಎಂದು ಹೇಳಿಕೆ ನೀಡಿದ್ರು. ಇದಕ್ಕೆ ಪ್ರತಿಕ್ರಿಯಿಸಿರೋ ಶಾಸಕ ನಾರಾಯಣ ಗೌಡ, ಸ್ವತಃ ರೇವಣ್ಣ ಬಂದು ಚಂದ್ರಶೇಖರ್ ರನ್ನು ಕರೆದ್ರು. ಅವರು ಕುಮಾರಣ್ಣನಿಗಿಂತ ದೊಡ್ಡವರು. ಚಂದ್ರಶೇಖರ್ ಗೆ ನಿಖಿಲ್ ಪರ ಪ್ರಚಾರ ಮಾಡಲು ಇಷ್ಟವಿರಲಿಲ್ಲ. ಹಾಗಾಗಿ ಕಾಂಟ್ರವರ್ಸಿ ಮಾಡೋದಕ್ಕೆ ಮಾತನಾಡ್ತಾರೆ ಅಂತ ತಿರುಗೇಟು ನೀಡಿದ್ದಾರೆ.
ಅಲ್ಲದೆ ಸುಮಲತಾ ಪರ ಪ್ರಚಾರ ಮಾಡಿದ್ದನ್ನ ಮಕ್ಕಳೂ ಸಹ ನೋಡಿದ್ದಾರೆ. ಸುಮಲತಾ ಬರೋ ಹಳ್ಳಿಗಳಿಗೆ ಮೊದಲೇ ಹೋಗಿ ಹಣ ಹಂಚಿ, ಪಟಾಕಿ ಸಿಡಿಸೋದಕ್ಕೂ ಕೂಡ ಚಂದ್ರಶೇಖರ್ ವ್ಯವಸ್ಥೆ ಮಾಡಿದ್ದಾರೆ. ಗಂಡಸ್ಥನ ಇದ್ದರೆ ನೇರವಾಗಿ ಎದುರಿಸಿ ಅಂತ ನಾರಾಯಣಗೌಡ ಸವಾಲು ಹಾಕಿದ್ದಾರೆ.