Hubli News: ಹುಬ್ಬಳ್ಳಿ: “ಮದ್ದೂರಿನಲ್ಲಿ ಗಣೇಶನ ಮೇಲೆ ಮುಸ್ಲಿಂ ಗುಂಪುಗಳು ಕಲ್ಲು ಎಸೆದಿದ್ದಾರೆ. ಇದು ಅತ್ಯಂತ ಹೇಯ ಕೃತ್ಯ, ಮದ್ದೂರಿನ ಘಟನೆ ಇದು ಮೊದಲಲ್ಲ, ಕೊನೆಯೂ ಅಲ್ಲ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮುಸ್ಲಿಮರ ತುಷ್ಟೀಕರಣವೇ ಹೆಚ್ಚಾಗಿದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾಗಮಂಗಲದಲ್ಲಿಯೂ ಇದೇ ರೀತಿ ಘಟನೆ ನಡೆದಿದೆ. ಮಸೀದಿ ಮೂಲಕ ಕಲ್ಲು ಎಸೆದಿದ್ದರು, ಅಂಗಡಿಗಳನ್ನು ಸುಟ್ಟಿದ್ದರು, ಹಿಂದುಗಳ ಮೇಲೆ ದಾಳಿ ನಡೆಸಿದ್ದರು. ಸಾಗರದಲ್ಲಿ ಮಹಡಿಯಲ್ಲಿ ನಿಂತು ಮುಸ್ಲಿಂ ಹುಡುಗರು ಗಣಪತಿ ಮೇಲೆ ಉಗುಳಿದ್ದರು.
ಮುಸ್ಲಿಂರು ಮೂರ್ತಿಪೂಜೆಯ ವಿರೋಧಿಗಳು, ಹಳೆ ಹುಬ್ಬಳ್ಳಿ, ಡಿಜೆ ಹಳ್ಳಿ, ಕೆ.ಜೆ. ಹಳ್ಳಿ ಪ್ರಕರಣಗಳನ್ನು ವಾಪಸು ಪಡೆದ ಸರ್ಕಾರವೇ ಮುಸ್ಲಿಮರಿಗೆ ಪ್ರಚೋದನೆ ನೀಡುತ್ತಿದೆ. ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅಲ್ಪಸಂಖ್ಯಾತರ ತುಷ್ಟೀಕರಣ ಹೆಚ್ಚಾಗಿದೆ ಎಂದು ಗಂಭೀರವಾಗಿ ಆರೋಪಿಸಿದರು.
“ಯಾರು ದಾಳಿ ಮಾಡುತ್ತಾರೆ, ಅವರ ಮೇಲೆ ತಕ್ಷಣ ದಾಳಿ ಮಾಡಬೇಕು. ಮನವಿ, ಧರಣಿ ಮಾಡುವುದಿಲ್ಲ, ಮನೆಗೆ ನುಗ್ಗಿ ಹೊಡೆಯುತ್ತೇವೆ ಎಂದು ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.

