ಹುಬ್ಬಳ್ಳಿ: ಇನ್ನೆನು ಕೆಲವೇ ತಿಂಗಳುಗಳಲ್ಲಿ ರಾಷ್ಟ್ರದಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು ರಾಜ್ಯದ ನಾಯಕರು ತಮ್ಮ ಪಕ್ಷವನ್ನು ಕೇಂದ್ರದಲ್ಲಿ ಅಧಿಕಾರಕ್ಕೆ ತರಬೇಕು ಎಂದು ಸದ್ದಿಲ್ಲದೆ ಚುನಾವಣೆಗೆ ಸಿದ್ದತೆಗಳನ್ನು ನಡೆಸಿಕೊಳ್ಳುತ್ತಿವೆ. ಸದ್ದಿಲ್ಲದೆ ಪಕ್ಷಗಳು ಆಪರೇಶನ್ ಶುರುಮಾಡಿಕೊಂಡಿವೆ.
ಚುನಾವಣೆ ಸಮೀಪಿಸುತ್ತಿದ್ದಂತೆ ಧಾರವಾಡ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆ ಸದ್ದಿಲ್ಲದೆ ಶುರುವಾಗಿದೆ. ಕಾಂಗ್ರೆಸ್ ನಾಯಕರು ಬಿಜೆಪಿಯ ಇಬ್ಬರು ಪ್ರಭಾವಿ ಮಾಜಿ ಶಾಸಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಮಾಜಿ ಶಾಸಕರಿಗೆ ಗಾಳ ಹಾಕುತ್ತಿದೆ. ಪಕ್ಷದಲ್ಲಿ ನಾಯಕರ ಬಲ ಹೆಚ್ಚಿಸಿಕೊಂಡು ಹಾಲಿ ಕೇಂದ್ರ ಸಚಿವ ಮತ್ತು ಸಂಸದರಾದ ಪ್ರಹ್ಲಾದ್ ಜೋಶಿಯವರನ್ನು ಚುನಾವಣೆಯಲ್ಲಿ ಸೋಲಿಸಲು ಕಾಂಗ್ರೆಸ್ ತಾಲೀಮು ನಡೆಸಿದೆ.
ಕುಂದಗೋಳದ ಬಿಜೆಪಿ ಮಾಜಿ ಶಾಸಕ ಎಸ್ ಐ ಚಿಕ್ಕನಗೌಡ್ರ ಹಾಗೂ ನವಲಗುಂದದ ಮಾಜಿ ಶಾಸಕ, ಶಂಕರ ಪಾಟೀಲ್ ಮುನೇನಕೊಪ್ಪರನ್ನು ಕಾಂಗ್ರೇಸ್ ಮುಖಂಡರು ಈಗಾಗಲೇ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಇವರನ್ನು ಕರೆತರುವ ಜವಾಬ್ದಾರಿಯನ್ನು ಜಗದೀಶ ಶೆಟ್ಟರ ಹೆಗಲಿಗೆ ವಹಿಸಲಾಗಿದೆ.
ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಚಿಕ್ಕನಗೌಡ್ರ, ಕಾಂಗ್ರೆಸ್ ಸೇರ್ಪಡೆಯಾಗ್ತಾರೆ ಅನ್ನೋದನ್ನ ಕೇಳಿದ್ದೇನೆ ಎಂದಿದ್ದಾರೆ. ಮಾಜಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಕಾಂಗ್ರೇಸ್ಸಿಗೆ ಬರೋದಾದ್ರೆ ಅವರನ್ನು ಸ್ವಾಗತಿಸುತ್ತೇವೆ ಎಂದಿದ್ದಾರೆ. ಈ ಹೇಳಿಕೆ ಹೇಳುವ ಮೂಲಕ ಆಪರೇಷನ್ ನಡೆದಿರುವ ಸಂದೇಶ ರವಾನಿಸಿದ್ದಾರೆ.
Vikrama (Chandrayana-3) ಬಾಹ್ಯಾಕಾಶ ನೌಕೆಯಿಂದ ಯಶಸ್ವಿಯಾಗಿ ಪ್ರತ್ಯೆಕವಾದ ಚಂದ್ರಯಾನ-3
Gas tanker: ಸೇತುವೆ ಕೆಳಗೆ ಸಿಲುಕಿಕೊಂಡ ಟ್ಯಾಂಕರ್: ಟ್ಯಾಂಕರ್ ನಲ್ಲಿ ಗ್ಯಾಸ್ ಖಾಲಿ ಆಗುವವರೆಗೆ ರಸ್ತೆ ತಡೆ..!