Friday, May 9, 2025

Latest Posts

Prize Distribution : ಹುಬ್ಬಳ್ಳಿ : ನಾಳೆ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ , ಕಿತ್ತೂರು ಚೆನ್ನಮ್ಮ ಪ್ರಶಸ್ತಿ ಪ್ರದಾನ ಸಮಾರಂಭ

- Advertisement -

Hubballi News : ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿಕಾರಿ ಸಂಗೊಳ್ಳಿ ರಾಯಣ್ಣನ ೨೨೯ ನೇ ಜಯಂತಿ ಉತ್ಸವದ ಅಂಗವಾಗಿ ನಗರದ ವೀರರಾಣಿ ಕಿತ್ತೂರ ಚೆನ್ನಮ್ಮ ವೃತ್ತದಲ್ಲಿ ನಡೆಯುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ ಹಾಗೂ ವೀರ ರಾಣಿ ಕಿತ್ತೂರು ಚೆನ್ನಮ್ಮ ಪ್ರಶಸ್ತಿ ಸಮಾರಂಭವನ್ನು ನಾಳೆ ಸಂಜೆ ೫ ಗಂಟೆಗೆ  ಹಮ್ಮಿಕೊಳ್ಳಲಾಗಿದೆ ಎಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿಯ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಾನಂದ ಮುತ್ತಣ್ಣವರ ಹೇಳಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಧಾರವಾಡದ ಮನಸೂರಿನ ರೇವಣಸಿದ್ದೇಶ್ವರ ಮಠದ ಡಾ. ಬಸವರಾಜ ದೇವರು, ಅಧ್ಯಕ್ಷತೆಯನ್ನು ಎಚ್.ಎಫ್.ಮುದಕಣ್ಣವರ ವಹಿಸಲಿದ್ದು, ಕಾರ್ಯಕ್ರಮದ ನೇತೃತ್ವವನ್ನು ಶಿವಾನಂದ ಜೋಗಿನ ವಹಿಸಲಿದ್ದಾರೆ ಎಂದರು. ಸಮಾರಂಭದ ಉದ್ಘಾಟನೆಯನ್ನು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್  ನೆರವೇರಿಸಲಿದ್ದು, ಪ್ರಶಸ್ತಿ ಪ್ರದಾನದ ಉದ್ಘಾಟನೆಯನ್ನು ಪದ್ಮಶ್ರೀ ಪುರಸ್ಕೃತರಾದ ವಿಜಯ ಸಂಕೇಶ್ವರ ನೆರವೇರಿಸಲಿದ್ದಾರೆ.

ಪತ್ರಿಕಾ ರಂಗದಲ್ಲಿ ಕನ್ನಡಪ್ರಭ ದಿನಪತ್ರಿಕೆಯ ಹಿರಿಯ ವರದಿಗಾರರಾದ ಶಿವಾನಂದ ಗೊಂಬಿ,  ವಿಜಯವಾಣಿ ಕನ್ನಡ ದಿನಪತ್ರಿಕೆಯ ಹಿರಿಯ ವರದಿಗಾರರಾದ ಆನಂದ ಅಂಗಡಿ, ಟಿವಿ ೯ ನ್ಯೂಸ್ ನ ಶಿವಾಜಿ, ಟಿವಿ ಫಸ್ಟ್ ನ ನ್ಯೂಸ್ ನ ಪಾಂಡುರಂಗ್ ಪಾಟೀಲ್, ವಿಜಯ ಕರ್ನಾಟಕ ವರದಿಗಾರರಾದ ರಮೇಶ ಜಾಧವ ಸೇರಿದಂತೆ, ವೈದ್ಯಕೀಯ ಕ್ಷೇತ್ರ, ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ನಿವೃತ್ತ ಸೈನಿಕರು, ಕಲಾವಿದರಿಗೆ, ಉದ್ಯಮ ಕ್ಷೇತ್ರದಲ್ಲಿ, ಪೊಲೀಸ್ ಇಲಾಖೆಯಲ್ಲಿ ಸೇವೆ, ರಕ್ತದಾನದಲ್ಲಿ ಸೇವೆ ಸಲ್ಲಿಸಿದವರಿಗೆ ಸಂಗೊಳ್ಳಿ  ರಾಯಣ್ಣ ಪ್ರಶಸ್ತಿ ನೀಡಲಾಗುವುದು. ಇನ್ನೂ ಸಾಮಾಜಿಕ ಸೇವೆ, ಪೊಲೀಸ್ ಇಲಾಖೆ, ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರಿಗೆ ವೀರರಾಣಿ ಕಿತ್ತೂರ ಚೆನ್ನಮ್ಮ ಪ್ರಶಸ್ತಿ ನೀಡಲಾಗುವುದು ಎಂದವರು ಒಟ್ಟು ೩೫ ಜನರಿಗೆ ಪ್ರಶಸ್ತಿ ನೀಡಲಾಗುವುದು ಎಂದರು.

ಬಳಿಕ ದೇಶಭಕ್ತಿ, ನಾಡಗೀತೆ, ಜಾನಪದ ಗೀತೆ ಹಾಗೂ ಸುಮಧುರ ಸಂಗೀತ ಕಾರ್ಯಕ್ರಮದ ಉದ್ಘಾಟನೆಯನ್ನು ಮಹೇಶ ಟೆಂಗಿನಕಾಯಿ ಅವರು ನೆರವೇರಿಸಲಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಪ್ರಭು ನವಲಗುಂದಮಠ, ಸಹದೇವ ಚಾಕಲಬ್ಬಿ, ಮಲ್ಲಿಕಾರ್ಜುನ ತಾಲೂರ, ಸರೋಜಾ ಛಬ್ಬಿ, ಗುರು ಚಲವಾದಿ ಉಪಸ್ಥಿತರಿದ್ದರು.

Upendra : ನಟ ಉಪೇಂದ್ರ ಹೇಳಿಕೆ ಶೋಭೆ ತರುವಂತದಲ್ಲ: ಸದಾನಂದ ತೇರದಾಳ

ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ

ಹುಬ್ಬಳ್ಳಿ ಸೈಬರ್ ಕ್ರೈಮ್ ಪ್ರಕರಣ: ಮೂವರು ವಿದ್ಯಾರ್ಥಿಗಳು ಅರೆಸ್ಟ್..

 

- Advertisement -

Latest Posts

Don't Miss