Monday, September 25, 2023

Latest Posts

‘ಈಶ್ವರಪ್ಪ ಮೆದುಳು-ನಾಲಿಗೆ ಲಿಂಕ್ ತಪ್ಪಿದೆ’- ಸಿದ್ದರಾಮಯ್ಯ ಕಿಡಿ

- Advertisement -

ಹುಬ್ಬಳ್ಳಿ: ಈಶ್ವರಪ್ಪಗೆ ಬ್ರೈನ್ ಗೆ ನಾಲಿಗೆ ಲಿಂಕ್ ತಪ್ಪಿದೆ ಅಂತ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಸಮ್ಮಿಶ್ರ ಸರ್ಕಾರ ಪತನವಾಗುತ್ತೆ ಅಂತ ಬಿಜೆಪಿಯವ್ರು ಒಂದು ವರ್ಷದಿಂದ ಹೇಳುತ್ತಿದ್ದಾರೆ. ಆದ್ರೆ ಜನ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದ್ರು.

ಇನ್ನು ನಿನ್ನೆ ಮಾಜಿ ಸಿಎಂ ಸಿದ್ದರಾಮಯ್ಯ ಹುಚ್ಚಾ ಕಣ್ರೀ ಅನ್ನೋ ಹೇಳಿಕೆಗೆ  ಪ್ರತಿಕ್ರಿಯಿಸಿದ ಸಿದ್ದು, ಈಶ್ವರಪ್ಪ ಮೆದುಳು ನಾಲಿಗೆ ಲಿಂಕ್ ತಪ್ಪಿದೆ. ಅವರ ಹೇಳಿಕೆಗೆಲ್ಲಾ ನಾನು ಪ್ರತಿಕ್ರಿಯೆ ನೀಡಲ್ಲ, ನಿನ್ನೆ ಡಿಕೆ ಶಿವಕುಮಾರ್ ರಿಯಾಕ್ಟ್ ಮಾಡಿದ್ದೇ ಸಾಕು ಅಂತ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.

ನಿನ್ನೆ ಈಶ್ವರಪ್ಪ ಮಾಜಿ ಸಿಎಂ ಸಿದ್ದರಾಮಯ್ಯ ಬಗ್ಗೆ ಏನ್ ಹೇಳಿದ್ರು ಅಂತ ನೋಡೋಕೆ ಇಲ್ಲಿ ಕ್ಲಿಕ್ ಮಾಡಿ

- Advertisement -

Latest Posts

Don't Miss