ಹುಬ್ಬಳ್ಳಿಯಲ್ಲಿ ಮಲೆನಾಡಿನ ವಾತಾವರಣ: ಬಿಟ್ಟು ಬಿಟ್ಟು ಸುರಿಯುವ ಮಳೆರಾಯ..!

Hubballi News: ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಕಳೆದ ಕೆಲ ದಿನಗಳಿಂದ ಮಲೆನಾಡ ವಾತಾವರಣ ನಿರ್ಮಾಣವಾಗಿದೆ. ಇಂದು ಮುಂಜಾನೆಯಿಂದ ವರುಣ ಅಬ್ಬರಿಸುತ್ತಿದ್ದಾನೆ. ಹತ್ತು ನಿಮಿಷಕ್ಕೊಮ್ಮೆ ಹುಬ್ಬಳ್ಳಿಯಲ್ಲಿ ಮಳೆ ಆರಂಭವಾಗ್ತಿದೆ.ಇಂದು ಮುಂಜಾನೆಯಿಂದಲೇ ಜಿಟಿ ಜಿಟಿ ಮಳೆ ಆರಂಭವಾಗಿದ್ದು,ಮದ್ಯಾಹ್ನ ಅರ್ದಗಂಟೆಗಳ ಕಾಲ ವರುಣ ಅಬ್ಬರಿಸಿದ್ದಾನೆ.

ಹೌದು..ಹುಬ್ಬಳ್ಳಿಯಲ್ಲಿ ಥೇಟ್ ಮಲೆನಾಡ ಅನುಭವ ಸಿಗುತ್ತಿದೆ.‌ ಮುಂಜಾನೆಯಿಂದ ಜನ ಸೂರ್ಯನ ಮುಖವೇ ನೋಡಿಲ್ಲ. ಬಿಟ್ಟು ಬಿಟ್ಟು ಧೋ ಅಂತಾ ಸುರಿಯುತ್ತಿರುವ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದೆ. ಜನ ಹೊರಗೆ ಬರುವುದಕ್ಕೂ ಹರಸಾಹಸ ಪಡುವಂತಾಗಿದೆ. ಕಳೆದ ಮೂರ್ನಾಲ್ಕು ದಿನದಿಂದ ಮೋಡ ಮುಸುಕಿದ ವಾತಾವರಣವಿದ್ದು, ವರುಣ ಅಬ್ಬರಿಸುತ್ತಿದ್ದಾನೆ.

ಈ ಬಜೆಟ್‌ನಿಂದ ರಾಜ್ಯ ಸಾಲದ ಕೂಪಕ್ಕೆ ಹೋಗುವ ಲಕ್ಷಣಗಳು ಕಾಣುತ್ತಿದೆ..!

ಪ್ರಾದೇಶಿಕ ಅಸಮತೋಲನದ ಬಜೆಟ್: ಸಿಎ ಕುಲಕರ್ಣಿ

ಸಾರ್ವಜನಿಕರಿಗೆ ಹೊರೆಯಾಗದ ಬಜೆಟ್ ಸ್ವಾಗತಾರ್ಹ: ಕೆಸಿಸಿಐ ಅಧ್ಯಕ್ಷ ಅಭಿಮತ

 

About The Author