Hubli: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾರನ್ನು ಭೇಟಿ ಮಾಡಿದ ಸಂತರ ನಿಯೋಗ

Hubli News: ಭಾರತೀಯ ಮಠ, ಮಂದಿರದ ಮೇಲೆ ನಾಸ್ತಿಕರ ದಾಳಿ ನಡೆಯುತ್ತಿದೆ. ಋಷಿಮುನಿಗಳು ಕಟ್ಟಿದ ಸಂಸ್ಕೃತಿ ಹಾಳಾಗಬಾರದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಇದನ್ನು ತಡೆಯಲು ಹೊಸ ಕಾನೂನು ರಚನೆ ಮಾಡಬೇಕು ಎಂದು ಮನವಿ ಮಾಡಿದ್ದು ಅವರು ಸಂತೋಷದಿಂದ ಒಪ್ಪಿಕೊಂಡಿದ್ದಾರೆ ಎಂದು ಜೈನ ಮುನಿ ಗುಣದರನಂದಿ ಶ್ರೀ ಹೇಳಿದ್ದಾರೆ.

ವರೂರಿನ ನವಗೃಹ ತೀರ್ಥ ಕ್ಷೇತ್ರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸ ಕಾನೂನು ರಚನೆ ಮಾಡಬೇಕು ಎಂಬ ಉದ್ದೇಶದಿಂದ ಅವರನ್ನು ಭೇಟಿ ಮಾಡಿದೆವು. ಅವರೂ ಕಾನೂನಿನ ರಚನೆಗೆ ಭರವಸೆ ಸಹ ನೀಡಿದ್ದಾರೆ ಎಂದು ತಿಳಿಸಿದರು .

ಸೆಪ್ಟೆಂಬರ್ 10ರಂದು ಸಾದು-ಸಂತರು ಧರ್ಮಸ್ಥಳ ಚಲೋ ನಡೆಸಲಿದ್ದೇವೆ. ಈ ವೇಳೆ ಧಾರ್ಮಿಕ ಕ್ಷೇತ್ರಕ್ಕೆ ಅವಮಾನ ಅಪಮಾನ ದೂರಾಗಲಿ ಎಂದು ಮಹಾ ಆರತಿ ಮತ್ತು ಮಹಾ ಪೂಜೆ ಕೈಗೊಂಡು ವೀರೇಂದ್ರೆ ಹೆಗಡೆ ಅವರಿಗೆ ಆಶಿರ್ವಾದ ಮಾಡಲಿದ್ದೇವೆ. ಎಲ್ಲ ತಾಲೂಕು ಕೇಂದ್ರದಿಂದ ನೂರಾರು ಸಂಖ್ಯೆಯಲ್ಲಿ ಸ್ವಾಮಿಗಳು, ಮಠಾಧೀಶರು, ಸಾಧು ಸಂತರು ಧರ್ಮಸ್ಥಳಕ್ಕೆ ತೆರಳಲಿದ್ದೇವೆ. ಧರ್ಮಸ್ಥಳದಲ್ಲಿ ಸಾದು-ಸಂತರಿಂದ ಮಹಾ ಆರತಿ, ಅಭಿಷೇಕ, ಶಿವನ ಅರ್ಚನೆ ಮಾಡುತ್ತೇವೆ. ಸಾಮಾಜಿಕ ಜಾಲತಾಣ, ಯುಟ್ಯೂಬ್ ಗಳಲ್ಲಿ ಹಲವಾರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಇನ್ನೂ ಕೆಲವರು ಆಧಾರ ಇಲ್ಲದೆ ಸುದ್ದಿ ಮಾಡುತ್ತಿದ್ದಾರೆ.

ಅದಕ್ಕೆ ಕಡಿವಾಣ ಹಾಕುವುದರ ಬಗ್ಗೆ ಮನವಿ ನಿಯೋಗ ಮಾಡಿಕೊಂಡಿದೆ. ಅದರ ಕಡಿವಾಣಕ್ಕೂ ಕಾನೂನು ತರಲು ಗೃಹ ಸಚಿವರು ಭರವಸೆ ನೀಡಿದ್ದಾರೆ. ಸಾದು ಸಂತರ ಮೇಲೆ ಹಲವೆಡೆ ಹಲ್ಲೆ ಆಗುತ್ತಿದೆ. ಅದಕ್ಕೆ ಭದ್ರತೆ ನೀಡಬೇಕು ಅಂತಾ ಸಹ ಮನವಿ ಮಾಡಿಕೊಂಡಿದ್ದೇವೆ. ಬಿ.ಎಲ್. ಸಂತೋಷ, ಪ್ರಲ್ಹಾದ ಜೋಶಿ ಸಹ ಅಲ್ಲೇ ಇದ್ದರು .ಧಾರ್ಮಿಕ ತೇಜೋವದೆ ಮಾಡುವವರ ಮೇಲೆ ಖಡಕ್ ಕಾನೂನು ತರಬೇಕಿದೆ. ಅದರ ಬಗ್ಗೆಯೂ ಸಹ ಕಾನೂನು ತರುವ ಕೆಲಸ ಮಾಡ್ತೇವೆ ಎಂದು ಹೇಳಿದ್ದಾರೆ.

ಜತೆಗೆ ಸನಾತನ ಸಂಸ್ಕೃತಿಯ ಧರ್ಮಸ್ಥಳದ ಬಗ್ಗೆ ಷಡ್ಯಂತ್ರ ಆಗುತ್ತಿದೆ. ದೇಶದಲ್ಲೇ ಇಂತಹ ಷಡ್ಯಂತ್ರ ಆಗಿಲ್ಲ. ಭಕ್ತರ ಭಾವನೆ ಸುಡುವ ಪ್ರಯತ್ನ ಆಗಿದೆ. ನನ್ನ ಗಮನಕ್ಕೆ ಇದೆ ಎಂದು ಅಮಿತ್ ಹೇಳಿದ್ದಾರೆ. ಕೇಂದ್ರದಿಂದ ರಾಜ್ಯಕ್ಕೆ ಹೇಳಿ ರಿಪೋರ್ಟ್ ತರೆಸಿಕೊಳ್ತೇನೆ ಎಂದಿದ್ದು, ಸೆ. 8ರಂದು ವೀರೇಂದ್ರ ಹೆಗಡೆಯವರನ್ನ ಕರೆಯಿಸಿ ಭೇಟಿ ಆಗ್ತೇನೆ ಅಂದಿದ್ದಾರೆ. ಎಸ್ಐಟಿ ಗೆ ಅಮಿತ್ ಶಾ ಅವರು ವಿರೋಧ ಮಾಡಿಲ್ಲ ಎಂದು ತಿಳಿಸಿದರು.

About The Author