Tuesday, July 22, 2025

Latest Posts

Hubli: 4 ಜನರ ಮೇಲೆ ಗುಂಡಾ ಕಾಯ್ದೆ ಹಾಕಿದ ಪೋಲೀಸರ ಕ್ರಮಕ್ಕೆ ನ್ಯಾಯಾಲಯ ಅಸ್ತು

- Advertisement -

Hubli: ಹುಬ್ಬಳ್ಳಿ: 4 ಜನರ ಮೇಲೆ ಗುಂಡಾ ಕಾಯ್ದೆ ಹಾಕಿದ ಪೋಲೀಸರ ಕ್ರಮಕ್ಕೆ ನ್ಯಾಯಾಲಯ ಅಸ್ತು ಎಂದಿದೆ. ಹು-ಧಾದಲ್ಲಿ ನಿರಂತರವಾಗಿ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿದ್ದವರ ಮೇಲೆ ಕಮಿಷನರ್ ಶಶಿಕುಮಾರ್ ಗುಂಡಾ ಕಾಯ್ದೆ ಹಾಕಿದ್ದರು. ಹು-ಧಾ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಗೂಂಡಾ ಕಾಯ್ದೆಯಡಿ 4 ಜನರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇದಾದ ಬಳಿಕ ಮಾಧ್ಯಮದ ಜತೆ ಮಾತನಾಡಿರುವ ಕಮಿಷನರ್, ರೌಡಿ, ಗುಂಡಾ ಚಟುವಟಿಕೆ ನಿಯಂತ್ರಣ ಮಾಡಲು ಹಲವು ಕ್ರಮ ಕೈಗೊಂಡಿದ್ದೇವೆ. 700 ಕ್ಕೂ ಅಧಿಕ ರೌಡಿಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಕಾಲ ಕಾಲಕ್ಕೆ ರೌಡಿ ಶೀಟರ್ ಗಳ ಚಲನವಲನ ಗಮನಿಸುವ ಕೆಲಸ ಮಾಡ್ತಾ ಇದ್ದಾರೆ. ಅಹಿತಕರ ಘಟನೆಗಳಲ್ಲಿ ಭಾಗಿಯಾಗದಂತೆ ಕ್ರಮ ಕೈಗೊಂಡಿದ್ದೇವೆ.

ಈ ವರ್ಷ 83 ಜನರನ್ನ ಗಡಿಪಾರು ಹಾಗೂ 4 ಜನರ ಮೇಲೆ ಗುಂಡಾ ಕಾಯ್ದೆ ಹಾಕಲಾಗಿದೆ.
ಸಾಗರ ಲಕ್ಕುಂಡಿ, ಲಕ್ಷ್ಮಣ್ @ಗಭ್ಯಾ ಬಳ್ಳಾರಿ, ಮಂಜುನಾಥ್ @ ಸೈಂಟಿಸ್ಟ್ ಮಂಜ ಭಂಡಾರಿ, ದಾವೂದ್ ನದಾಫ್ ಮೇಲೆ ಗುಂಡಾ ಕಾಯ್ದೆ ಜಾರಿ ಮಾಡಿದ್ದೇವೆ. ರಾಜ್ಯದ ಬೇರೆ ಬೇರೆ ಪ್ರದೇಶಗಳಿಗೆ ಇವರನ್ನ ಕಳುಹಿಸಲಾಗಿತ್ತು. ಉಚ್ಚ ನ್ಯಾಯಾಲಯದಲ್ಲಿ ಸಲಹಾ ಮಂಡಳಿಯಲ್ಲಿ ಚೆಕ್ ಮಾಡ್ತಾರೆ. ಈ ನಾಲ್ಕು ಜನರ ಮೇಲೆ ತೆಗೆದುಕೊಂಡ ಕ್ರಮ ಸರಿಯಾಗಿದೆ ಅಂತ ಹೇಳಿದೆ. ಇವರನ್ನ ಒಂದು ವರ್ಷಗಳ ಕಾಲ ನ್ಯಾಯಾಗ ಬಂಧನದಲ್ಲಿದಲಾಗುತ್ತೆ. ಅವರೊಂದಿಗೆ ಸಂಪರ್ಕದಲ್ಲಿರುವವರ ಮೇಲೆ ಸಹ ನಿಗಾ ಇಡಲಾಗುತ್ತೆ.

ಮಾದಕ ವಸ್ತುಗಳಲ್ಲಿ ತೊಡಗಿಕೊಂಡವರ 18 ಜನರ ಮೇಲೆ ಗಡಿಪಾರು ಆದೇಶ ಮಾಡಲಾಗಿದೆ. ಬೇರೆ ಬೇರೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದವರ ಮೇಲೆ ಗಡಿಪಾರು ಆದೇಶ ಮಾಡಲು ನಿರ್ಧಾರ ಮಾಡಿದ್ದೇವೆ. ಬೆಂಡಿಗೇರಿ, ಹಳೆ ಹುಬ್ಬಳ್ಳಿ, ಶಹರ ಹಾಗೂ ಕೇಶ್ವಾಪುರ ಠಾಣೆಗಳಲ್ಲಿ ಗಡಿಪಾರು ಮಾಡಲಾಗಿದೆ. ಹಾಗೆ ಠಾಣಾವಾರು ಈಗಾಗಲೇ ಗಡಿಪಾರು ಮಾಡಲು ಸಿದ್ದ ಮಾಡಿದ್ದೇವೆ. 370ಕ್ಕೂ ಹೆಚ್ಚಿನ ರೌಡಿಶೀಟರ್ ಗಳನ್ನ ಕ್ಲೋಸ್ ಮಾಡಿದ್ದೇವೆ. 100 ರೌಡಿ ಶೀಟರ್ ಗಳನ್ನ ಸಹ ಓಪನ್ ಮಾಡಿದ್ದೇವೆ. ನಮ್ಮಲ್ಲಿ ಪೊಲೀಸ್ ಇಲಾಖೆ ಸಿಬ್ಬಂದಿ 1,500 ರಷ್ಟು ಇದ್ದಾರೆ. ನಮ್ಮಲ್ಲಿ ಸಿಬ್ಬಂದಿಗಳು ಸಹ ಹೆಚ್ಚಾಗಿದ್ದಾರೆ. ಏನು ಕ್ರಮ ಕೈಗೊಳ್ಳಬೇಕು ನಾವು ಕೈಗೊಳ್ತೆವೆ ಎಂದು ಕಮಿಷನರ್ ಹೇಳಿದ್ದಾರೆ.

- Advertisement -

Latest Posts

Don't Miss