Friday, August 29, 2025

Latest Posts

Hubli: ಒಬ್ಬ ಯೂಟ್ಯೂಬರ್ ನಂಬಿ ಕಾಂಗ್ರೆಸ್ ಹಳ್ಳಕ್ಕೆ ಬಿದ್ದಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ

- Advertisement -

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸುದ್ದಿಗೊಷ್ಠಿ ನಡೆಸಿದ್ದು,  ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಯಾವುದೇ ಸಹಕಾರಣ ಇಲ್ಲದೆ ಸಂಸತ್ತಿನ ಅಧಿವೇಶನ ಜಾಸ್ತಿ ನಡೆಯಲು ಬಿಟ್ಟಿಲ್ಲ ಎಂದು ಆರೋಪಿಸಿದ್ದಾರೆ.

ಷೆಡ್ಯೂಲ್ ಟ್ರೈಬ್, ನ್ಯಾಷನಲ್ ಸ್ಪೋರ್ಟ್ಸ್ ಬಿಲ್ ಚರ್ಚೆ ಆಗಬೇಕಿತ್ತು ಇದಕ್ಕೆ ಕಾಂಗ್ರೆಸ್ ಅನುವು ಮಾಡಿಕೊಟ್ಟಿಲ್ಲ. 2030 ರಲ್ಲಿ ಕಾಮನ್‌ವೆಲ್ತ್ ಹಾಗೂ ಒಲಂಪಿಕ್ ಕ್ರೀಡಾಕೂಟ ಆಯೋಜನೆ ಮಾಡುವ ಗುರಿ ಭಾರತ ಸರ್ಕಾರಕ್ಕಿದೆ. ಕಲಂ 239, 164 ಸಾಂವಿಧಾನಿಕ ನಿರ್ಧಾರ ತೆಗೆದುಕೊಳ್ಳಬೇಕಿತ್ತು. ಇದರ ಚರ್ಚೆಗೆ ಕಾಂಗ್ರೆಸ್ ಅವಕಾಶ ಕೊಡಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಮೂಲ ಪ್ರಜಾಪ್ರಭುತ್ವದ ಬಗ್ಗೆ ಗೌರವ ಇಲ್ಲ ಎಂದು ಜೋಶಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಟ್ರ್ಯಾಕ್ ರೆಕಾರ್ಡ್ ಬಹಳಷ್ಟು ಭೀಕರವಾಗಿದೆ. ಭಯೋತ್ಪಾದಕ ಸಂಘಟನೆ, ಭಯೋತ್ಪಾದನೆಕರ ವಿಚಾರದಲ್ಲಿ ಕಾಂಗ್ರೆಸ್ ಬಹಳಷ್ಟು ಕೆಳಮಟ್ಟದಲ್ಲಿ ನಡೆದುಕೊಂಡಿದೆ. ಈ ಬಾರಿ ಸಂಸತ್ತಿನ ಅಧಿವೇಶನದಲ್ಲಿ ಕಾಂಗ್ರೆಸ್ ಬಂಡವಾಳ ಕಳಚಿದೆ. ಅದರ ಸಿಟ್ಟಿಗೆ ಇಲ್ಲಸಲ್ಲದ ವಿಚಾರ ಚರ್ಚೆಗೆ ಅವಕಾಶ ಕೇಳಿದ್ರು. ಮತದಾನರ ಗುರುತಿನ ಚೀಟಿಯಲ್ಲಿ ಸಣ್ಣ ಪುಟ್ಟ ಪ್ರಿಂಟಿಂಗ್ ಸಮಸ್ಯೆ ಆಗಿರುತ್ತೆ.

ಈ ಬಾರಿ ಒಟ್ಟು 13 ಬಿಲ್ ಪಾಸ್ ಮಾಡಲಾಗಿದೆ. ಎರಡು ಬಿಲ್ ಸಲೆಕ್ಷನ್ ಕಮಿಟಿಗೆ ಕಳುಹಿಸಲಾಗಿದೆ. ದೇಶದ ಸಂಸತ್ತನ್ನು ಒತ್ತೆಯಾಳಾಗಿಟ್ಟುವ ಪ್ರಯತ್ನ ಕಾಂಗ್ರೆಸ್ ಮಾಡುತ್ತಿದೆ. ಇಂತಹ ನಿರ್ಲಜ್ಜನ ಅಧಿಕಾರಕ್ಕೆ ಬರುತ್ತಾರೆ ಅಂತ ಸಂವಿಧಾನದ ಬರೆದವರಿಗೆ ಐಡಿಯಾ ಇರಲಿಲ್ಲ. ಸಂಸತ್ತನ್ನು ದುರುಪಯೋಗ ಮಾಡಿಕೊಂಡು, ಕಾಂಗ್ರೆಸ್ ಪಕ್ಷ ಹತಾಶೆಯಿಂದ ವರ್ತನೆ ಮಾಡುತ್ತಿದೆ. ಇದೇ ರೀತಿ ಮುಂದುವರಿದ್ರೆ ದೇಶದಲ್ಲಿ ನೀವು ಜೀರೋ ಆಗತ್ತೀರಿ ಎಂದು ಜೋಶಿ ವಾಗ್ದಾಳಿ ನಡೆಸಿದ್ದಾರೆ.

