Tuesday, October 3, 2023

Latest Posts

2 ಸ್ಪೈಸ್ ಜೆಟ್ ವಿಮಾನಗಳಲ್ಲಿ ತಾಂತ್ರಿಕ ದೋಷ-ಬೆಂಗಳೂರು ವಿಮಾನ ನಾಗ್ಪುರದಲ್ಲಿ ಲ್ಯಾಂಡ್

- Advertisement -

ಮುಂಬೈ: ಸ್ಪೈಸ್ ಜೆಟ್ ನ 2 ಬೋಯಿಂಗ್ ಪ್ಯಾಸೆಂಜರ್ ವಿಮಾನಗಳಲ್ಲಿ ಇಂದು ಹಾರಾಟದ ವೇಳೆಯೇ ತಾಂತ್ರಿಕ ದೋಷ ಕಂಡು ಬಂದಿದೆ.

ಬೆಂಗಳೂರಿನಿಂದ ದೆಹಲಿಗೆ ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಸ್ಪೈಸ್ ಜೆಟ್ ನ ಎಸ್ ಜಿ  8720 ವಿಮಾನ ಹಾರಾಟದ ವೇಳೆ ಎಲ್ಲವೂ ಸರಿಯಿತ್ತು. ಆದರೆ ವಿಮಾನ ಟೇಕಾಫ್ ವೇಳೆ ತಾಂತ್ರಿಕ ದೋಷ ಕಂಡುಬಂದದ್ದನ್ನು ಗಮಿನಿಸಿದ ಪೈಲಟ್ ಎಟಿಸಿ(ಏರ್ ಟ್ರಾಫಿಕ್ ಕಂಟ್ರೋಲ್) ಗೆ ಮಾಹಿತಿ ನೀಡಿದರು. ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ವಿಮಾನವನ್ನು ನಾಗ್ಪುರಕ್ಕೆ ರವಾನೆ ಮಾಡಲಾಯ್ತು.  ಬೇರೆ ದಾರಿಯಿಲ್ಲದೆ ಪ್ರಯಾಣಿಕರು ಕೆಲ ಹೊತ್ತು ಅನಿವಾರ್ಯವಾಗಿ ಅಲ್ಲಿಯೇ ಇರಬೇಕಾಗಿ ಬಂತು. ಬಳಿಕ ಪ್ರಯಾಣಿಕರಿಗೆ ಸೂಕ್ತ ಪರ್ಯಾಯ ವಿಮಾನದ ಮೂಲಕ ಅಲ್ಲಿಂದ ಕಳುಹಿಸಿಕೊಡಲಾಯ್ತು

ಇಂಥಹದ್ದೇ ಮತ್ತೊಂದು ತಾಂತ್ರಿಕ ದೋಷ ಮುಂಬೈ ವಿಮಾನದಲ್ಲಿ ಕಾಣಿಸಿಕೊಂಡಿತ್ತು. ಇಂದು ಬೆಳಗ್ಗೆ 7.30ಕ್ಕೆ ಮುಂಬೈನಿಂದ ಚೆನ್ನೈನತ್ತ ಹೊರಟಿದ್ದ ಸ್ಪೈಸ್ ಜೆಟ್ ಎಸ್ ಜಿ-611 ವಿಮಾನ ತುರ್ತು ಭೂಸ್ಪರ್ಶ ಮಾಡಬೇಕಾಯ್ತು. ವಿಮಾನ ಟೇಕಾಫ್ ಆದ 16 ನಿಮಿಷಗಳ ನಂತರ ಕಾಣಿಸಿಕೊಂಡ ದೋಷದಿಂದ ಚೆನ್ನೈಗೆ ತೆರಳಲು ಸಾಧ್ಯವಿಲ್ಲ ಅಂತ ಅರಿತ ಪೈಲಟ್. ಎಟಿಸಿಗೆ ಸಂದೇಶ ರವಾನಿಸಿ ವಿಮಾನವನ್ನು ಮತ್ತೆ ಮುಂಬೈನಲ್ಲೇ ಇಳಿಸಲಾಯ್ತು ಅಂತ ಹೇಳಲಾಗಿದೆ.

- Advertisement -

Latest Posts

Don't Miss