ಹುಬ್ಬಳ್ಳಿ: ಉಪಚುನಾವಣೆ ಬಳಿಕ ಸಚಿವ ಡಿಕೆಶಿಗೆ ಮತ್ತೆ ಜವಾಬ್ದಾರಿ ಕೊಡಬೇಕು. ಅದಿರಿಂದ ಉತ್ತರ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಪಕ್ಷದ ಬಲವರ್ಧನೆಯಾಗಲಿದೆ ಅಂತ ಕೈ ಮುಖಂಡರು ವೇಣುಗೋಪಾಲ್ ಗೆ ಬೇಡಿಕೆಯಿಟ್ಟಿದ್ದಾರೆ.
ಮೇ 19ರಂದು ನಡೆಯಲಿರೋ ಕುಂದಗೋಳ ಕ್ಷೇತ್ರದ ಉಪಚುನಾವಣೆ ತೀವ್ರ ಪೈಪೋಟಿಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರು , ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷ ಮತ್ತಷ್ಟು ಬಲವರ್ಧನೆಯಾಗಬೇಕು ಅಂತೆನಿಸಿದ್ದು, ಇದರ ಜವಾಬ್ದಾರಿಯನ್ನ ಸಚಿವ ಡಿಕೆಶಿಗೆ ನೀಡಿ ಅಂತ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಗೆ ದುಂಬಾಲುಬಿದ್ದಿದ್ದಾರೆ ಎನ್ನಲಾಗಿದೆ.
ನಿನ್ನೆ ರಾತ್ರಿ ವೇಣುಗೋಪಾಲ್ ರನ್ನು ಭೇಟಿಯಾದ ಮುಖಂಡರು, ಅವಳಿ ನಗರದಲ್ಲಿ ಬಿಜೆಪಿ ದಬ್ಬಾಳಿಕೆ ಮಿತಿಮೀರುತ್ತಿದೆ. ಸ್ಥಳೀಯ ಬಿಜೆಪಿ ಮುಖಂಡರು ನಮ್ಮ ಮೇಲೆ ತೀವ್ರ ದಬ್ಬಾಳಿಕೆ ಮಾಡುತ್ತಿದ್ದಾರೆ. ಇದರಿಂದ ಪಕ್ಷದ ಬಲವರ್ಧನೆ ಕಷ್ಟವಾಗಿದೆ. ಹೀಗಾಗಿ ಸಚಿವ ಡಿ.ಕೆ ಶಿವಕುಮಾರ್ ಗೆ ಹುಬ್ಬಳ್ಳಿ-ಧಾರವಾಡ ಉಸ್ತುವಾರಿ ಹೊಣೆ ನೀಡಿದ್ರೆ ಇಲ್ಲಿ ಬಿಜೆಪಿ ಮೂಲೆಗುಂಪಾಗುತ್ತದೆ. ಹುಬ್ಬಳ್ಳಿ-ಧಾರವಾಡದಲ್ಲಿ ನಾವು ಅಧಿಕಾರ ಹಿಡಿಯಬಹುದು ಅಂತ ಬೇಡಿಕೆಯಿಟ್ಟಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ವೇಣುಗೋಪಾಲ್, ಈ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಬೇಡಿ ಅಂತ ಸ್ಥಳೀಯ ಮುಖಂಡರಿಗೆ ಭರವಸೆ ನೀಡಿದ್ದಾರೆ ಎನ್ನಲಾಗಿದೆ.