Wednesday, January 15, 2025

Latest Posts

ಕಾಲಲ್ಲಿ ರಕ್ತ ಸುರಿದ್ರೂ ಆಟ ನಿಲ್ಲಿಸಲಿಲ್ಲ- ಶೇನ್ ವಾಟ್ಸನ್ ಕಾಲಿಗೆ 6 ಹೊಲಿಗೆ!

- Advertisement -

ಅಂತೂ ಇಂತು ಸೀಸನ್ ೧೨ ಐಪಿಎಲ್ ಟೂರ್ನಿಗೆ ತೆರೆ ಬಿತ್ತು..ಕಳೆದ ಎರಡು ತಿಂಗಳುಗಳಿಂದ ಅಭಿಮಾನಿಗಳಿಗೆ ರಸದೌತಣ ಉಣಬಡಿಸಿದ್ದ IPL ಗುಡ್ ಬೈ ಹೇಳಿ ಎರಡು ದಿನ ಕಳೆಯಿತು. ಜೊತೆಗೆ ಹಲವು ಅವಿಸ್ಮರಣೀಯ ಕ್ಷಣಗಳಿಗೂ ಸಾಕ್ಷಿ ಆಯ್ತು.

ಚೆನ್ನೈ ತಂಡದ ಓಪನರ್ ಬ್ಯಾಟ್ಸ್‌ಮನ್‌ ಶೇನ್ ವಾಟ್ಸನ್ ಫೈನಲ್ ಫೈಟ್ ವೇಳೆ, ನಡೆಸಿದ ಹೋರಾಟದ್ದೇ ಮಾತು. ಪಂದ್ಯದುದ್ದಕ್ಕೂ ಕೆಚ್ಚೆದೆಯ ಬ್ಯಾಟಿಂಗ್ ನಡೆಸಿದರಾದ್ರು ಅಂತಿಮ ಹಂತದಲ್ಲಿ ರನ್ ಔಟ್ ಆಗಿದ್ದು ಎಲ್ಲೋ ಒಂದು ಕಡೆ ತಂಡದ ಸೋಲಿಗೆ ಕಾರಣವಾಯಿತು. ಸದ್ಯದ ವಿಷ್ಯ ಏನಪ್ಪ ಅಂದ್ರೆ. ಕಾಲಲ್ಲಿ ರಕ್ತ ಚಿಮ್ಮುತ್ತಿದ್ರು, ಚೆಂಡನ್ನು ಬೌಂಡರಿಗಟ್ಟಿದ್ದ ವಾಟ್ಸನ್ ಅಭಿಮಾನಿಗಳ ಮೋಸ್ಚ್ ಫೇವರಿಟ್ ಆಗಿದ್ದಾರೆ.

ಮೊನ್ನೆ ವಾಟ್ಸನ್ ಬಾರಿಸಿದ ಸಿಕ್ಸರ್, ಬೌಂಡರಿಗಳನ್ನು ಎಂಜಾಯ್​ ಮಾಡಿದ್ದ ಫ್ಯಾನ್ಸ್​ಗೆ ಅವರ ಕಾಲಲ್ಲಿ ಹರಿಯುತ್ತಿದ್ದ ರಕ್ತ ಕಂಡಿರಲಿಲ್ಲ. ಮ್ಯಾಚ್​ ನಡೆದ 20 ಗಂಟೆಗಳ ನಂತರ ಹರ್ಭಜನ್ ಸಿಂಗ್, ಶೇನ್​ ವ್ಯಾಟ್ಸನ್​ರ  ಪೋಟೋ ಹಾಕಿ ವ್ಯಾಟ್ಸನ್ ಮೊಣಕಾಲಲ್ಲಿ ಕೆಂಪಗೆ ಕಾಣ್ತಿರೋದು ಏನು ಗೊತ್ತಾ? ಅದು ರಕ್ತ. ಪಂದ್ಯದ ವೇಳೆ, ಯಾರಾದ್ರೂ ವಾಟ್ಸನ್‌ ಮೊಣಕಾಲಿನಿಂದ ಸುರಿಯುತ್ತಿದ್ದ ರಕ್ತವನ್ನು ನೋಡಿದ್ದೀರಾ? ಪಂದ್ಯದ ನಂತರ ಆ ಗಾಯಕ್ಕೆ 6 ಹೊಲಿಗೆಗಳು ಬಿದ್ದಿವೆ. ಆಟದ ವೇಳೆ ರನ್ ಔಟ್ ಆಗೋದನ್ನು ತಪ್ಪಿಸಿಕೊಳ್ಳಲು ಡೈವ್ ಮಾಡಿದಾದ ಆದ ಗಾಯ ಇದು. ಆದ್ರೆ, ಯಾರಿಗೂ ಹೇಳದೇ ಆಟವನ್ನು ಮುಂದುವರಿಸಿದ್ರು, ಅಂತಾ ಬರೆದು ಪೋಸ್ಟ್‌ ಮಾಡಿದ್ದಾರೆ. ಭಜ್ಜಿ ಯಾವಾಗ ಈ ಫೋಟೋ ಪೋಸ್ಟ್​ ಮಾಡಿದ್ರೋ, ಸೋಶಿಯಲ್​ ಮೀಡಿಯಾಗಳಲ್ಲಿ ವಾಟ್ಸನ್ ಅಕ್ಷರಶಃ ಹೀರೋ ಆಗಿದ್ದಾರೆ. ಆಸಿಸ್ ಬ್ಯಾಟ್ಸ್‌ಮನ್‌ ಗಿರುವ ಕ್ರಿಕೆಟ್ ಮೇಲಿನ ಪ್ರೀತಿಗೆ ವಿಶ್ವ ಕ್ರಿಕೆಟ್ ಪ್ರೇಮಿಗಳು ಸಲಾಂ ಎಂದಿದ್ದಾರೆ..ಅಷ್ಟೇ ಅಲ್ಲದೇ ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ಇನ್ಸ್ ಸ್ಟಾಗ್ರಾಂ ಖಾತೆಯಲ್ಲಿ ವಾಟ್ಸನ್ ಫೋಟೋ ಪೋಸ್ಟ್ ಮಾಡಿದ್ದು..ದಿಸ್ ಇಸ್ ಗಾಡ್ ಲೆವೆಲ್ ಎಂದು ಬರೆದುಕೊಂಡಿದೆ.

https://www.instagram.com/p/BxbuC5fBFh3/?utm_source=ig_share_sheet&igshid=o02nuqaqfvxn
https://twitter.com/Pathan4141/status/1127980224363126784
- Advertisement -

Latest Posts

Don't Miss