ಹಿಂದೂಧಾರ್ಮಿಕ ಭಾವನೆ ಮೇಲೆ ಟೂಲ್ ಕಿಟ್ ಪಡೆದು ಈ ದಾಳಿ ಮಾಡಿದೆ. ಎಡಪಂಥೀಯರು ಟೂಲ್ ಕಿಟ್ ಪಡೆದಿದ್ದಾರೆ ಇದಕ್ಕೆ ಕಾಂಗ್ರೆಸ್ ಸಹಾಯ ಮಾಡಿದೆ. ಇದಕ್ಕೆ ಕಾಣದ ಕೈಗಳಿವೆ ಇದನ್ನು ಮೊದಲು ಪತ್ತೆಹಚ್ಚಬೇಕು. ರಾಜ್ಯ ಸರ್ಕಾರದಲ್ಲಿದ್ದವರೆ ಷಂಡ್ಯಂತ್ರ ಭಾಗವಾಗಿದ್ದಾರೆ ಎಂದು ಪ್ರಹ್ಲಾದ್ ಜೋಶಿ ಗಂಭೀರ ಆರೋಪ ಮಾಡಿದ್ದಾರೆ.

ಧರ್ಮಸ್ಥಳ ವಿಚಾರ ಬುದ್ಧಿ ಇಲ್ಲದೆ ವರ್ತನೆ ಕಾಂಗ್ರೆಸ್ ತೋರುತ್ತಿದೆ. ಕಾಮಸೆನ್ಸ್ ಇಲ್ಲ ಕಾಂಗ್ರೆಸ್ ಸರ್ಕಾರಕ್ಕೆ. ಎಸ್ ಐಟಿ ಮಾಡಿ ಅಂತ ಯಾರು ಹೇಳಿದ್ದರು ನಿಮಗೆ..? ಒಬ್ಬ ಯೂಟ್ಯೂಬರ್ ನಂಬಿ ಕಾಂಗ್ರೆಸ್ ಹಳ್ಳಕ್ಕೆ ಬಿದ್ದಿದೆ. ಅತ್ಯಂತ ಬುದ್ಧಿ ಹೀನರು ಸಹ ಈ ರೀತಿ ನಡೆದುಕೊಳ್ಳುವುದಿಲ್ಲ. ವಿದೇಶದಲ್ಲಿ ಧರ್ಮಸ್ಥಳ ಬಗ್ಗೆ ಅಪಪ್ರಚಾರ ನಡೆಯುತ್ತಿದೆ.

ಎಸ್ ಐಟಿ ಅಧಿಕಾರಿಗಳ ಮೇಲೆ ಕನಿಕರ ಮೂಡುತ್ತಿದೆ. ಯಾರೋ ಹೇಳಿದ್ರಂತ ದೊಡ್ಡ ದೊಡ್ಡ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಎನ್ ಐ ಬರುವ ಸಾಧ್ಯತೆ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ‌ಎಸ್ ಐಟಿ ಬಗ್ಗೆ ಹೈಕೋರ್ಟ್ ನೇತೃತ್ವದಲ್ಲಿ ತನಿಖೆ ಮೊದಲು ಆಗಬೇಕು. ಹಿಂದೂ ಧರ್ಮ ಸಂಸ್ಕೃತಿ ನಾಶ ಮಾಡಲು ಪ್ಲಾನ್ ಮಾಡಿ ಹೀಗೆ ಮಾಡಲಾಗುತ್ತಿದೆ. ಭಯೋತ್ಪಾದಕ ಚಟುವಟಿಕೆ ಇದ್ದ್ರೆ ಮಾತ್ರ ಕೇಂದ್ರ ತನಿಖಾ ಸಂಸ್ಥೆಗಳು ಎಂಟ್ರಿಯಾಗುತ್ತಿವೆ ಎಂದು ಜೋಶಿ ವಾಗ್ದಾಳಿ ನಡೆಸಿದ್ದಾರೆ.

- Advertisement -

Latest Posts

Don't Miss