Hubli: ಮಾರುಕಟ್ಟೆಯಲ್ಲಿ ಪಾಲಿಸ್ಟರ್ ಧ್ವಜಗಳ ಭರಾಟೆ: ಖಾದಿ ಉದ್ಯಮಕ್ಕೆ ಆಘಾತ

Hubli: ಹುಬ್ಬಳ್ಳಿ: ಹುಬ್ಬಳ್ಳಿಯ ಬೆಂಗೇರಿಯಲ್ಲಿ ತಯಾರಾಗುವ ರಾಷ್ಟ್ರೀಯ ಖಾದಿ ಧ್ವಜಕ್ಕೆ ತನ್ನದೇ ಆದಂತ ಗೌರವ ಹಾಗೂ ಮಹತ್ವವಿದೆ. ಆದರೆ ಈಗ ಮಾರುಕಟ್ಟೆಯಲ್ಲಿ ಖಾದಿ ಧ್ವಜಗಳೇ ಕಣ್ಮರೆಯಾಗಿದ್ದು, ಪಾಲಿಸ್ಟರ್ ಧ್ವಜದ ಭರಾಟೆ ಜೋರಾಗಿದೆ. ಇದರಿಂದ ಖಾದಿ ಉದ್ಯಮಕ್ಕೆ ಮತ್ತೊಂದು ಆಘಾತ ಎದುರಾಗಿದೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಧ್ವಜ ಸಂಹಿತೆ ತಿದ್ದುಪಡಿ ತಂದಿದ್ದು, ಈಗ ಖಾದಿ ಉದ್ಯಮಕ್ಕೆ ಬಹುದೊಡ್ಡ ಹೊಡೆತ ಬಿದ್ದಿದೆ. ಇದಕ್ಕೆ ಸಾಕ್ಷಿಯಾಗಿರುವುದು ಮಾರುಕಟ್ಟೆಯಲ್ಲಿ ಪಾಲಿಸ್ಟರ್ ಧ್ವಜಗಳ ಭರಾಟೆ.

ರಾಷ್ಟ್ರೀಯ ಧ್ವಜ ತಯಾರಿಸುವ ಬೆಂಗೇರಿ ಖಾದಿ ಗ್ರಾಮೋದ್ಯೋಗದಲ್ಲಿ ಈವರೆಗೆ ಕೇವಲ 49 ಲಕ್ಷ ರೂಪಾಯಿ ವಹಿವಾಟು ಆಗಿದೆ. ರಾಷ್ಟ್ರಧ್ವಜ ಬೇಡಿಕೆ ತೀವ್ರ ಕುಸಿತವಾಗಿದ್ದು, ಆರ್ಥಿಕ ಸಂಕಷ್ಟದಲ್ಲಿ ದೇಶದ ಏಕೈಕ ಧ್ವಜ ತಯಾರಿಕಾ ಘಟಕ ಇರುವುದು ನಿಜಕ್ಕೂ ಆತಂಕಕಾರಿ ಬೆಳವಣಿಗೆ ಆಗಿದೆ. ಅಮೃತ ಮಹೋತ್ಸವದ ಸಂದರ್ಭದಲ್ಲಿ ಹರ್ ಘ‌ರ್ ತಿರಂಗಾ ಅಭಿಯಾನಕ್ಕಾಗಿ ಧ್ವಜ ಸಂಹಿತೆ ತಿದ್ದುಪಡಿ ಮಾಡಲಾಗಿತ್ತು. ಕೇಂದ್ರ ಸರ್ಕಾರವು ಧ್ವಜ ಸಂಹಿತೆ-2002 ಕ್ಕೆ ತಿದ್ದುಪಡಿ ತಂದು, ಪಾಲಿಸ್ಟರ್ ತ್ರಿವರ್ಣ ಧ್ವಜಗಳ ಮಾರಾಟಕ್ಕೆ ಅನುಮತಿ ನೀಡಿದ್ದು, ಈಗ ಖಾದಿ ಧ್ವಜಗಳು ಮಾರುಕಟ್ಟೆಯಲ್ಲಿ ಕಣ್ಮರೆಯಾಗಿದ್ದು, ಪಾಲಿಸ್ಟರ್ ಧ್ವಜಗಳ ಭರಾಟೆಯೇ ಜೋರಾಗಿದೆ.

ಈಗಾಗಲೇ 2 ಕೋಟಿ ರೂಪಾಯಿ ಮೊತ್ತದ ಧ್ವಜಗಳನ್ನು ಹುಬ್ಬಳ್ಳಿಯ ಬೆಂಗೇರಿಯ ಖಾದಿ ಗ್ರಾಮೋದ್ಯೋಗ ಸಂಸ್ಥೆ ಸಿದ್ಧಪಡಿಸಿದೆ. ಆದರೇ ಬೇಡಿಕೆ ಕುಸಿತವಾಗಿದ್ದು, ತಯಾರಕ ಘಟಕದಲ್ಲಿಯೇ ಉಳಿದಿವೆ. ಭಾರತೀಯ ಮಾನಕ ಸಂಸ್ಥೆ (ಬಿಐಎಸ್) ಅನುಮತಿ ಪಡೆದುಕೊಂಡ ಏಕೈಕ ಸಂಸ್ಥೆಯಲ್ಲಿ ತಯಾರಾಗಿರುವ ಧ್ವಜಗಳು, ಪಾಲಿಸ್ಟರ್ ಭರಾಟೆಯಲ್ಲಿ ಆರ್ಥಿಕ ಸಂಕಷ್ಟ ಅನುಭವಿಸುತ್ತಿರುವುದು ವಿಪರ್ಯಾಸಕರ ಸಂಗತಿಯಾಗಿದೆ.

About The Author