Wednesday, November 29, 2023

Latest Posts

ನಟ ರವಿಚಂದ್ರನ್ ಪುತ್ರಿಯ ವಿವಾಹ- ಹೇಗಿದೆ ಗೊತ್ತಾ ದುಬಾರಿ ಇನ್ವಿಟೇಷನ್..?

- Advertisement -

ಬೆಂಗಳೂರು: ಕ್ರೇಜಿ ಸ್ಟಾರ್ ಪುತ್ರಿಯ ವಿವಾಹ ದಿನಾಂಕ ನಿಗದಿಯಾಗಿದ್ದು, ಇದಕ್ಕಾಗಿ ಕ್ರೇಜಿ ಕುಟುಂಬ ಭರ್ಜರಿ ತಯಾರಿಯಲ್ಲಿ ತೊಡಗಿದ್ದು, ರವಿಮಾಮ ಖುದ್ದಾಗಿ ಅತಿಥಿಗಳನ್ನ ಆಹ್ವಾನ ಮಾಡ್ತಿದ್ದಾರೆ.

ಇದೇ ತಿಂಗಳ 28 ಮತ್ತು 29ರಂದು ಮಗಳು ಗೀತಾಂಜಲಿ ವಿವಾಹ ನಡೆಯಲಿದೆ. ಉದ್ಯಮಿ ಅಜಯ್ ಎಂಬುವರ ಜೊತೆ  ಗೀತಾಂಜಲಿ ಮದುವೆ ಬೆಂಗಳೂರು ಅರಮನೆ ಮೈದಾನದ ವೈಟ್ ಪೆಟಲ್ ನಲ್ಲಿ ಅದ್ದೂರಿಯಾಗಿ ನಡೆಯಲಿದೆ. ತಮ್ಮ ಸಿನಿಮಾಗಳಂತೆಯೇ ಮಗಳ ಮದ್ವೆಯನ್ನ ಕಲರ್ ಫುಲ್ ಆಗಿ ಮಾಡೋದಕ್ಕೆ ರವಿಮಾಮ ಪ್ಲ್ಯಾನ್ ಮಾಡಿದ್ದಾರೆ.

ಇನ್ನು ರವಿಚಂದ್ರನ್ ತಮ್ಮ ಪುತ್ರಿಯ ವಿವಾಹ ಆಮಂತ್ರಣ ಪತ್ರಿಕೆಯನ್ನ ಸ್ಪೆಷಲ್ ಆಗಿ ಮಾಡಿಸಿದ್ದು ಎಲ್ಲರ ಗಮನ ಸೆಳೆದಿದೆ. ಬಳಿ ಬಣ್ಣದ ಬಾಕ್ಸ್ ತೆರೆದರೆ ಅದರಲ್ಲಿ 3 ಗೋಲ್ಡನ್ ಕಲರ್ ಡಬ್ಬಿ. ಆ ಡಬ್ಬಿಗಳಲ್ಲಿ ಪಿಸ್ತಾ,ಗೋಡಂಬಿ,ಖರ್ಜೂರ ತುಂಬಿಸಲಾಗಿದೆ. ಹಾಗೇ ಪಕ್ಕದಲ್ಲಿ 3ಡಿ ಇನ್ವಿಟೇಷನ್ ಇಡಲಾಗಿದೆ. ಇದರೊಂದಿಗೆ ಅತಿಥಿಗಳಿಗೆ ದುಬಾರಿ ಗಿಫ್ಟ್ ಬಾಕ್ಸ್ ಕೂಡ ಕೊಟ್ಟಿದ್ದಾರೆ ರವಿಮಾಮ.

ಇನ್ನು ಒಂದು ಆಮಂತ್ರಣ ಪತ್ರಿಕೆಗೆ ಸುಮಾರು 5 ಸಾವಿರದಿಂದ 7 ಸಾವಿರ ರೂಪಾಯಿ ಖರ್ಚಾಗಿದ್ದು ರವಿಚಂದ್ರನ್ ತಾವೇ ಖುದ್ದಾಗಿ ಅತಿಥಿಗಳಿಗೆ ಆಮಂತ್ರಣ ಪತ್ರಿಕೆ ನೀಡುತ್ತಿದ್ದಾರೆ. ಇನ್ನು ಮಗಳ ಮದುವೆ ಕುರಿತು ಮಾಹಿತಿ ನೀಡಲು ನಾಳೆ ರಾಜಾಜಿನಗರದ ತಮ್ಮ ನಿವಾಸದಲ್ಲಿ ನಟ ರವಿಚಂದ್ರನ್ ಸುದ್ದಿ ಗೋಷ್ಟಿ ನಡೆಸಲಿದ್ದಾರೆ.

ದುಬಾರಿ ಮದುವೆ ಆಮಂತ್ರಣ ಪತ್ರಿಕೆ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ-
https://www.youtube.com/watch?v=hQaAPP_TuKQ&feature=youtu.be

- Advertisement -

Latest Posts

Don't Miss